ಆರು ವರ್ಷದ ಸಂಬಂಧಕ್ಕೆ ಬಿತ್ತು ಮೂರು ಗಂಟು; ಬಾಂಗ್ಲಾ ಮಹಿಳೆಯನ್ನು ಮದುವೆಯಾದ ಭಾರತೀಯ ಮಹಿಳೆ
ಪೋಷಕರ ಸಮ್ಮುಖದಲ್ಲೇ ಭಾರತದ ಯುವತಿ ಮತ್ತು ಬಾಂಗ್ಲಾ ಯುವತಿ ಪರಸ್ಪರ ಮದುವೆಯಾದ ಅಪರೂಪದ ಘಟನೆಯೊಂದು ನಡೆದಿದೆ. ಸುಭಿಕ್ಷಾ ಸುಬ್ರಮಣಿ ಮತ್ತು ಟೀನಾ ದಾಸ್ ಅವರು ಎರಡೂ ಕುಟುಂಬದ ಆಶೀರ್ವಾದದೊಂದಿಗೆ ಆಗಸ್ಟ್ 31 ರಂದು ಚೆನ್ನೈನಲ್ಲಿ ತಮಿಳು ಬ್ರಾಮಿನ್ ಶೈಲಿಯಲ್ಲಿ ಮದುವೆಯಾದರು.
ಪೋಷಕರ ಸಮ್ಮುಖದಲ್ಲೇ ಭಾರತದ ಯುವತಿ ಮತ್ತು ಬಾಂಗ್ಲಾ ಯುವತಿ ಪರಸ್ಪರ ಮದುವೆಯಾದ ಅಪರೂಪದ ಘಟನೆಯೊಂದು ನಡೆದಿದೆ. ಸುಭಿಕ್ಷಾ ಸುಬ್ರಮಣಿ ಮತ್ತು ಟೀನಾ ದಾಸ್ ಅವರು ಎರಡೂ ಕುಟುಂಬದ ಆಶೀರ್ವಾದದೊಂದಿಗೆ ಆಗಸ್ಟ್ 31 ರಂದು ಚೆನ್ನೈನಲ್ಲಿ ತಮಿಳು ಬ್ರಾಮಿನ್ ಶೈಲಿಯಲ್ಲಿ ಮದುವೆಯಾದರು. ಸದ್ಯ ದಂಪತಿ ಹನಿಮೂನ್‌ಗೆ ತೆರಳಿದ್ದಾರೆ. ಸುಭಿಕ್ಷಾ ಮತ್ತು ಟೀನಾ ಅವರ ಪ್ರಯಾಣವು ಕನಸಿನ ಪ್ರೇಮಕಥೆಗಿಂತ ಕಡಿಮೆಯಿಲ್ಲ. ಸುಭಿಕ್ಷಾ ಮತ್ತು ಆಕೆಯ ಪೋಷಕರು ಕೆನಡಾದ ಕ್ಯಾಲ್ಗರಿಯಲ್ಲಿ ವಾಸಿಸುತ್ತಿದ್ದಾರೆ. ಅದರಂತೆ ಅಲ್ಲಿ ಸುಭಿಕ್ಷಾ ಅವರು ಡೇಟಿಂಗ್ ಆ್ಯಪ್ನಲ್ಲಿ ಬಾಂಗ್ಲಾದೇಶಿ ಹಿಂದೂ ಮಹಿಳೆ ಟೀನಾ ದಾಸ್ ಅವರ ಪರಿಚಯ ಮಾಡಿಕೊಂಡರು. ಆರು ವರ್ಷಗಳ ಕಾಲ ಒಟ್ಟಿಗೆ ಇದ್ದ ಜೋಡಿ ಕೊನೆಗೂ ಅಧಿಕೃತವಾಗಿ ಒಂದಾಗಿದೆ. ಸುಭಿಕ್ಷಾ ತನ್ನ ಮದುವೆಯನ್ನು ಭಾರತದಲ್ಲೇ ಆಗಬೇಕು ಎಂದು ಬಯಸಿದ್ದಳು. ಅದರಂತೆ ಚೆನ್ನೈನಲ್ಲೇ ವಿವಾಹವಾಗಿದ್ದಾರೆ.
