AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಹೇಗಿದೆ ನಮ್ಮ ಜೋಡಿ? ಆಟೋವಾಲಾನೊಂದಿಗೆ ನಿತ್ಯವೂ ಪ್ರಯಾಣಿಸುವ ಈ ಬೀದಿನಾಯಿ

Dog Traveling with Auto Driver : ನಾನು ಮೋತಿ ಅಂತ. ಎಷ್ಟಂತ ಮನೆ, ಬೀದಿ ಕಾಯೋದು? ನನಗೂ ಸ್ವಲ್ಪ ಚೇಂಜ್ ಬೇಕನ್ನಿಸಿದೆ. ದಿನಾ ಹೀಗೆ ಡ್ರೈವರ್ ಅಂಕಲ್ ಜೊತೆ ಸೇರಿ ಡ್ರೈವಿಂಗ್​ ಕಲೀತಿದೀನಿ. ಸರಿ ಅಲ್ವಾ ನನ್ನ ಯೋಚನೆ?

Viral Video : ಹೇಗಿದೆ ನಮ್ಮ ಜೋಡಿ? ಆಟೋವಾಲಾನೊಂದಿಗೆ ನಿತ್ಯವೂ ಪ್ರಯಾಣಿಸುವ ಈ ಬೀದಿನಾಯಿ
ನಿತ್ಯವೂ ನಮ್ಮ ಪ್ರಯಾಣ ಹೀಗೇ
TV9 Web
| Updated By: ಶ್ರೀದೇವಿ ಕಳಸದ|

Updated on:Sep 12, 2022 | 10:42 AM

Share

Viral Video : ನಾಯಿಬೆಕ್ಕುಗಳ ಸಾಂಗತ್ಯ ಮನುಷ್ಯನಿಗೆ ಬೇಕೇಬೇಕು. ಹಾಗೆಯೇ ಅವುಗಳಿಗೂ ಮನುಷ್ಯ ಬೇಕು. ಹಾಗಂತ ಸದಾ ಅವುಗಳೊಂದಿಗೆ ಇರಲಾಗುವುದಾ? ದುಡಿಯಬೇಕೆಂದರೆ ಅವುಗಳನ್ನು ಬಿಟ್ಟು ಹೊರಡಲೇಬೇಕು. ಹೊರಡುವಾಗ ಅವುಗಳು ಚಿಕ್ಕಮಕ್ಕಳಂತೆ ಹಠ ಮಾಡುವುದನ್ನು ನೋಡಿದರೆ ಒಂದು ಹೆಜ್ಜೆಯನ್ನೂ ಮುಂದೆ ಇಡಲಾಗದು. ಹಾಗೆ ಮುದ್ದಿನಿಂದ ಜೋತುಬೀಳುತ್ತವೆ. ಮನೆಗಳಲ್ಲಿ ಸಾಕಿದ ನಾಯಿಬೆಕ್ಕುಗಳ ಕಥೆ ಇದಾದರೆ, ಬೀದಿಯಲ್ಲಿರುವ ನಾಯಿಗಳು ಮತ್ತೊಂದು ಥರ. ಅಲ್ಲಿರುವ ಮನೆಗಳೆಲ್ಲವೂ ಅದಕ್ಕೆ ಪ್ರಿಯವೇ. ಏಕೆಂದರೆ ಒಬ್ಬರಿಲ್ಲಾ ಒಬ್ಬರು ನಿತ್ಯವೂ ಆಹಾರ ನೀಡುತ್ತಲೇ ಇರುತ್ತಾರೆ. ಆದರೂ ಬೀದಿನಾಯಿಗಳಿಗೂ ತನ್ನದೇ ಆಯ್ಕೆ ಎನ್ನುವುದಿರುತ್ತದೆ; ಫೇವರಿಟ್​ ಪರ್ಸನ್. ಈ ವಿಡಿಯೋ ಗಮನಿಸಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇತ್ತೀಚೆಗೆ ವೈರಲ್ ಆದ ವಿಡಿಯೋದಲ್ಲಿ ಆಟೋ ರಿಕ್ಷಾ ಡ್ರೈವರ್​ನೊಂದಿಗೆ ನಿತ್ಯವೂ ಈ ಬೀದಿನಾಯಿ ಹೀಗೆಯೇ ಪ್ರಯಾಣಿಸುತ್ತದೆ. ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಈ ಪುಟಕ್ಕೆ 8,000ಕ್ಕಿಂತಲೂ ಹೆಚ್ಚು ಫಾಲೋವರ್ಸ್​ ಇದ್ದಾರೆ. ರಕ್ಷಿಸಿದ ಪ್ರಾಣಿಗಳ ವಿಡಿಯೋ, ಫೋಟೋಗೆಂದೇ ಇದು ಮೀಸಲಾಗಿದೆ. ಈ ಪುಟವನ್ನು ನಿರ್ವಹಿಸುವವರು, ಯಾವುದೋ ಒಂದು ಪ್ರಾಣಿಯನ್ನು ರಕ್ಷಿಸಿ ಮನೆಗೆ ಹಿಂದಿರುಗುವಾಗ ಈ ದೃಶ್ಯವನ್ನು ಕಂಡು ಚಿತ್ರೀಕರಿಸಿದ್ದಾರೆ. ಏನಿದರ ಹೆಸರು ಎಂದು ಕೇಳಿದಾಗ, ‘ಇದರ ಹೆಸರು ಮೋತಿ, ನನ್ನೊಂದಿಗೆ ನಿತ್ಯವೂ ಪ್ರಯಾಣಿಸುವುದೆಂದರೆ ಇದಕ್ಕೆ ಬಹಳ ಪ್ರೀತಿ’ ಎಂದಿದ್ದಾರೆ ಡ್ರೈವರ್​.

ಆಗಸ್ಟ್​ 13ರಂದು ಈ ಪೋಸ್ಟ್ ಮಾಡಲಾಗಿದೆ. 1.9 ಮಿಲಿಯನ್​ಗಿಂತಲೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ.

ನೀವು ಹೃದಯಶ್ರೀಮಂತಿಕೆಯುಳ್ಳವರು ನಿಮ್ಮಿಬ್ಬರಿಗೂ ಒಳ್ಳೆಯದಾಗಲಿ ಎಂದು ನೆಟ್ಟಿಗರೊಬ್ಬರು ಹಾರೈಸಿದ್ದಾರೆ. ಅನ್​ಕಂಡೀಷನಲ್​ ಲವ್ ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ದೇವರು ನಿಮ್ಮಿಬ್ಬರಿಗೂ ಒಳ್ಳೆಯದನ್ನು ಮಾಡಲಿ ಎಂದು ಮತ್ತೊಬ್ಬರು ಹಾರೈಸಿದ್ದಾರೆ. ಬಹುಕಾಲ ಬಾಳು ಮೋತಿ ಎಂದು ಮಗದೊಬ್ಬರು ಆಶಿಸಿದ್ದಾರೆ.

ಬದುಕಿನಲ್ಲಿ ಹಣವನ್ನು ಹೇಗೂ ಪಡೆಯಬಹುದು ಗಳಿಸಬಹುದು. ಆದರೆ ಸಹಾನುಭೂತಿ ಅನುಕಂಪವನ್ನು? ಯೋಚಿಸಿ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 10:41 am, Mon, 12 September 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?