Aamir Khan: ವಿರೋಧದ ನಡುವೆಯೂ ‘ಆಸ್ಕರ್​’ ಗಮನ ಸೆಳೆದ ‘ಲಾಲ್​ ಸಿಂಗ್​ ಚಡ್ಡಾ’; ಆಮಿರ್​ ಖಾನ್​ ಫ್ಯಾನ್ಸ್​ ಖುಷ್​

Oscar Awards | Laal Singh Chaddha: 1994ರಲ್ಲಿ ತೆರೆಕಂಡ ‘ಫಾರೆಸ್ಟ್​ ಗಂಪ್​’ ಚಿತ್ರ 6 ಆಸ್ಕರ್​ ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು. ಅದೇ ಸಿನಿಮಾವನ್ನು ‘ಲಾಲ್​ ಸಿಂಗ್​ ಚಡ್ಡಾ’ ಶೀರ್ಷಿಕೆಯಲ್ಲಿ ಆಮಿರ್​ ಖಾನ್​ ಹಿಂದಿಗೆ ರಿಮೇಕ್​ ಮಾಡಿದ್ದಾರೆ.

Aamir Khan: ವಿರೋಧದ ನಡುವೆಯೂ ‘ಆಸ್ಕರ್​’ ಗಮನ ಸೆಳೆದ ‘ಲಾಲ್​ ಸಿಂಗ್​ ಚಡ್ಡಾ’; ಆಮಿರ್​ ಖಾನ್​ ಫ್ಯಾನ್ಸ್​ ಖುಷ್​
ಕರೀನಾ ಕಪೂರ್ ಖಾನ್, ಆಮಿರ್ ಖಾನ್
Follow us
TV9 Web
| Updated By: ಮದನ್​ ಕುಮಾರ್​

Updated on:Aug 13, 2022 | 4:50 PM

ನಟ ಆಮಿರ್​ ಖಾನ್​ (Aamir Khan) ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಕಾಂಟ್ರವರ್ಸಿ ಕಾರಣದಿಂದ ಸುದ್ದಿ ಆಗುವುದು ಹೆಚ್ಚಿದೆ. ಒಂದು ಕಾಲದಲ್ಲಿ ‘ಲಗಾನ್​’, ‘ಮಂಗಲ್​ ಪಾಂಡೆ’, ‘ರಂಗ್​ ದೇ ಬಸಂತಿ’ ಮುಂತಾದ ದೇಶಭಕ್ತಿ ಸಿನಿಮಾ ಮಾಡಿದ ಅವರು ಈಗ ದೇಶವಿರೋಧಿ ಎಂಬ ರೀತಿಯಲ್ಲಿ ಬಿಂಬಿಸಲ್ಪಡುತ್ತಿದ್ದಾರೆ. ಅದೇ ಕಾರಣಕ್ಕಾಗಿ ಆಮಿರ್​ ಖಾನ್​ ನಟನೆಯ ‘ಲಾಲ್​ ಸಿಂಗ್​ ಚಡ್ಡಾ’ (Laal Singh Chaddha) ಸಿನಿಮಾಗೆ ಜನರಿಂದ ವಿರೋಧ ವ್ಯಕ್ತವಾಗಿದೆ. ಈ ಹಿಂದೆ ಅಸಹಿಷ್ಣತೆ ಕುರಿತು ಆಮಿರ್ ಖಾನ್​ ನೀಡಿದ್ದ ಹೇಳಿಕೆಯನ್ನೇ ಇಟ್ಟುಕೊಂಡು ಈಗಲೂ ಅವರ ಚಿತ್ರವನ್ನು ಬಹಿಷ್ಕರಿಸುವ ಟ್ರೆಂಡ್​ ಜಾರಿಯಲ್ಲಿದೆ. ‘ಲಾಲ್​ ಸಿಂಗ್​ ಚಡ್ಡಾ’ ಚಿತ್ರಕ್ಕೂ ಬಹಿಷ್ಕಾರದ ಬಿಸಿ ತಟ್ಟಿದೆ. ಇದರ ನಡುವೆಯೂ ಈ ಸಿನಿಮಾ ‘ಆಸ್ಕರ್​’ (Oscar) ಸಂಸ್ಥೆಯ ಗಮನ ಸೆಳೆದಿದೆ. ಇದರಿಂದ ಆಮಿರ್​ ಖಾನ್​ ಅಭಿಮಾನಿಗಳು ಖುಷಿ ಆಗಿದ್ದಾರೆ.

ಈಗಾಗಲೇ ತಿಳಿದಿರುವಂತೆ ಹಾಲಿವುಡ್​ನ ‘ಫಾರೆಸ್ಟ್​ ಗಂಪ್​’ ಸಿನಿಮಾದ ಹಿಂದಿ ರಿಮೇಕ್​ ಆಗಿ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ಮೂಡಿಬಂದಿದೆ. ಇಂಗ್ಲಿಷ್​ನಲ್ಲಿ ಟಾಮ್​ ಹ್ಯಾಂಕ್ಸ್​ ಮಾಡಿದ ಪಾತ್ರವನ್ನು ಹಿಂದಿಯಲ್ಲಿ ಆಮಿರ್ ಖಾನ್​ ಮಾಡಿದ್ದಾರೆ. 1994ರಲ್ಲಿ ತೆರೆಕಂಡ ‘ಫಾರೆಸ್ಟ್​ ಗಂಪ್​’ ಚಿತ್ರ 6 ಆಸ್ಕರ್​ ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು. 13 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತ್ತು.

