AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈರಲ್: ಇನ್ನೇನು ತಾಳಿ ಕಟ್ಟಬೇಕು ಆಗ ಎಂಟ್ರಿ ಕೊಟ್ಟ ಬಾಯ್​ಫ್ರೆಂಡ್​, ಅಷ್ಟೇ! ಆ ಮೇಲೆ ಎನಾಯ್ತು?

ಚೆನ್ನೈನ ತಂಡಯಾರ್‌ನ 20 ವರ್ಷದ ಸುಮತಿ ಎಂಬಾಕೆಗೆ 4 ತಿಂಗಳ ಹಿಂದೆ ಅದೇ ಪ್ರದೇಶದಲ್ಲಿ ವಾಸಿಸುವ ರಾಜ್ ಎಂಬ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥವಾಗಿತ್ತು. ಇತ್ತೀಚೆಗಷ್ಟೇ ಉಭಯ ಕುಟುಂಬಸ್ಥರು ಇಬ್ಬರಿಗೂ ಮದುವೆ ಏರ್ಪಡಿಸಿದ್ದರು. ಇನ್ನು ಕೆಲವೇ ಕ್ಷಣಗಳಲ್ಲಿ ಮದುವೆ.. ವಧುವಿನ ಕೊರಳಿಗೆ ತಾಳಿ ಕಟ್ಟಲು ವರ ಸಿದ್ಧನಿದ್ದ.. ಅಷ್ಟೇ!

ವೈರಲ್: ಇನ್ನೇನು ತಾಳಿ ಕಟ್ಟಬೇಕು ಆಗ ಎಂಟ್ರಿ ಕೊಟ್ಟ ಬಾಯ್​ಫ್ರೆಂಡ್​, ಅಷ್ಟೇ! ಆ ಮೇಲೆ ಎನಾಯ್ತು?
ವೈರಲ್: ಇನ್ನೇನು ತಾಳಿ ಕಟ್ಟಬೇಕು ಆಗ ಎಂಟ್ರಿ ಕೊಟ್ಟ ಬಾಯ್​ಫ್ರೆಂಡ್​, ಅಷ್ಟೇ! ಆ ಮೇಲೆ ಎನಾಯ್ತು?Image Credit source: aajkikhabar
TV9 Web
| Updated By: ಸಾಧು ಶ್ರೀನಾಥ್​|

Updated on: Sep 10, 2022 | 5:26 PM

Share

ಇನ್ನೇನು ಕೆಲವೇ ಕ್ಷಣಗಳಲ್ಲಿ ಮದುವೆ ಸುಲಲಿತವಾಗಿ ನೆರವೇರಬೆಕಿತ್ತು.. ವರ ಮಹಾಶಯ ವಧುವಿನ ಕೊರಳಿಗೆ ತಾಳಿ ಕಟ್ಟುವ ಸಮಯ ಬಂದೇ ಬಿಟ್ಟಿತ್ತು. ಅಷ್ಟೇ! ಸೀನ್ ಕಟ್ ಮಾಡಿದರೆ… ವಧುವಿನ ಗೆಳೆಯ ಮದುವೆ ಮಂಟಪಕ್ಕೆ ನುಗ್ಗಿಬಂದವನೇ, ಎಲ್ಲರಿಗೂ ಶಾಕ್ ಕೊಡುತ್ತಾನೆ. ಒಟ್ಟಿನಲ್ಲಿ ಸಿನಿಮಾದ ಸ್ಟೈಲ್ ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಗಳು.. ಕೊನೆಗೆ ಏನಾಯ್ತು ತಮಿಳುನಾಡಿನ ತಂಡಯಾರ್ ನಲ್ಲಿ ನಡೆದಿದ್ದ ಈ ಘಟನೆಯಲ್ಲಿ ಅಂದರೆ…

