ವಿಚಿತ್ರ ವೇಷದಲ್ಲಿ ವಿದೇಶಿ ಸೆಲೆಬ್ರಿಟಿಗಳನ್ನು ಭೇಟಿ ಮಾಡಿದ ರಣವೀರ್ ಸಿಂಗ್; ವೈರಲ್ ಆಯ್ತು ಫೋಟೋ

ಫಾರ್ಮುಲಾ 1 ಲೆಜೆಂಡ್ ಫೆಲಿಪಿ ಮಾಸ್ಸಾ ಅವರನ್ನು ರಣವೀರ್ ಭೇಟಿ ಮಾಡಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ತಂಡದ ಆಲ್​ರೌಂಡರ್ ಬೆನ್​ ಸ್ಟೋಕ್ಸ್, ಜೋ ರೂಟ್​, ಬೌಲರ್ ಜೇಮ್ಸ್ ಆ್ಯಂಡ್ರ್ಯೂಸನ್​ ಅವರನ್ನು ರಣವೀರ್ ಭೇಟಿ ಮಾಡಿದ್ದಾರೆ.

ವಿಚಿತ್ರ ವೇಷದಲ್ಲಿ ವಿದೇಶಿ ಸೆಲೆಬ್ರಿಟಿಗಳನ್ನು ಭೇಟಿ ಮಾಡಿದ ರಣವೀರ್ ಸಿಂಗ್; ವೈರಲ್ ಆಯ್ತು ಫೋಟೋ
ರಣವೀರ್ ಸಿಂಗ್
TV9kannada Web Team

| Edited By: Rajesh Duggumane

Nov 22, 2022 | 9:53 AM

ರಣವೀರ್ ಸಿಂಗ್ (Ranveer Singh) ಅವರು ಪಾಪ್ ಸಂಸ್ಕೃತಿ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಚಿತ್ರ ವಿಚಿತ್ರ ಬಟ್ಟೆ ಧರಿಸಿ ಅವರು ಅನೇಕ ಬಾರಿ ಕಾಣಿಸಿಕೊಂಡಿದ್ದು ಇದೆ. ರಣವೀರ್ ಸಿಂಗ್ ಅವರಿಗೆ ಕ್ರಿಕೆಟ್​ ಬಗ್ಗೆ ಹೆಚ್ಚು ಆಸಕ್ತಿ ಇದೆ. ಕ್ರಿಕೆಟ್​ ಸ್ಟೇಡಿಯಂಗೆ ಹಲವು ಬಾರಿ ಬಂದು ಆಟಗಾರರನ್ನು ಚಿಯರ್ ಮಾಡಿದ್ದಾರೆ. ಇತ್ತೀಚೆಗೆ ಎನ್​ಬಿಎ, ಇಪಿಎಲ್​ ಹಾಗೂ ಯುಎಫ್​ಸಿ ಮ್ಯಾಚ್​​ಗಳಲ್ಲಿ ಹಾಜರಿ ಹಾಕಿದ ನಂತರದಲ್ಲಿ ಈಗ ಅವರು ಫಾರ್ಮುಲಾ ಒನ್ (ಎಫ್​ 1) ರೇಸ್​ನಲ್ಲಿ ಭಾಗಿ ಆಗಿದ್ದರು. ಈ ವೇಳೆ ಅವರು ಹಲವು ಸೆಲೆಬ್ರಿಟಿಗಳನ್ನು ಭೇಟಿ ಮಾಡಿದ್ದಾರೆ.

ಫಾರ್ಮುಲಾ 1 ಲೆಜೆಂಡ್ ಫೆಲಿಪಿ ಮಾಸ್ಸಾ ಅವರನ್ನು ರಣವೀರ್ ಭೇಟಿ ಮಾಡಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ತಂಡದ ಆಲ್​ರೌಂಡರ್ ಬೆನ್​ ಸ್ಟೋಕ್ಸ್, ಜೋ ರೂಟ್​, ಬೌಲರ್ ಜೇಮ್ಸ್ ಆ್ಯಂಡ್ರ್ಯೂಸನ್​ ಅವರನ್ನು ರಣವೀರ್ ಭೇಟಿ ಮಾಡಿದ್ದಾರೆ. ಇಂಗ್ಲೆಂಡ್ ಆಟಗಾರ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಬೌಲರ್ ಜೋಫ್ರಾ ಆರ್ಚರ್ ಜತೆ ಐಪಿಎಲ್​ ಬಗ್ಗೆ ರಣವೀರ್ ಸಿಂಗ್ ಮಾತನಾಡಿದ್ದಾರೆ ಎನ್ನಲಾಗಿದೆ. ಜೋಫ್ರಾ ಆರ್ಚರ್ ಅವರು ಗಾಯದ ಸಮಸ್ಯೆಯಿಂದ ಕಳೆದ ಸೀಸನ್​ನಲ್ಲಿ ಆಟ ಆಡಿರಲಿಲ್ಲ.

ವೆಸ್ಟ್​ ಇಂಡೀಸ್ ದಿಗ್ಗಜ ಕ್ರಿಸ್ ಗೇಲ್ ಜತೆಯೂ ರಣವೀರ್ ಕಾಣಿಸಿಕೊಂಡಿದ್ದಾರೆ. ಕ್ರಿಸ್ ಗೇಲ್​ ಅವರು ಹಲವು ವರ್ಷಗಳ ಕಾಲ ಐಪಿಎಲ್ ಆಡಿದ್ದಾರೆ. ಈ ಕಾರಣಕ್ಕೆ ಅವರಿಗೆ ಭಾರತೀಯರ ಮೇಲೆ ವಿಶೇಷ ಪ್ರೀತಿ ಇದೆ. ಈ ಮೊದಲು ಕೂಡ ರಣವೀರ್ ಸಿಂಗ್ ಅವರು ಹಲವು ಬಾರಿ ಕ್ರಿಸ್ ಗೇಲ್​ನ ಭೇಟಿ ಆಗಿದ್ದರು.  ಖ್ಯಾತ ಗಾಯಕ ಏಕಾನ್ ಜತೆಗೂ ರಣವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ.

ರಣವೀರ್ ಸಿಂಗ್ ಅವರು ತೆಗೆದುಕೊಂಡ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ರಣವೀರ್ ಸಿಂಗ್ ಅವರ ಲುಕ್​ಗೆ ಫ್ಯಾನ್ಸ್ ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ರಣವೀರ್ ಸಿಂಗ್ ಅವರು ಹಳದಿ ಡ್ರೆಸ್ ಹಾಕಿ ಕಣ್ಣಿಗೆ ವಿಚಿತ್ರ ಗ್ಲಾಸ್ ಧರಿಸಿದ್ದರು.

ಇದನ್ನೂ ಓದಿ: ‘ನಾನು ವಿವಾದಾತ್ಮಕ ಫೋಟೋ ಅಪ್​ಲೋಡ್ ಮಾಡಿಲ್ಲ’; ಪೊಲೀಸರ ಎದುರು ರಣವೀರ್ ಸಿಂಗ್ ಹೇಳಿಕೆ

ಇದನ್ನೂ ಓದಿ

ರಣವೀರ್ ಸಿಂಗ್ ಅವರಿಗೆ ಇತ್ತೀಚೆಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ‘ಸರ್ಕಸ್​’, ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರಕ್ಕೆ ಕರಣ್ ಜೋಹರ್ ನಿರ್ದೇಶನ ಮಾಡುತ್ತಿದ್ದಾರೆ. ಆಲಿಯಾ ಭಟ್ ಈ ಚಿತ್ರಕ್ಕೆ ನಾಯಕಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada