Viral Video : 9 ಜನರ ಈ ಉಲ್ಟಾ ಪಿರಮಿಡ್, 6 ಮಿಲಿಯನ್​ ನೆಟ್ಟಿಗರ ಶಹಬ್ಬಾಶ್

TV9kannada Web Team

TV9kannada Web Team | Edited By: ಶ್ರೀದೇವಿ ಕಳಸದ | Shridevi Kalasad

Updated on: Sep 12, 2022 | 3:57 PM

Fitness Reels : 60 ಮಿಲಿಯನ್​ ಜನರನ್ನು ಹಿಡಿದಿಟ್ಟಿದೆ ಈ ಒಂಬತ್ತು ಜನರು ತಲೆಕೆಳಗಾಗಿ ರಚಿಸಿದ ಪಿರಮಿಡ್​ ವಿಡಿಯೋ, ನೆಟ್ಟಿಗರನ್ನು ಸಾಕಷ್ಟು ದೃಷ್ಟಿಕೋನದಿಂದ ಪ್ರತಿಕ್ರಿಯಿಸುವಲ್ಲಿ ಇದು ಉತ್ತೇಜಿಸಿದೆ.

Viral Video : 9 ಜನರ ಈ ಉಲ್ಟಾ ಪಿರಮಿಡ್, 6 ಮಿಲಿಯನ್​ ನೆಟ್ಟಿಗರ ಶಹಬ್ಬಾಶ್
ಹೇಗಿದೆ ಉಲ್ಟಾ ಪಿರಮಿಡ್

Viral Video : ಈಗಂತೂ ಇಡೀ ಬದುಕೇ ಅಂತರ್ಜಾಲದ ಮೇಲೆ ನಿಂತಿದೆ. ನಿಮ್ಮ ಐಡೆಂಟಿಟಿ ಏನು ಎನ್ನುವುದನ್ನು ನೀವು ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿಕೊಂಡರೆ ಮಾತ್ರ ನಿಮ್ಮನ್ನು ಜನ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಇಲ್ಲವಾದರೆ ಅಷ್ಟೇ! ಜನ ನಿಮ್ಮನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆಂದರೆ ನೀವು ಸದಾ ಚಾಲ್ತಿಯಲ್ಲಿರಬೇಕು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಬೆಳಗ್ಗೆ ಕಣ್ಣು ಬಿಟ್ಟಾಗಿನಿಂದ ರಾತ್ರಿ ಮಲಗುವವರೆಗೂ ಯಾವುದೇ ಚಟುವಟಿಕೆಯನ್ನು ಸೃಜನಶೀಲವಾಗಿ, ಕೌಶಲಯುತವಾಗಿ ವಿಡಿಯೋ ಮಾಡಿ ಅಪ್​ಲೋಡ ಮಾಡುವಲ್ಲಿ ನೀವು ಮುಳುಗಿರಬೇಕು. ಇಲ್ಲಿ ನಿಮಗೆ ನೀವೇ ಗುರು. ಜನಮೆಚ್ಚುಗೆ ಮತ್ತು ಸಾಮಾಜಿಕ ಜಾಲತಾಣಗಳ ಅಲ್ಗೋರಿದಮ್ಮೇ​ ಇದಕ್ಕೆ ಮಾನದಂಡ. ಹೆಚ್ಚೆಚ್ಚು ವ್ಯೂವ್ಸ್​ ಬರುತ್ತಿದ್ದಂತೆ ನಿಮ್ಮಲ್ಲಿ ಉತ್ಸಾಹ ಗರಿಗೆದರುತ್ತಾ ಹೋಗುತ್ತದೆ. ಕ್ರಮೇಣ ಅದೊಂದು ವ್ಯಸನವಾಗಿಬಿಡುತ್ತದೆ. ನಂತರದ ಖ್ಯಾತಿಯ ಅಮಲಿನ ಬಗ್ಗೆ ವಿವರಿಸಬೇಕಿಲ್ಲ. 24 ಗಂಟೆಯೂ ಅದೇ ಜೀವನವಾದಾಗ ಹಣಗಳಿಕೆಗೂ ಅಲ್ಲಿಯೇ ಮಾರ್ಗವೂ ಹುಟ್ಟುತ್ತದೆ. ಇದೇ ಇಂದಿನ ಸಾಮಾಜಿಕ ಜಾಲತಾಣಗಳ ರೀಲ್ಸ್​ ಟ್ರೆಂಡ್​. ಈ ಟ್ರೆಂಡ್​ನಲ್ಲಿ ಫಿಟ್​ನೆಸ್ ರೀಲ್ಸ್​ ಹೆಚ್ಚು ಜನಪ್ರಿಯಗೊಂಡಿವೆ. ಇದೀಗ ವೈರಲ್ ಆದ ಈ ವಿಡಿಯೋ ಗಮನಿಸಿ.

