Meghana Raj: ಫಿಲ್ಮ್ಫೇರ್ ಸಮಾರಂಭಕ್ಕೆ ರಾಯನ್ ರಾಜ್ ಸರ್ಜಾ ಯಾಕೆ ಬಂದಿಲ್ಲ? ಕಾರಣ ತಿಳಿಸಿದ ಮೇಘನಾ ರಾಜ್
67th Filmfare Awards: ಬೆಂಗಳೂರಲ್ಲಿ ನಡೆದ ಫಿಲ್ಮ್ಫೇರ್ ಸಮಾರಂಭಕ್ಕೆ ಮೇಘನಾ ರಾಜ್ ಹಾಜರಿ ಹಾಕಿದರು. ಆದರೆ ಅವರ ಪುತ್ರ ರಾಯನ್ ರಾಜ್ ಸರ್ಜಾ ಬಂದಿರಲಿಲ್ಲ.
ನಟಿ ಮೇಘನಾ ರಾಜ್ (Meghana Raj) ಅವರು ಫಿಲ್ಮ್ಫೇರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಾಕ್ಷಿ ಆಗಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ (ಅ.9) ರಾತ್ರಿ ಈ ಅದ್ದೂರಿ ಕಾರ್ಯಕ್ರಮ (Filmfare Awards) ನಡೆಯಿತು. ಕನ್ನಡ, ತೆಲುಗು, ಮಲಯಾಳಂ, ತಮಿಳು ಭಾಷೆಯ ಸೆಲೆಬ್ರಿಟಿಗಳು ಈ ಸಮಾರಂಭದಲ್ಲಿ ಭಾಗಿಯಾದರು. ಮೇಘನಾ ರಾಜ್ ಜೊತೆ ಅವರ ಪುತ್ರ ರಾಯನ್ ರಾಜ್ ಸರ್ಜಾ (Raayan Raj Sarja) ಬಂದಿರಲಿಲ್ಲ. ಯಾಕೆ ಎಂದು ಕೇಳಿದ್ದಕ್ಕೆ, ‘ರಾಯನ್ ಮನೆಯಲ್ಲಿ ಇದ್ದಾನೆ. ಅವನು ಬರಬೇಕಿತ್ತು. ಆದರೆ ಮಳೆಯ ಕಾರಣಕ್ಕೆ ಅವನನ್ನು ಕರೆದುಕೊಂಡು ಬಂದಿಲ್ಲ’ ಎಂದು ಮೇಘನಾ ರಾಜ್ ಹೇಳಿದ್ದಾರೆ. ಚಿರಂಜೀವಿ ಸರ್ಜಾ ಪುತ್ರನಿಗೆ ಅಭಿಮಾನಿಗಳು ವಿಶೇಷ ಪ್ರೀತಿ ತೋರಿಸುತ್ತಾರೆ.
Published on: Oct 10, 2022 09:16 AM
Latest Videos