Viral Video: ಚಪ್ಪಲಿ ಕೈಗೆತ್ತಿಕೊಂಡು ರಪರಪ ಅಂತ ಹೊಡೆದಾಡಿಕೊಂಡರು
ವದ್ಧ ಹಾಗೂ ಮಧ್ಯ ವಯಸ್ಕನ ನಡುವೆ ಮಾತಿಗೆ ಮಾತು ಬೆಳೆದು ತಾರಕಕ್ಕೇರಿದ್ದಲ್ಲದೆ ಚಪ್ಪಲಿ ಕೈಗೆತ್ತಿಕೊಂಡು ಪರಸ್ಪರ ಹೊಡೆದಾಡಿಕೊಳ್ಳುವಷ್ಟರ ಮಟ್ಟಿಗೆ ಬೆಳೆದಿದೆ.
ಮಹಿಳೆಯರು, ಶಾಲಾ ಬಾಲಕಿಯರು, ಪುರುಷರ ನಡುವಿನ ಬೀದಿ ಜಗಳವನ್ನು ಅದೆಷ್ಟು ನೋಡಿಲ್ಲಾ ಹೇಳಿ? ಇಂತಹ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ಹಿರಿಯ ವ್ಯಕ್ತಿ ಮತ್ತು ಮಧ್ಯ ವಯಸ್ಕನ ನಡುವೆ ನಡೆದ ಜಗಳದ ವಿಡಿಯೋ ಇಂಟರ್ನೆಟ್ನಲ್ಲಿ ಕಾಣಿಸಿಕೊಂಡಿದೆ. ಇಬ್ಬರು ವ್ಯಕ್ತಿಗಳು ತಮ್ಮ ಚಪ್ಪಲಿಯನ್ನು ಕೈಗೆತ್ತಿಕೊಂಡು ರಪರಪ ಅಂತಾ ಮುಖ, ತಲೆಗೆ ಪರಸ್ಪರ ಹೊಡೆದಾಡಿಕೊಂಡಿರುವುದನ್ನು ವಿಡಿಯೋ ತೋರಿಸುತ್ತದೆ.
ವಿಡಿಯೋದಲ್ಲಿ ಇರುವಂತೆ, ತಲೆಗೂದಲು ಬಿಳಿಯಾಗಿರು ಹಿರಿಯ ವ್ಯಕ್ತಿ ಮತ್ತು ಮಧ್ಯ ವಯಸ್ಕ ವ್ಯಕ್ತಿಯ ನಡುವೆ ಮಾತಿನ ಚಕಾಮಕಿ ಆರಂಭಗೊಂಡಿದೆ. ಹೀಗೆ ಆರಂಭವಾದ ಮಾತಿನ ಜಗಳ ಚಪ್ಪಲಿಯಲ್ಲಿ ಹೊಡೆದಾಡಿಕೊಳ್ಳುವಷ್ಟರ ಮಟ್ಟಿಗೆ ಬೆಳೆಯಿತು. ವೃದ್ಧ ಚಪ್ಪಲಿಯಲ್ಲಿ ಹೊಡೆದರೆ, ಯುವಕ ತನ್ನ ಬೂಟ್ನಲ್ಲಿ ವೃದ್ಧನಿಗೆ ಹೊಡೆಯುತ್ತಿದಿದ್ದಾನೆ. ಅಷ್ಟಕ್ಕೂ ಸುಮ್ಮನಾಗ ಅವರು ಚಪ್ಪಲಿಗಳು ಕೈಯಿಂದ ಮಿಸ್ ಆದ ನಂತರ ಪರಸ್ಪರ ಕಾಲರ್ ಪಟ್ಟಿ ಹಿಡಿದಾಟಿಕೊಂಡು ಜಟಾಪಟಿ ನಡೆಸಿದರು. ಈ ವೇಳೆ ಮಧ್ಯಪ್ರವೇಶಿಸಿದ ವ್ಯಕ್ತಿಯೊಬ್ಬರು ಇಬ್ಬರ ಜಗಳವನ್ನು ಬಿಡಿಸಿ ಅವರನ್ನು ದೂರದೂರ ಮಾಡಿದರು.
Tam Khan ಎಂಬ ವ್ಯಕ್ತಿ ತನ್ನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಬಂದೂಕುಗಳನ್ನು ಕೆಳಗಿಟ್ಟು ಚಪ್ಪಲಿಯನ್ನು ಕೈಗೆತ್ತಿಕೊಂಡರು ಎನ್ನುವ ಅರ್ಥದಲ್ಲಿ ಶೀರ್ಷಿಕೆಯನ್ನ ನೀಡಿದ್ದಾರೆ.
Guns down, shoes up! pic.twitter.com/WBPjm1pm3M
— Tam Khan (@Tam_Khan) September 5, 2022
ಮತ್ತಷ್ಟು ಟ್ರೆಂಡಿಂಗ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published On - 2:17 pm, Sun, 11 September 22