AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ರಾಸ್​ಬೆರ್ರಿ ಐಸ್ಕ್ರೀಮ್​ ಮ್ಯಾಗಿ! ಮ್ಯಾಗೀ ಕೋ ಮಾಫ್​ ಕರ್​ದೋ

Raspberry Maggie Ice cream : ಇಲ್ಲೊಂದು ಮಸ್ತ್​ ಚಾಲೇಂಜ್​ ಇದೆ ನಿಮಗೆ. ರಸ್ತೆಬದಿಯ ವ್ಯಾಪಾರಿಯೊಬ್ಬರು ತಯಾರಿಸುವ ಈ ಪಾಕವಿಧಾನ ಅತ್ಯಂತ ಸರಳ. ಪ್ರಯೋಗಿಸುವ ಮನಸ್ಸಾಗುತ್ತದೆಯಾ? ನೆಟ್ಟಿಗರಿಗಂತೂ ‘ಹರಸಿ ಹಾಡುತ್ತಿದ್ಧಾರೆ’!

Viral Video : ರಾಸ್​ಬೆರ್ರಿ ಐಸ್ಕ್ರೀಮ್​ ಮ್ಯಾಗಿ! ಮ್ಯಾಗೀ ಕೋ ಮಾಫ್​ ಕರ್​ದೋ
ರಾಸ್​ಬೆರ್ರಿ ಐಸ್ಕ್ರೀಮ್ ಮ್ಯಾಗಿ
TV9 Web
| Edited By: ಶ್ರೀದೇವಿ ಕಳಸದ|

Updated on:Sep 12, 2022 | 12:21 PM

Share

Viral Video : ಕೊರೊನಾದ ಹಾವಳಿಯಲ್ಲಿ ಬಹಳಷ್ಟು ಪ್ರಯೋಗಗಳಿಗೆ ಒಳಗಾದ ತಿನಿಸೆದೆಂದರೆ ಮ್ಯಾಗಿಯೇ! ಮಿಲಿಯನ್​ಗಟ್ಟಲೆ ವಿಡಿಯೋಗಳೇ ಇದಕ್ಕೆ ಸಾಕ್ಷಿ. ಒಂದಕ್ಕಿಂತ ಒಂದು ಭಿನ್ನ ಈ ರೆಸಿಪಿಗಳು. ಚಾಕೋಲೇಟ್​ ಮ್ಯಾಗಿಯಿಂದ ಹಿಡಿದು ಏನೇನೆಲ್ಲಾ. ಈಗ ಈ ರೆಸಿಪಿಗಳ ಪಾಲಿಗೆ ಈ ಹೊಸ ರೆಸಿಪಿ ಸೇರುತ್ತದೆಯಾ? ನೆಟ್ಟಿಗರು ಬಿಲ್ಕುಲ್​ ಇಲ್ಲ ಎನ್ನುತ್ತಿದ್ದಾರೆ. ಹೌದು. ರಾಸ್​ಬೆರ್ರಿ ಐಸ್ಕ್ರೀಮ್ ಕ್ಯಾಂಡಿಯನ್ನು ಮ್ಯಾಗಿ ಜೊತೆ ಕುದಿಸಿ ಮಾಡುವ ಹೊಸ ರೆಸಿಪಿ ಇದು! ಕೇಳುವುದಕ್ಕೆ ವಿಚಿತ್ರವೆನ್ನಿಸುತ್ತದೆಯಲ್ಲ? ನೆಟ್ಟಿಗರನ್ನು ಈ ವಿಡಿಯೋ ಹುಯಿಲೆಬ್ಬಿಸಿದೆ. ಆರ್​ಜೆ ಮೋಹನ್​ ಎನ್ನುವವರು ತಮ್ಮ ಇನ್​ಸ್ಟಾಗ್ರಾಂ ಖಾತೆಯೊಳಗೆ ಈ ವಿಡಿಯೋ ಹಂಚಿಕೊಂಡಿದ್ದಾರೆ. ರಸ್ತೆಬದಿಯ ವ್ಯಾಪಾರಿಯೊಬ್ಬ ತಯಾರಿಸುವ ಖಾದ್ಯ ಇದಾಗಿದೆ. ವಿಡಿಯೋ ನೋಡಿ ಸಂತುಷ್ಟರಾಗಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by RJ Rohan (@radiokarohan)

ಅತ್ಯಂತ ಸರಳ ಅಲ್ಲವೆ ಈ ತಿನಿಸನ್ನು ತಯಾರಿಸುವ ವಿಧಾನ? ನಿಜ ಹೇಳಿ, ನಿಮಗೆ ಈ ರೆಸಿಪಿ ಇಷ್ಟವಾಯಿತಾ? ನೋಡಿದ ಯಾರಾದರೂ ಇದನ್ನು ಮಾಡಿ ತಿನ್ನಬೇಕು ಎನ್ನುವ ಆಸೆ ಉಂಟಾಗುತ್ತದೆಯಾ? ಅದರಲ್ಲೂ ಮ್ಯಾಗಿ ಟೇಸ್ಟ್​ಮೇಕರ್​ ಸೇರಿಸಿದ ಮೇಲೆ ರಾಸ್​​ಬೆರ್ರಿ ಫ್ಲೇವರ್​​ನ ಐಸ್​ಕ್ಯಾಂಡಿಯನ್ನು ಸುರಿದು ಕುದಿಸುವುದು. ಅದನ್ನು ಕೋನ್​ಗೆ ಹಾಕುವುದು. ಅದರ ಮೇಲೆ ಚೀಸ್​ನ ತುರಿ ಹಾಕಿ ಅಲಂಕರಿಸುವುದು. ಕೈಯಲ್ಲೇ ಕೋನ್​ ಮುರಿದು ಹೋಗಿದೆ. ಇನ್ನು ಪಾಪ ಆ ಗ್ರಾಹಕ. ತಿನ್ನುವಾಗ ಆ ಗ್ರಾಹಕನ ಮುಖವನ್ನು ಒಮ್ಮೆ ತೋರಿಸಿದ್ದರೆ ಚೆನ್ನಾಗಿರುತ್ತಿತ್ತು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:14 pm, Mon, 12 September 22

Follow Us
TV9 Web
TV9 Web

TV9 Kannada

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್