ರಮ್ಯಾ ಜತೆಗಿನ ಸಿನಿಮಾ ಬಗ್ಗೆ ವಿಶೇಷ ಮಾಹಿತಿ ನೀಡಿದ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ
Raj B Shetty | Filmfare: ‘ನಾವೆಲ್ಲ ಹಂಸಲೇಖ ಅವರ ಹಾಡುಗಳನ್ನು ಕೇಳಿಕೊಂಡು ಬೆಳೆದವರು’ ಎಂದು ರಾಜ್ ಬಿ. ಶೆಟ್ಟಿ ಹೇಳಿದ್ದಾರೆ. ಫಿಲ್ಮ್ಫೇರ್ ಕಾರ್ಯಕ್ರಮದ ವೇಳೆ ಹಲವು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಫಿಲ್ಮ್ಫೇರ್ ಅವಾರ್ಡ್ಸ್ (Filmfare 2022) ಕಾರ್ಯಕ್ರಮ ನಡೆದಿದೆ. ಭಾನುವಾರ (ಅ.9) ನಡೆದ ಈ ಸಮಾರಂಭಕ್ಕೆ ರಾಜ್ ಬಿ. ಶೆಟ್ಟಿ (Raj B Shetty) ಹಾಜರಿ ಹಾಕಿದರು. ಈ ವೇಳೆ ಅವರು ರಮ್ಯಾ (Ramya) ಜೊತೆಗಿನ ಹೊಸ ಸಿನಿಮಾ ಬಗ್ಗೆ ಒಂದಷ್ಟು ವಿಶೇಷ ಮಾಹಿತಿ ಹಂಚಿಕೊಂಡರು. ಹಂಸಲೇಖ ಅವರ ‘ಸ್ವಾತಿ ಮುತ್ತಿನ ಮಳೆ ಹನಿಯೇ..’ ಗೀತೆಯಿಂದಲೇ ಟೈಟಲ್ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣ ಏನು ಎಂಬುದನ್ನು ರಾಜ್ ಬಿ. ಶೆಟ್ಟಿ ತಿಳಿಸಿದರು. ಇದು ಮಹಿಳಾ ಪ್ರಧಾನ ಸಿನಿಮಾ ಆಗಿರಲಿದೆ ಎಂಬ ವಿಷಯವನ್ನು ಅವರು ಬಿಟ್ಟುಕೊಟ್ಟಿದ್ದಾರೆ. ಜತೆಗೆ ರಮ್ಯಾ ಅವರ ರಿಯಲ್ ಲೈಫ್ ವ್ಯಕ್ತಿತ್ವದ ಬಗ್ಗೆಯೂ ರಾಜ್ ಬಿ. ಶೆಟ್ಟಿ ಮಾತನಾಡಿದ್ದಾರೆ.
Published on: Oct 09, 2022 10:42 PM
Latest Videos