ಲಿಫ್ಟ್ನಿಂದ ಇಳಿಯುತ್ತಿದ್ದ ಝೊಮಾಟೊ ಆಹಾರ ವಿತರಕನ ಖಾಸಗಿ ಭಾಗಗಕ್ಕೆ ಕಚ್ಚಿದ ನಾಯಿ! ವಿಡಿಯೋ ವೈರಲ್
ಆತ ಗ್ರಾಹಕರಿಗೆ ಆಹಾರ ವಿತರಿಸಿ ಲಿಫ್ಟ್ನಿಂದ ಕೆಳಗಿಳಿದು ಹೊರಹೋಗಲು ಮುಂದಾಗಿದ್ದಾನೆ. ಅಷ್ಟರಲ್ಲೇ ಎದುರಾದ ನಾಯಿಯೊಂದು ಆತನ ಖಾಸಗಿ ಭಾಗಕ್ಕೆ ಕಚ್ಚಿಯೇ ಬಿಟ್ಟಿತು. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಘಾಝಿಯಾಬಾದ್ ಹೌಸಿಂಗ್ ಸೊಸೈಟಿ ಲಿಫ್ಟ್ನಲ್ಲಿ ಸಾಕುನಾಯಿಯೊಂದು ಬಾಲಕನನ್ನು ಕಚ್ಚಿದ ವಿಡಿಯೋ ವೈರಲ್ ಆದ ಬೆನ್ನಲ್ಲೆ ಅಂತಹದ್ದೇ ಮತ್ತೊಂದು ಘಟನೆಯ ವಿಡಿಯೋ ವೈರಲ್ ಆಗುತ್ತಿದೆ. ಬ್ರೀಡ್ ನಾಯಿಗಳನ್ನು ಸಾಕುತ್ತಿರುವ ಮಂದಿ ಲಿಫ್ಟ್ನಲ್ಲಿ ಕೊಂಡೊಯ್ಯುತ್ತಿರುವುದು ಎರಡನೇ ಅಥವಾ ಮೂರನೇ ವ್ಯಕ್ತಿಗೆ ಅಪಾಯಕಾರಿ ಎಂಬೂದನ್ನು ಈ ಎರಡು ಘಟನೆಗಳು ತೋರಿಸುತ್ತಿವೆ. ಝೊಮಾಟೊ ಡಿಲಿವರಿ ಬಾಯ್ ಲಿಫ್ಟ್ನಿಂದ ಹೊರಹೋಗುತ್ತಿದ್ದಂತೆ ಜರ್ಮನ್ ಶಫರ್ಡ್ ನಾಯಿ ಖಾಸಗಿ ಭಾಗಕ್ಕೆ ಕಚ್ಚಿರುವುದನ್ನು ವೈರಲ್ ವಿಡಿಯೋ ತೋರಿಸುತ್ತಿದೆ.
ವಿಡಿಯೋದಲ್ಲಿ ಕಾಣಿಸುವಂತೆ, ಝೊಮಾಟೊ ಆಹಾರ ವಿತರಕ ಲಿಫ್ಟ್ನಿಂದ ಹೊರ ಹೋಗಲು ಮುಂದಾಗಿದ್ದಾನೆ. ಈ ವೇಳೆ ಲಿಫ್ಟ್ಗೆ ಒಳಗೆ ನಾಯಿ ಸಹಿತ ವ್ಯಕ್ತಿಯೊಬ್ಬರು ಬರಲು ಮುಂದಾಗಿದ್ದಾರೆ. ನಾಯಿ ಕಂಡ ಆಹಾರ ವಿತರಕ ಲಿಫ್ಟ್ ಒಳಗೆ ಹಿಂದೇಟು ಹಾಕುತ್ತಾನೆ. ಈ ವೇಳೆ ನಾಯಿ ಪಕ್ಕಕ್ಕೆ ಹೋಗಿರುವುದನ್ನು ಗಮನಿಸಿ ಮತ್ತೆ ಲಿಫ್ಟ್ನಿಂದ ಹೊರಹೋಗಲು ಪ್ರಯತ್ನಿಸಿದ್ದಾನೆ. ಈ ವೇಳೆ ನಾಯಿ ಹಠಾತ್ ದಾಳಿ ನಡೆಸಿ ಖಾಸಗಿ ಭಾಗವನ್ನೇ ಕಚ್ಚಿದೆ. ದಾಳಿ ನಂತರ ವ್ಯಕ್ತಿಯ ಪ್ಯಾಂಟ್ ರಕ್ತ ಹರಿದು ಕೆಂಪಗಾಗಿರುವುದನ್ನು ಕಾಣಬಹುದು.
