Viral Video : ಮಹಿಳೆಯ ಕಿವಿಯೊಳಗೆ ಹಾವಿನಮರಿ, ಗೊಂದಲಕ್ಕೆ ಬಿದ್ದ ನೆಟ್ಟಿಗರು

Snake Gets Stuck In Woman's Ear : ಮಹಿಳೆಯ ಕಿವಿಯೊಳಗೆ ಸೇರಿದ ಹಾವಿನಮರಿಯನ್ನು ಹೊರತೆಗೆಯಲು ವೈದ್ಯರು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ಪ್ರಯತ್ನ ವಿಫಲವಾಗುತ್ತಿದೆಯೆ? ನೋಡಿ ಈ ವಿಡಿಯೋ.

Viral Video : ಮಹಿಳೆಯ ಕಿವಿಯೊಳಗೆ ಹಾವಿನಮರಿ, ಗೊಂದಲಕ್ಕೆ ಬಿದ್ದ ನೆಟ್ಟಿಗರು
ಕಿವಿಯಿಂದ ಹಾವು ತೆಗೆಯುತ್ತಿರುವುದು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 12, 2022 | 2:28 PM

Viral Video : ನಮ್ಮ ಬದುಕಿನ ಅವಧಿಯಲ್ಲಿ ಯಾರಿಗೂ ಒಂದಿಲ್ಲಾ ಒಂದು ಸಣ್ಣ ಹುಳುವಂತೂ ಕಿವಿಯಲ್ಲಿ ಹೋಗಿಬಂದ ಅನುಭವ ಸಾಮಾನ್ಯವಾಗಿ ಆಗಿಯೇ ಆಗಿರುತ್ತದೆ. ಆದರೆ ಹಾವು!? ಕಿವಿಯಲ್ಲಿ ಹಾವು ಹೋಗಲು ಸಾಧ್ಯವೆ? ಹೌದು ಎನ್ನುತ್ತಿದೆ ವೈರಲ್ ಆಗಿರುವ ಈ ವಿಡಿಯೋ. ಮುಂದಿನ ಪ್ರಶ್ನೆ, ಹಾವು ಕಿವಿಯೊಳಗೆ ಹೋಗುವತನಕ ಆ ಮಹಿಳೆ ಏನು ಮಾಡುತ್ತಿದ್ದಳು? ಸದ್ಯಕ್ಕಿದು ಹಾಗೆಯೇ ಇರಲಿ. ವಿಷಯ ಏನೆಂದರೆ, ಹಳದಿ ಬಣ್ಣದ ಹಾವಿನ ಮರಿಯೊಂದು ಮಹಿಳೆಯ ಕಿವಿಯೊಳಗೆ ಸೇರಿದ್ದು, ಅದನ್ನು ಹೊರತೆಗೆಯುವ ವಿಡಿಯೋ ನೆಟ್ಟಿಗರನ್ನು ಅಚ್ಚರಿಗೂ ಗೊಂದಲಕ್ಕೂ ಕೆಡವಿದೆ. ಆದರೆ, ಇದು ಯಾವ ಊರಿನಲ್ಲಿ ನಡೆದ ಘಟನೆ ಎಂಬುದು ತಿಳಿದುಬಂದಿಲ್ಲ.

ಚಂದನ್​ ಸಿಂಗ್​ ಎಂಬುವವರು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. 87, 000 ಕ್ಕೂ ಹೆಚ್ಚು ವೀಕ್ಷಕರ ಗಮನ ಸೆಳೆದಿದೆ. ವಿಡಿಯೋ ನೋಡಿದ ಸಾಕಷ್ಟು ಜನ ಪ್ರತಿಕ್ರಿಯೆಗಳ ಮೂಲಕ ಆತಂಕ, ಭಯ ವ್ಯಕ್ತಪಡಿಸಿದ್ದಾರೆ. ಸಾಕಷ್ಟು ಜನರ ಪ್ರಶ್ನೆ ಒಂದೇ; ಈ ಹಾವು ಕಿವಿಯೊಳಗೆ ಹೇಗೆ ಹೋಯಿತು?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಕೆಲವರು, ಇದು ನಿಜಕ್ಕೂ ನಡೆದ ಘಟನೆಯಲ್ಲ. ಇದು ನಕಲಿ ಎಂದು ವಾದಿಸುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಸಂಶೋಧನಾ ವರದಿಯ ಪ್ರಕಾರ, ಪ್ರತೀ ವರ್ಷ 1,38,000 ಜನರು ಹಾವಿನ ಕಡಿತಕ್ಕೆ ಒಳಗಾಗುತ್ತಾರೆ. ಸುಮಾರು 81,000 ಜನರು ಪ್ರಾಣಹಾನಿಗೆ ಒಳಗಾಗುತ್ತಾರೆ. ಹಾವು ಕಚ್ಚಿದಾಗ ಸಾಕಷ್ಟು ಜನ ಶಾಶ್ವತವಾಗಿ ಅಂಗವೈಕಲ್ಯಕ್ಕೆ ಒಳಗಾಗುತ್ತಾರೆ ಇನ್ನೂ ಕೆಲವರು ಆಘಾತಕ್ಕೆ ಒಳಗಾಗಿ ಸಾವಿಗೀಡಾಗುತ್ತಾರೆ.

ಈತನಕ ಮನೆಗಳಲ್ಲಿ, ಹೊರಾಂಗಣದಲ್ಲಿ ಭಯಂಕರ ಹಾವುಗಳು ಅಡಗಿ ಕುಳಿತಿರುವುದನ್ನು, ಆಟವಾಡಿಕೊಂಡಿರುವುದನ್ನು ನೋಡಿದ ನೆಟ್ಟಿಗರಿಗೆ ಈ ವಿಡಿಯೋ ನಂಬಲು ಕಷ್ಟವಾಗುತ್ತಿದೆ. ಪೂರ್ತಿ ವಿಡಿಯೋ ಅಪ್​ಲೋಡ್ ಮಾಡಿ ಎಂದು ಕೆಲವರು ಕೇಳಿದ್ದಾರೆ. ಇನ್ನೂ ಕೆಲವರು ಹಾವು ಹೊರಬರಲು ಏನು ಮಾಡಬೇಕು ಎಂದು ಮನೆಮದ್ದನ್ನು ಹೆಸರಿಸಿದ್ದಾರೆ.

ಹಾವು ಕಿವಿಯೊಳಗೆ ಹೋಗುವ ತನಕ ಮಹಿಳೆ ಏನು ಮಾಡುತ್ತಿದ್ದಳು ಎನ್ನುವುದಕ್ಕೆ ಉತ್ತರವಿಲ್ಲ. ಹಾವು ಹೊರಬಂದಿತೋ? ಅದಕ್ಕೂ ಉತ್ತರವಿಲ್ಲ. ನಿಮಗೇನು ಅನ್ನಿಸುತ್ತದೆ ಈ ವಿಡಿಯೋ ಬಗ್ಗೆ?

ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:25 pm, Mon, 12 September 22

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!