ಆರಂಭದಲ್ಲಿ ಮದುವೆಗೆ ಒಪ್ಪಿಸುವಾಗ ಜಗಳ ನಡೆಯಬಹುದೇನೋ ಎಂಬ ವಿಚಾರ ಸುಬಿಕ್ಷಾ ಅವರ ಮನಸ್ಸಿನಲ್ಲಿ ಬಂದಿತ್ತಂತೆ. ಆದರೆ ಕುಟುಂಬದವರ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಮದುವೆ ಎಲ್ಲಿ ಆಗುವುದು ಎಂಬ ಪ್ರಶ್ನೆ ಉದ್ಭವಿಸಿದೆ. ಈ ವೇಳೆ ಸುಭಿಕ್ಷಾ ಎಲ್ಲಾ ಕುಟುಂಬ ಸದಸ್ಯರ ಸಮ್ಮುಖದಲ್ಲಿ ವಿವಾದ ನೆರವೇರಬೇಕು ಎಂಬ ಆಸೆಯಿಂದ ಕೆನಡಾದ ಬದಲು ಭಾರತದಲ್ಲೇ ಮದುವೆಯಾಗಲು ನಿರ್ಧರಿಸಿದರು. ಇದಕ್ಕೆ ಕುಟುಂಬಸ್ಥರೂ ಬೆಂಬಲ ವ್ಯಕ್ತಪಡಿಸಿದರು. ಅದೃಷ್ಟವಶಾತ್ ಯಾವುದೇ ಅಡೆತಡೆಗಳು ನಮ್ಮ ಮದುವೆಗೆ ಆಗಲಿಲ್ಲ ಎಂದು ಸುಭಿಕ್ಷಾ ಅವರು ಹೇಳಿದ್ದಾರೆ.
ಮದುವೆಯ ನಂತರ ತನ್ನ ಸಂಗಾತಿಯ ಬಗ್ಗೆ ಮಾತನಾಡಿದ ಟೀನಾ, “ನಾನು ತಮಿಳುನಾಡಿಗೆ ಬಂದಿರುವುದು ಇದೇ ಮೊದಲು. ನನ್ನ ಭಾವನೆಗಳನ್ನು ಹೇಗೆ ವ್ಯಕ್ತಪಡಿಸಬೇಕೆಂದು ನನಗೆ ತಿಳಿದಿಲ್ಲ, ಅವಳ ಇಡೀ ಕುಟುಂಬವುಇಅಲ್ಲಿಯೇ ಇದೆ. ಮದುವೆಯು ಅದ್ಭುತವಾಗಿದೆ, ನಮ್ಮ ಅದ್ಭುತವಾದ ಕನಸು ನನಸಾಯಿತು” ಎಂದಿದ್ದಾರೆ.
ಟೀನಾಗೆ ಇದು ಎರಡನೇ ಮದುವೆ
ಸಂಪ್ರದಾಯವಾದಿ ಹಿಂದೂ ಬಾಂಗ್ಲಾದೇಶದ ಕುಟುಂಬದಿಂದ ಬಂದ ಟೀನಾ, 19ನೇ ವಯಸ್ಸಿನಲ್ಲಿ ಒಬ್ಬ ವ್ಯಕ್ತಿಯನ್ನು ವಿವಾಹವಾದರು. ಈ ಬಗ್ಗೆ ಮಾತನಾಡಿದ ಅವರು, “ನಾನು 19 ವರ್ಷದವನಾಗಿದ್ದಾಗ ನಾನು ಮದುವೆಯಾಗಿದ್ದೆ. ಬಾಂಗ್ಲಾದೇಶದ ಜನರು ತುಂಬಾ ಸಂಪ್ರದಾಯಸ್ಥರು ಮತ್ತು ಸಲಿಂಗಕಾಮಿಯಾಗಿರುವುದು ಅಪರಾಧ ಎಂದು ಭಾವಿಸುತ್ತಾರೆ. ಕೊನೆಗೆ ನಾನು ಸಂಬಂಧವನ್ನು ಕೊನೆಗೊಳಿಸಲು ಮತ್ತು ನನ್ನ ಸಂತೋಷವನ್ನು ಆಯ್ಕೆ ಮಾಡಲು ನಿರ್ಧರಿಸಿದೆ” ಎಂದರು.
