Viral Video : ರೈಟ್ ರೈಟ್! ಇದು ಟಿಕೆಟ್​ರಹಿತ ಪ್ರಯಾಣ, ಬರ್ತೀರಾ?

Duckling : ‘ಯಶಸ್ಸಿನ ಗುಟ್ಟೆಂದರೆ ಬಾತುಕೋಳಿಯ ಪ್ರಯಾಣದಂತೆಯೇ. ಚಲಿಸುವ ದಾರಿಯಲ್ಲಿ ಅಡೆತಡೆಗಳೇ ಇಲ್ಲವೆಂಬಂತೆ. ಆದರೆ ನಿರಂತರವಾಗಿ ಬಾತುಕೋಳಿ ಪೆಡ್ಲಿಂಗ್​ ಮಾಡುವುದು ಯಾರಿಗಾದರೂ ಕಾಣುತ್ತದೆಯಾ?’

Viral Video : ರೈಟ್ ರೈಟ್! ಇದು ಟಿಕೆಟ್​ರಹಿತ ಪ್ರಯಾಣ, ಬರ್ತೀರಾ?
ಸಾಲಾಗಿ ಬನ್ನಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 12, 2022 | 1:05 PM

Viral Video : ಮಕ್ಕಳೆಂದರೆ ಯಾರಿಗೆ ಇಷ್ಟವಿಲ್ಲ? ಆ ಲೋಕವೇ ಅಂಥದ್ದು. ಜಗತ್ತನ್ನೇ ಮರೆಸುವಂಥ ಮಾಂತ್ರಿಕತೆ ಅದಕ್ಕಿದೆ. ಆದರೆ ಮಕ್ಕಳನ್ನು ಸಾಕಿ ಪೋಷಿಸಿ ನಿಭಾಯಿಸುವುದು? ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅದರಲ್ಲೂ ಮನುಷ್ಯರು ತಾಳ್ಮೆ ಕಳೆದುಕೊಳ್ಳಬಹುದು. ಆದರೆ ಪ್ರಾಣಿ ಪಕ್ಷಿಗಳು ಅತ್ಯಂತ ಜವಾಬ್ದಾರಿಯಿಂದ ತಮ್ಮ ಮರಿಗಳನ್ನು ಪೋಷಿಸುತ್ತವೆ. ಮಹೀಂದ್ರಾ ಗ್ರೂಪ್​ನ ಅಧ್ಯಕ್ಷ ಆನಂದ ಮಹೀಂದ್ರಾ ಆಗಾಗ ಪ್ರಾಣಿ ಪಕ್ಷಿ, ಪ್ರಕೃತಿಗೆ ಸಂಬಂಧಿಸಿದ ಆಸಕ್ತಿಕರ ಪೋಸ್ಟ್​ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವುದನ್ನು ಗಮನಿಸಿರುತ್ತೀರಿ. ಈಗಿವರು ಹಂಚಿಕೊಂಡ ವಿಡಿಯೋದ ಶೀರ್ಷಿಕೆ TT; Ticketless Traveling- ಟಿಕೆಟ್​ರಹಿತ ಪ್ರಯಾಣ.

ಗುರುವಾರ ಪೋಸ್ಟ್​ ಮಾಡಿದ ಈ ವಿಡಿಯೋದಲ್ಲಿ ತಾಯಿಬಾತುಕೋಳಿ ತನ್ನ ಮರಿಯನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ವಿಹಾರಕ್ಕೆ ಕರೆದೊಯ್ಯುತ್ತಿದೆ. ಉಳಿದ ಮರಿಗಳನ್ನು ಅದನ್ನು ಹಿಂಬಾಲಿಸುತ್ತಿವೆ. ಕೀ ಕೊಟ್ಟ ಗೊಂಬೆಗಳಂತೆ ಅವು ನೀರ ಮೇಲೆ ಚಲಿಸುವುದನ್ನು ನೋಡಿದಾಗ ಯಾರಿಗೂ ಅಚ್ಚರಿಯಾಗುತ್ತದೆ ಅಲ್ಲವೆ? ಈ ವಿಡಿಯೋ ಸುಮಾರು 6 ಲಕ್ಷ ವೀಕ್ಷಕರನ್ನು ಸೆಳೆದಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಒಬ್ಬ ಟ್ವಿಟರ್​ ಖಾತೆದಾರರು, ‘ಯಶಸ್ಸಿನ ಗುಟ್ಟೆಂದರೆ ಬಾತುಕೋಳಿಯ ಪ್ರಯಾಣದಂತೆಯೇ. ಚಲಿಸುವ ದಾರಿ ಎಂಥ ಮೃದು ಮತ್ತು ಸರಾಗವಾಗಿದೆಯಲ್ಲ? ಅಡೆತಡೆ ಎನ್ನುವುದೇ ಇಲ್ಲಿಲ್ಲ. ಆದರೆ ಕೆಳಗೆ ನಿರಂತರವಾಗಿ ಬಾತುಕೋಳಿ ಪೆಡ್ಲಿಂಗ್​ ಮಾಡುವುದು ಯಾರಿಗಾದರೂ ಕಾಣುತ್ತದೆಯಾ?’ ಎಂದಿದ್ದಾರೆ.

ಬಾತುಕೋಳಿ ನೀರಿನಲ್ಲಿ ನಿರಂತರವಾಗಿ ಪೆಡ್ಲಿಂಗ್ ಮಾಡುತ್ತಲೇ ಇರಬೇಕು. ಆದರೆ ಎಂದೂ ತನಗೆ ಕಷ್ಟವಾಗುತ್ತಿದೆ ಇದೆಲ್ಲ ಎಂದು ಅದು ಮುಖದ ಮೇಲೆ ತೋರ್ಪಡಿಸುವುದೇ ಇಲ್ಲ. ಸದಾ ಶಾಂತ ಮತ್ತು ನೋಡಿದ ಇತರರಿಗೂ ಸಂತೋಷ ನೀಡುವಂಥ ಸ್ನಿಗ್ಧ ಭಾವ. ಈ ಭಾವ ಒಂಟಿಯಾಗಿ ಚಲಿಸುವಾಗಲೂ, ಕುಟುಂಬದೊಂದಿಗೆ ಚಲಿಸುವಾಗಲೂ ಒಂದೇ ಇರುತ್ತದೆ. ಸ್ಥಿತಪ್ರಜ್ಞ ಎನ್ನುತ್ತೇವಲ್ಲ ಅದೇ ಇದು.

ನಮಗೇಕೆ ಇಂಥ ಸ್ಥಿತಿ ಕಾಯ್ದುಕೊಳ್ಳಲು ಸಾಧ್ಯವಾಗದು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:56 pm, Mon, 12 September 22

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