Viral Video : ರಣವೀರ್ ಸಿಂಗ್ ಅಭಿನಯದ​ ‘ರಾಮ್​ಜೀ ಕೀ ಚಾಲ್​’ ಹಾಡಿಗೆ ದಕ್ಷಿಣ ಕೊರಿಯಾದ ಹೈಕಳ ಹೆಜ್ಜೆ

South Korean : ದಕ್ಷಿಣ ಕೊರಿಯಾದ ಯುವಕಯುವತಿಯರು ರಣವೀರ್ ಸಿಂಗ್ ಅವರ ‘ರಾಮಜೀಕೀ ಚಾಲ್​’ ಸಿನೆಮಾದ ಹಾಡಿಗೆ ನೃತ್ಯ ಮಾಡಿದ ವಿಡಿಯೋ ವೈರಲ್ ಆಗಿದೆ.

Viral Video : ರಣವೀರ್ ಸಿಂಗ್ ಅಭಿನಯದ​ ‘ರಾಮ್​ಜೀ ಕೀ ಚಾಲ್​’ ಹಾಡಿಗೆ ದಕ್ಷಿಣ ಕೊರಿಯಾದ ಹೈಕಳ ಹೆಜ್ಜೆ
ಬಾಲಿವುಡ್ ಹಾಡಿಗೆ ಕೊರಿಯನ್ನರ ನೃತ್ಯ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 12, 2022 | 11:45 AM

Viral Video : ದಕ್ಷಿಣ ಕೊರಿಯಾದ ಯುವಕಯುವತಿಯರು ರಣವೀರ್ ಸಿಂಗ್ ಅವರ ‘ರಾಮಜೀಕೀ ಚಾಲ್​’ ಸಿನೆಮಾದ ಹಾಡಿಗೆ ನೃತ್ಯ ಮಾಡಿದ ವಿಡಿಯೋ ವೈರಲ್ ಆಗಿದೆ. ಇತ್ತೀಚೆಗೆ ಐಎಫ್‌ಎಸ್‌ಸಿಯಲ್ಲಿ ಚುಸೋಕ್ ಹಬ್ಬದ ಹಿನ್ನೆಲೆಯಲ್ಲಿ (Korean thanks giving festival) ಆಯೋಜಿಸಲಾದ ಕಾರ್ಯಕ್ರಮದಲ್ಲಿ ಬಾಲಿವುಡ್ ಹಾಡುಗಳಿಗೆ ನಡೆಸುತ್ತಿರುವ ರಿಹರ್ಸಲ್​ನ ವಿಡಿಯೋ ಇದಾಗಿದೆ. ಬಾಲಿವುಡ್ ಸಿನೆಮಾಗಳಿಗೆ ಮರುಳಾಗದವರು ಯಾರಿದ್ದಾರೆ? ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ವಿದೇಶಿಗರ ಡ್ಯಾನ್ಸ್​ ವಿಡಿಯೋಗಳೇ ಇದಕ್ಕೆ ಸಾಕ್ಷಿ. ಹಾಗೆಯೇ ಭಾರತೀಯರೂ ಕೆ-ಪಾಪ್​ ಜಗತ್ತನ್ನು ಪ್ರೀತಿಸುತ್ತಾರೆ ಎನ್ನುವುದಕ್ಕೆ ನಮ್ಮಲ್ಲಿ ಸಾಕಷ್ಟು ಪುರಾವೆಗಳಿವೆ. ಆನ್​ಲೈನ್​ ಹೊಕ್ಕರೆ ಮಿಲಿಯನ್​ಗಟ್ಟಲೆ ವಿಡಿಯೋಗಳನ್ನು ಕಾಣಬಹುದು. ಇತ್ತೀಚೆಗೆ ಇದಕ್ಕೆ ಸಾಕ್ಷಿಗಳೆಂದರೆ ಬಿಟಿಎಸ್ ಮತ್ತು ಬ್ಲ್ಯಾಕ್‌ಪಿಂಕ್‌ನಂತಹ ವಿಡಿಯೋಗಳು. ಹೀಗೆ ಪಾಶ್ಚಾತ್ಯವಾಗಲಿ, ದೇಸೀ ಸಂಗೀತವಾಗಲಿ ಪರಸ್ಪರರ ಪ್ರಭಾವದಿಂದ ಜಗತ್ತನ್ನು ಸೆಳೆಯುತ್ತಿರುತ್ತದೆ. ಒಟ್ಟಾರೆ ಸಂಗೀತ, ನೃತ್ಯ ಎಲ್ಲರಿಗೂ ಬೇಕು.

2013ರಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅಭಿನಯಿಸಿದ ಗೋಲಿಯೋನ್ ಕೀ ರಾಸ್​ಲೀಲಾ ಸಿನೆಮಾದ ನಾಗದಾ ಸಾಂಗ್ ಧೋಲ್ ಹಾಡಿಗೆ ಗಾಘ್ರಾ-ಚೋಲಿಗಳನ್ನು ಧರಿಸಿದ ದಕ್ಷಿಣ ಕೋರಿಯಾದ ಯುವಕ-ಯುವತಿಯರು ಅದ್ಭುತವಾಗಿ ನೃತ್ಯ ಪ್ರದರ್ಶಿಸಿದರು. ತದನಂತರ ಧೋತಿ ಕುರ್ತಾ ಧರಿಸಿದ ಯುವಕರು ರಾಮ್​ಜೀಕೀ ಚಾಲ್​ ಸಿನನೆಮಾದ ಹಾಡಿಗೆ ಹುಚ್ಚೆದ್ದು ಕುಣಿದರು. ಈ ವಿಡಿಯೋ ಅನ್ನು ‘ಲಕ್ನೋವಿ ನವಾಬ್ ಇನ್​ ಕೋರಿಯಾ’ ಇನ್​ಸ್ಟಾಗ್ರಾಂ ಪುಟವು ಹಂಚಿಕೊಂಡಿದೆ. ಈ ವಿಡಿಯೋ 1.6 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. 1,97,000 ಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ಮೆಚ್ಚಿದ್ಧಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಕೊರಿಯನ್ನರು ಪ್ರದರ್ಶಿಸಿದ ಈ ಅದ್ಭುತ ನೃತ್ಯಕ್ಕೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಎಂಥಾ ಚೆಂದ ನೃತ್ಯ ಮಾಡಿದ್ದಾರೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಕೊರಿಯನ್ನರ ಶರತ್ಕಾಲದ ಈ ಸುಗ್ಗಿಯ ಹಬ್ಬಕ್ಕೆ ಈ ನೃತ್ಯ ಅತ್ಯಂತ ಮುದ ನೀಡಿದೆ ಎಂದು ಮತ್ತೊಬ್ಬರು ಹರ್ಷ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:45 am, Mon, 12 September 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