ಪುರುಷರೊಂದಿಗೆ ಡೇಟ್ ಮಾಡಿದ್ದ ಸುಭಿಕ್ಷಾ
ಮೊದಲು ಪುರುಷರೊಂದಿಗೆ ಡೇಟ್ ಮಾಡಿದ್ದ ಸುಬಿಕ್ಷಾ, ಮಹಿಳೆ ಸಂಗಾತಿಯನ್ನು ಹೊಂದಲು ಸರಿ ಎಂದು ತನ್ನ ಕುಟುಂಬ ಅರ್ಥಮಾಡಿಕೊಳ್ಳಬೇಕೆಂದು ಬಯಸಿದ್ದಳು. LGBTQ ಸಮುದಾಯದ ಬಗ್ಗೆ ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಲಹೆಗಾರರನ್ನು ಭೇಟಿಯಾಗುವಂತೆ ಆಕೆ ತನ್ನ ಪೋಷಕರನ್ನು ಒತ್ತಾಯಿಸಿದ್ದಳು. “ನನ್ನ ಅತ್ತಿಗೆ ಮತ್ತು ಸಹೋದರ ನನ್ನ ಪೋಷಕರನ್ನು ಚಿಕಿತ್ಸಕರಿಗೆ ಸಂಪರ್ಕಿಸಿದರು ಮತ್ತು ಇದು ನಿಜವಾಗಿಯೂ ಸಹಾಯ ಮಾಡಿತು. ಅದರ ಫಲವಾಗಿ ಟೀನಾ ಅವರನ್ನು ನನಗೆ ಸಂಗಾತಿಯಾಗಿ ಪಡೆಯಲು ಸಾಧ್ಯವಾಯಿತು” ಎಂದು ಸುಬಿಕ್ಷಾ ಹೇಳಿದರು.
ಪೋಷಕರ ಬೆಂಬಲ ಮತ್ತು ಸಾಮಾಜಿಕ ಬೆಂಬಲದ ಅಗತ್ಯತೆಯ ಬಗ್ಗೆ ದಂಪತಿಗಳು ಮಾತನಾಡುತ್ತಾ, ಸಮಾಜವು ಸಂತೋಷದ ಜೀವನವನ್ನು ನಡೆಸಲು ನಮಗೆ ಸಹಾಯ ಮಾಡುತ್ತದೆ ಎಂದು ಭರವಸೆ ಹೊಂದಿದ್ದಾರೆ. “ಅವರಿಬ್ಬರು ಪರಿಪೂರ್ಣ ದಂಪತಿಗಳು. ಟೀನಾಗೆ ಕಷ್ಟಕರವಾದ ಕಥೆ ಇದೆ ಮತ್ತು ಸುಬಿ ಇದೇ ಹಿನ್ನೆಲೆಯಿಂದ ಬಂದವರು. ಹೀಗಾಗಿ ಇಬ್ಬರೂ ಪ್ರೀತಿಸುತ್ತಾರೆ. ಸಂಬಂಧದಲ್ಲಿ ಅದು ಮುಖ್ಯವಾದುದು ಎಂದು ನಾನು ಭಾವಿಸುತ್ತೇನೆ ” ಎಂದು ಪ್ರವೀಣ್ ಹೇಳಿದ್ದಾರೆ.
ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:02 pm, Sun, 11 September 22