ಅರುಣ್ ಪುದೂರ್ ಎಂಬ ವ್ಯಕ್ತಿ ತಮ್ಮ ಟ್ವಿಟರ್ ಖಾತೆಯಲ್ಲಿ ಘಟನೆಯ ವಿಡಿಯೋವನ್ನ ಹಂಚಿಕೊಂಡಿದ್ದು, ಮೊಂಬೈನಲ್ಲಿ ನಡೆದ ಘಟನೆ ಎಂದು ವಿವರಿಸಿದ್ದಾರೆ. “ಮುಂಬೈ: ಲಿಫ್ಟ್ನಿಂದ ಇಳಿಯುತ್ತಿದ್ದ Zomato ಡೆಲಿವರಿ ಮಾಡುವ ವ್ಯಕ್ತಿಯ ಖಾಸಗಿ ಅಂಗವನ್ನು ನಾಯಿ ಕಚ್ಚಿದೆ. ಕೆಲ ದಿನಗಳ ಹಿಂದೆ ಮಗುವೊಂದಕ್ಕೂ ಕಚ್ಚಿತ್ತು. ನಾಯಿ ಮಾಲೀಕರನ್ನು ಶಿಕ್ಷಿಸಲು ಕಾನೂನು ಜಾರಿಗೆ ತರಲು ಇದು ಸಮಯವಾಗಿದೆ. ಇದು ಅಪಾಯಕಾರಿಯಾಗುತ್ತಿದೆ” ಎಂದು ಶೀರ್ಷಿಕೆ ಬರೆದಿದ್ದಾರೆ.
⚠️Graphic ⚠️
Mumbai: #Zomato delivery man's private part was bitten by a dog while getting off the lift.
Days ago a child was bitten too.
It is about time laws to punish the dog owners is implemented. Same goes for stray dogs on the street. This is getting dangerous. pic.twitter.com/9F7m2roN3p
— Arun Pudur ?? (@arunpudur) September 9, 2022
ಈ ಹಿಂದೆ ಘಾಝಿಯಾಬಾದ್ ಹೌಸಿಂಗ್ ಸೊಸೈಟಿ ಲಿಫ್ಟ್ನಲ್ಲಿ ಸಾಕುನಾಯಿಯೊಂದು ಬಾಲಕನನ್ನು ಕಚ್ಚುತ್ತದೆ. ನೋವಿನಿಂದ ಬಾಲಕ ಒದ್ದಾಡುತ್ತಿದ್ದರೂ ನಾಯಿಯ ಪೋಷಕಿ ಏನೂ ನಡೆದೇ ಇಲ್ಲವೆಂಬಂತೆ ನಿಂತುಕೊಂಡಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ಬಾಲಕನ ತಂದೆ ಆತಂಕ, ಕೋಪದಿಂದ ಕೇಳಿದಾಗ ಈಕೆ ತನಗಿದು ಸಂಬಂಧವೇ ಇಲ್ಲವೆಂಬಂತೆ ವಾದಿಸಿ ನುಣುಚಿಕೊಳ್ಳಲು ಪ್ರಯತ್ನಿಸಿದ್ದನ್ನು ಕೂಡ ವಿಡಿಯೋದಲ್ಲಿ ಕಾಣಬಹುದು.
ಉತ್ತಮ ತಳಿಯ ಅಥವಾ ಅಪಾಯಕಾರಿ ಶ್ವಾನಗಳನ್ನು ಸಾಕುತ್ತಿರುವ ಮಂದಿ ತಮ್ಮೊಂದಿಗೆ ಲಿಫ್ಟ್ನಲ್ಲಿ ಅವುಗಳನ್ನೂ ಕೊಂಡೊಯ್ಯುತ್ತಿರುವುದು ಅಪಾಯಕಾರಿ ಎಂಬೂದನ್ನು ಎರಡು ಘಟನೆಗಳು ಸಾಕ್ಷಿಯಾಗಿ ನಮ್ಮ ಕಣ್ಣಮುಂದೆಯೇ ಇದೆ. ಲಿಫ್ಟ್ನಲ್ಲಿ ನಾಯಿಗಳನ್ನು ಕೊಂಡೊಯ್ಯದಂತೆ ಕಟ್ಟಡ ಮಾಲೀಕರು ನಿಯಮ ಜಾರಿ ಮಾಡಬೇಕು ಮತ್ತು ಸರ್ಕಾರಗಳು ಕೂಡ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ನಾಯಿ ಮಾಲೀಕರನ್ನು ಶಿಕ್ಷಿಸಲು ಕಾನೂನು ಜಾರಿಗೆ ತರಬೇಕಿದೆ. ಈ ರೀತಿ ನೆಟ್ಟಿಗರು ಕೂಡ ಒತ್ತಾಯಿಸುತ್ತಿದ್ದಾರೆ.
ಮತ್ತಷ್ಟು ಟ್ರೆಂಡಿಂಗ್ ವಿಡಿಯೋನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published On - 11:18 am, Sun, 11 September 22