View this post on Instagram

A post shared by Adam Morsel (@ad_mors)

ಆಗಸ್ಟ್​ 28ರಂದು ಈ ವಿಡಿಯೋ ಪೋಸ್ಟ್​ ಆಗಿದೆ. ನೆಟ್ಟಿಗರು ಈ ಸಾಹಸಮಯ ವಿಡಿಯೋವನ್ನು ‘ಆ್ಯಂಟಿ ಗ್ರ್ಯಾವಿಟಿ ಗ್ಯಾಂಗ್​’ ಎಂದು ಕರೆದಿದ್ಧಾರೆ. ಈತನಕ 60 ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಕರನ್ನು ಈ ವಿಡಿಯೋ ತಲುಪಿದೆ. 6 ಮಿಲಿಯನ್​ಗಿಂತಲೂ ಹೆಚ್ಚು ಜನರನ್ನು ಪ್ರತಿಕ್ರಿಯಿಸುವ ಹಾಗೆ ಮಾಡಿದೆ ಎಂದರೆ ಯೋಚಿಸಿ, ಟೀಮ್​ ಸ್ಪಿರಿಟ್​ನ ಫಲಾಫಲ.

ಈ ಒಂಬತ್ತು ಜನರ ತಂಡ, ಉಲ್ಟಾ ಪಿರಮಿಡ್​ ರಚಿಸುವ ಸಾಹಸಕ್ಕೆ ಇಳಿದಿದ್ದಕ್ಕೆ ನೆಟ್ಟಿಗರು ಮನದುಂಬಿ ಹಾರೈಸಿದ್ದಾರೆ. ಏಕೆಂದರೆ, ಒಬ್ಬರ ದೈಹಿಕ ಮತ್ತು ಮನೋಬಲದ ಮೇಲೆ ಇನ್ನೊಬ್ಬರು ಅವಲಂಬಿಸಿರುವ ಈ ಸಾಹಸ ಸುಲಭದ್ದಲ್ಲ. ಈ ಸಾಹಸ ದೃಶ್ಯಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಎಂದಿಗೂ ನಮ್ಮನ್ನು ನಾವು ಬಿಟ್ಟುಕೊಡಬಾರದು ಎಂಬುದಕ್ಕೆ ಇದು ಉತ್ತಮ ಉದಾಹರಣೆ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿರುವುದು ಬಹುವಾಗಿ ಗಮನ ಸೆಳೆಯುತ್ತದೆ.

ಏನೇ ಆಗಲಿ, ವೈರಲ್ ಆಗಲೆಂದೇ ಮಾಡಿದ ಸಾಕಷ್ಟು ವಿಡಿಯೋಗಳು ಆನ್​ಲೈನ್​ನಲ್ಲಿ ಲಭ್ಯವಿವೆ. ಆದರೆ ಎಲ್ಲವೂ ಅರ್ಥಪೂರ್ಣ ಮತ್ತು ಉತ್ತಮ ಅಭಿರುಚಿಯಿಂದ ಕೂಡಿರುತ್ತವೆ ಎಂದು ಹೇಳಲಾಗದು. ಆದರೂ ಅವರವರ ಅಭಿರುಚಿಗೆ ತಕ್ಕಂತೆ ಅವರವರ ಆಸಕ್ತಿಗಳಿಗೆ ತಕ್ಕಂತೆ ವಿಡಿಯೋಗಳು ಲಭ್ಯ ಎಂಬುದನ್ನೂ ಅಲ್ಲಗಳೆಯಲಾಗದು; ಲೋಕೋಭಿನ್ನರುಚಿಃ

ಅದರೂ ಈ ಮಟ್ಟದಲ್ಲಿ ಜನರ ಗಮನ ಸೆಳೆಯಬೇಕೆಂದರೆ ‘ಮೆಹನತ್’ ಮತ್ತು ‘ತಂಡದ ಒಗ್ಗಟ್ಟು’ ಎನ್ನುವುದೇ ಮೂಲಧಾತು. ಯಶಸ್ಸಿನಲ್ಲಿ ಅಪಾಯವೂ ಇರುತ್ತದೆ ಸುಖವೂ ಇರುತ್ತದೆ. ಎರಡನ್ನು ಬಿಟ್ಟು ಇನ್ನೊಂದು ಎಂದೂ ಇರುವುದಿಲ್ಲ. ಒಂದು ಪ್ರಯತ್ನದ ಹಿಂದೆ ಸಾಕಷ್ಟು ಸೋಲಿನ ನೆರಳು ಇದ್ದೇ ಇರುತ್ತದೆ. ಗಮನವೆಲ್ಲ ಗುರಿಯತ್ತ ಇದ್ದರೆ ಸಾಕು. ಆದರೂ ಜೀವ ಹುಷಾರು!

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ 

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada