ಪ್ರಪಂಚದಲ್ಲಿ ಚಿತ್ರವಿಚಿತ್ರ ಕಳ್ಳರ ಗುಂಪುಗಳಿವೆ. ಒಂದು ಗುಂಪಿನ ಉದ್ದೇಶ ನಗನಾಣ್ಯ ದೋಚುವುದಾಗಿದ್ದರೆ, ಇನ್ನು ಕೆಳವರು ಅಮೂಲ್ಯ ವಸ್ತುಗಳನ್ನು ಎಗರಿಸುವವರಾಗಿದ್ದರೆ, ಮನೆಯ, ಹೊಟೇಲ್ಗಳ ಪಾತ್ರೆಗಳನ್ನು ಕದಿಯುವ ತಂಡವೂ ಇದೆ. ಬಟ್ಟೆ ಅಂಗಡಿಗಳಲ್ಲಿ ಬಟ್ಟೆಗಳನ್ನು ಕಳ್ಳತನ ಮಾಡಿರುವುದನ್ನು ನೋಡಿದ್ದೇವೆ. ಆದರೆ ಮನೆಯಲ್ಲಿ ಒಣಹಾಕಿದ ಮಹಿಳೆಯರ ಒಳ ಉಡುಪುಗಳನ್ನು ಕದಿಯುವ ಕಳ್ಳರ ಹಾವಳಿಯು ಹೆಚ್ಚಾಗುತ್ತಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ಸಂಬಂಧಿಸಿದ ಒಂದು ವಿಡಿಯೋ ವೈರಲ್ ಆಗುತ್ತಿದೆ.
ಯುವಕನೊಬ್ಬ ಮಧ್ಯರಾತ್ರಿಯಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮನೆಯೊಂದರಲ್ಲಿ ಒಣಹಾಕಿದ್ದ ಮಹಿಳೆಯ ಒಳ ಉಡುಪುಗಳು ಅವನ ಕಣ್ಣಿಗೆ ಬಿದ್ದಿದೆ. ಕೂಡಲೇ ಒಳನುಗ್ಗಿದ ಯುವಕ ಅವುಗಳನ್ನು ಕದ್ದು ನೇರವಾಗಿ ನಡೆದುಕೊಂಡು ಹೋಗಿದ್ದಾನೆ. ಇದರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ವೈರಲ್ ಆಗುತ್ತಿದೆ. ಅಷ್ಟಕ್ಕೂ ಈ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆದಿದೆ. ಮೇಲ್ನೋಟಕ್ಕೆ ಅಂತಹ ಅನೇಕ ಕಳ್ಳತನಗಳು ಈ ಪ್ರದೇಶದಲ್ಲಿ ನಡೆದಿವೆ. ಆದರೆ ಹೆಚ್ಚಿನ ಜನರು ಮುಜುಗರ ಅಥವಾ ಸಾಕ್ಷ್ಯಾಧಾರದ ಕೊರತೆಯಿಂದಾಗಿ ದೂರು ದಾಖಲಿಸಲಿಲ್ಲ ಎನ್ನಲಾಗುತ್ತಿದೆ.
ಮಧ್ಯರಾತ್ರಿ ಕಳ್ಳನೊಬ್ಬ ತನ್ನ ಮನೆಗೆ ನುಗ್ಗಿ ತನ್ನ ಪತ್ನಿಯ ಒಳ ಉಡುಪುಗಳನ್ನು ಕದ್ದಿದ್ದಾನೆ ಎಂದು ಆರೋಪಿಸಿ ಉದ್ಯಮಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ತನಿಖೆಗೆ ಇಳಿದ ಪೊಲೀಸರು ಆರೋಪಿಯ ಬಂಧನಕ್ಕೆ ತನಿಖೆ ಆರಂಭಿಸಿದ್ದಾರೆ. ಅಲ್ಲದೆ ಲಭ್ಯವಾದ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕಳ್ಳನನ್ನು ಆಕಾಶ್ ವರ್ಮಾ ಎಂದು ಗುರುತಿಸಲಾಗಿದ್ದು, ಶೀಘ್ರವೇ ಆತನನ್ನು ಬಂಧಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.
ಈ ಹಿಂದೆ, ಇದೇ ರೀತಿಯ ಪ್ರಕರಣವು ಮೀರತ್ನಲ್ಲಿ ಬೆಳಕಿಗೆ ಬಂದಿತ್ತು. ಒಣಗಲು ಹಾಕಲಾಗಿದ್ದ ಮಹಿಳೆಯರ ಒಳ ಉಡುಪುಗಳನ್ನು ಇಬ್ಬರು ಯುವಕರು ಕದಿಯುತ್ತಿದ್ದಾಗ ಸಿಕ್ಕಿಬಿದ್ದರು.
Published On - 2:50 pm, Sun, 11 September 22