ಮಂಗಳೂರು ಹತ್ತಿರದ ಕುಂಬಳೆ ಅನಂತ ಪದ್ಮನಾಭ ದೇವಸ್ಥಾನದ ಪ್ರಮುಖ ಆಕರ್ಷಣೆಯಾಗಿದ್ದ ಮೊಸಳೆ ‘ಬಬಿಯಾ’ ವಿಧಿವಶ

ಮಂಗಳೂರು ಹತ್ತಿರದ ಕುಂಬಳೆ ಅನಂತ ಪದ್ಮನಾಭ ದೇವಸ್ಥಾನದ ಪ್ರಮುಖ ಆಕರ್ಷಣೆಯಾಗಿದ್ದ ಮೊಸಳೆ ‘ಬಬಿಯಾ’ ವಿಧಿವಶ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 10, 2022 | 11:48 AM

ಕುಂಬಳೆ ಅನಂತ ಪದ್ಮನಾಭ ದೇವಸ್ಥಾನದ ಕೆರೆಯಲ್ಲಿ ಸುಮಾರು 70 ವರ್ಷಗಳಿಂದ ವಾಸವಾಗಿದ್ದ ಬಬಿಯಾ (Babiya) ಹೆಸರಿನ ಮೊಸಳೆ ಪಕ್ಕಾ ಸಸ್ಯಾಹಾರಿಯಾಗಿತ್ತು.

ಕಾಸರಗೋಡು: ಜಿಲ್ಲೆಯ ಮತ್ತು ಅದರೆ ಕರ್ನಾಟಕ ಗಡಿಭಾಗದ ಮಂಗಳೂರಿಗೆ ಹತ್ತಿರವಿರುವ ಕುಂಬಳೆ ಅನಂತ ಪದ್ಮನಾಭ ದೇವಸ್ಥಾನದ (Anant Padmanabha temple) ಕೆರೆಯಲ್ಲಿ ಕಳೆದ ಸುಮಾರು 70 ವರ್ಷಗಳಿಂದ ವಾಸವಾಗಿದ್ದ ಬಬಿಯಾ (Babiya) ಹೆಸರಿನ ಮೊಸಳೆ ವಿಧಿವಶವಾಗಿದೆ. ಈ ಮೊಸಳೆ ವಿಶೇಷತೆ ಏನು ಗೊತ್ತಾ? ಅದ ಪಕ್ಕಾ ಸಸ್ಯಾಹಾರಿಯಾಗಿತ್ತು. ದೇವಸ್ಥಾನದಲ್ಲಿ ಎರಡು ಬಾರಿ ಪೂಜೆ ನಡೆದ ಬಳಿಕವೇ ಬಬಿಯಾ ನೈವೇದ್ಯ ಸ್ವೀಕರಿಸುತಿತ್ತು. ದೇವಸ್ಥಾನದ ಆವರಣದಲ್ಲೇ ಮೊಸಳೆಯ ಅಂತಿಮ ವಿಧಿವಿಧಾನ (final rites) ನೆರವೇರಿಸಲಾಯಿತು. ಬಬಿಯಾ ಬದುಕಿರುವವರೆಗೆ ದೇವಸ್ಥಾನದ ಪ್ರಮುಖ ಆಕರ್ಷಣೆಯಾಗಿತ್ತು ಅನ್ನೋದು ಉತ್ಪ್ರೇಕ್ಷೆಯ ಮಾತಲ್ಲ.