ಇದನ್ನೂ ಓದಿ
Image
Box Office Collection: ಆಮಿರ್​​ Vs ಅಕ್ಷಯ್​​; ಮೊದಲ ದಿನ ‘ಲಾಲ್​ ಸಿಂಗ್​ ಚಡ್ಡಾ’ ಗಳಿಕೆ 12 ಕೋಟಿ ರೂ., ‘ರಕ್ಷಾ ಬಂಧನ್’​ಗೆ 8.20 ಕೋಟಿ
Image
Laal Singh Chaddha Twitter review: ಲಾಲ್​ ಸಿಂಗ್ ಚಡ್ಡಾ ಟ್ವಿಟರ್​ ವಿಮರ್ಶೆ: ಅಮೀರ್ ಅಭಿನಯಕ್ಕೆ ಸಿನಿಪ್ರಿಯರು ಫಿದಾ
Image
Aamir Khan: ದೇಶದ ಜನರ ಕ್ಷಮೆ ಕೇಳಿದ ಆಮಿರ್ ಖಾನ್​; ‘ಲಾಲ್​ ಸಿಂಗ್ ಚಡ್ಡಾ’ ರಿಲೀಸ್​ ವೇಳೆ ಹೊಸ ಹೇಳಿಕೆ
Image
Aamir Khan: ‘ನನಗೆ ಭಾರತ ಇಷ್ಟವಿಲ್ಲ ಅನ್ನೋದು ಸುಳ್ಳು, ನನ್ನ ಸಿನಿಮಾ ಬಹಿಷ್ಕಾರ ಮಾಡಬೇಡಿ ಪ್ಲೀಸ್​’: ಆಮಿರ್​ ಖಾನ್​

‘ಫಾರೆಸ್ಟ್​ ಗಂಪ್​’ ಚಿತ್ರವನ್ನು ಹಿಂದಿಗೆ ರಿಮೇಕ್​ ಮಾಡಿರುವ ರೀತಿಗೆ ಆಸ್ಕರ್​ ಸಂಸ್ಥೆ (ಅಕಾಡೆಮಿ ಆಫ್​ ಮೋಷನ್​ ಪಿಕ್ಚರ್ಸ್​ ಆರ್ಟ್ಸ್​ ಆ್ಯಂಡ್​ ಸೈನ್ಸಸ್​) ಮನಸೋತಿದೆ. ಅದರ ಅಧಿಕೃತ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್​ ಮಾಡಲಾಗಿದೆ. ಎರಡೂ ಸಿನಿಮಾದ ಕೆಲವು ದೃಶ್ಯಗಳು ಹಂಚಿಕೊಳ್ಳಲಾಗಿದೆ.

‘ಲಾಲ್​ ಸಿಂಗ್​ ಚಡ್ಡಾ’ ಚಿತ್ರಕ್ಕೆ ಅದ್ವೈತ್​ ಚಂದನ್​ ನಿರ್ದೇಶನ ಮಾಡಿದ್ದಾರೆ. ಆಮಿರ್ ಖಾನ್​ಗೆ ಜೋಡಿಯಾಗಿ ಕರೀನಾ ಕಪೂರ್​ ಖಾನ್​ ನಟಿಸಿದ್ದಾರೆ. ನಾಗ ಚೈತನ್ಯ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಆಗಸ್ಟ್​ 11ರಂದು ಬಿಡುಗಡೆಯಾದ ಈ ಚಿತ್ರ ಮೊದಲ ದಿನ 11.70 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತು. ಎರಡನೇ ದಿನವಾದ ಶುಕ್ರವಾರ ಕೇವಲ 7.26 ಕೋಟಿ ರೂಪಾಯಿ ಆದಾಯ ಬಂದಿದೆ.

View this post on Instagram

A post shared by The Academy (@theacademy)

ಈ ಸಿನಿಮಾದಲ್ಲಿನ ಕೆಲವು ದೃಶ್ಯಗಳಿಗೆ ವಿರೋಧ ವ್ಯಕ್ತವಾಗುತ್ತಿದೆ. ಭಾರತೀಯ ಸೇನೆಗೆ ಅವಮಾನ ಮಾಡಲಾಗಿದೆ ಎಂದು ದೆಹಲಿ ಮೂಲದ ವಕೀಲರೊಬ್ಬರು ದೂರು ನೀಡಿದ್ದಾರೆ. ಈ ಕಾರಣದಿಂದ ಮುಂದಿನ ದಿನಗಳಲ್ಲಿ ‘ಲಾಲ್​ ಸಿಂ​ಗ್​ ಚಡ್ಡಾ’ ಚಿತ್ರದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:50 pm, Sat, 13 August 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