ವಿವರಕ್ಕೆ ಹೋಗುವುದಾದರೆ.. ಚೆನ್ನೈನ ತಂಡಯಾರ್‌ನ 20 ವರ್ಷದ ಸುಮತಿ ಎಂಬಾಕೆಗೆ 4 ತಿಂಗಳ ಹಿಂದೆ ಅದೇ ಪ್ರದೇಶದಲ್ಲಿ ವಾಸಿಸುವ ರಾಜ್ ಎಂಬ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥವಾಗಿತ್ತು. ಇತ್ತೀಚೆಗಷ್ಟೇ ಉಭಯ ಕುಟುಂಬಸ್ಥರು ಇಬ್ಬರಿಗೂ ಮದುವೆ ಏರ್ಪಡಿಸಿದ್ದರು. ಇನ್ನು ಕೆಲವೇ ಕ್ಷಣಗಳಲ್ಲಿ ಮದುವೆ.. ವಧುವಿನ ಕೊರಳಿಗೆ ತಾಳಿ ಕಟ್ಟಲು ವರ ಸಿದ್ಧನಿದ್ದ.. ಅಷ್ಟೇ! ಅಷ್ಟರಲ್ಲಿ ಕಥೆಯಲ್ಲಿ ಶಾಕಿಂಗ್ ಟ್ವಿಸ್ಟ್ ಸಿಕ್ತು. ಮದುವೆಗೆ ಬಂದಿದ್ದ ವ್ಯಕ್ತಿಯೊಬ್ಬರು ವೇದಿಕೆಯ ಮೇಲೆ ಬಂದು ವರನಿಂದ ತಾಳಿ ಕಿತ್ತುಕೊಂಡರು. ಅದನ್ನು ವಧುವಿನ ಕೊರಳಿಗೆ ಕಟ್ಟಲು ಯತ್ನಿಸಿದ್ದಾನೆ!

ಆ ವ್ಯಕ್ತಿ ಬೇರೆ ಯಾರೋ ಅಲ್ಲ. ವಧುವಿನ ಗೆಳೆಯನೇ ಅರ್ಥಾತ್ ಬಾಯ್​ಫ್ರೆಂಡ್! ವಧುವಿನ ಸಹೋದರ ಮತ್ತು ಸಂಬಂಧಿಕರು ಈತನ ಕೃತ್ಯದಿಂದ ಆಘಾತಕ್ಕೊಳಗಾಗಿದ್ದಾರೆ. ಬಳಿಕ ಬೆಂಡೆತ್ತಿ ಬ್ರೇಕ್ ಹಾಕಿ, ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಪೊಲೀಸ್ ತನಿಖೆಯಿಂದ ಆ ವ್ಯಕ್ತಿ ತಾಂಡಾಯಾರ್ ನ ಸುಂದರೇಶ್ ಎಂದು ತಿಳಿದು ಬಂದಿದೆ. ಯುವತಿ ಮತ್ತು ಈ ವ್ಯಕ್ತಿ ಒಂದೇ ಜಾಗದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು.. ಆ ಪರಿಚಯ ಪ್ರೇಮಕ್ಕೆ ತಿರುಗಿತ್ತು.. ಪೋಷಕರ ಮನವೊಲಿಸಲು ಸಾಧ್ಯವಾಗದ ಕಾರಣ ಅವೆರ ಮದುವೆ ಏರ್ಪಟ್ಟಿಲ್ಲ. ಬದಲಿಗೆ ತನ್ ಮನದನ್ನೆಯ ಮದುವೆ ಬೇರೊಬ್ಬನ ಜತೆ ತನ್ನ ಕಣ್ಣೆದುರೇ ನಡೆಯುತ್ತಿರುವುದನ್ನು ಸಹಿಸಲಾಗದೆ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಆದರೆ, ಆ ವೇಳೆಗಾಗಲೇ ವಧುವಿನ ಗೆಳೆಯ ದಿಢೀರ್ ಎಂಟ್ರಿ ಕೊಟ್ಟಿದ್ದರಿಂದ, ನಡೆಯಬೇಕಿದ್ದ ಮದುವೆ ನಿಂತು ಹೋಗಿತ್ತು!

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