Drishyam 2: 76 ಕೋಟಿ ರೂ. ಕಲೆಕ್ಷನ್ ಮಾಡಿದ ‘ದೃಶ್ಯಂ 2’; ಅಜಯ್ ದೇವಗನ್ ಸಿನಿಮಾ ಸೂಪರ್ ಹಿಟ್
Drishyam 2 Box Office Collection Day 4: ಸೋಮವಾರದ ಪರೀಕ್ಷೆಯಲ್ಲಿ ‘ದೃಶ್ಯಂ 2’ ಸಿನಿಮಾ ಪಾಸ್ ಆಗಿದೆ. ಒಟ್ಟು ನಾಲ್ಕು ದಿನಕ್ಕೆ 76 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಈ ಸಿನಿಮಾ ಸೂಪರ್ ಹಿಟ್ ಆಗಿದೆ.
ಅಜಯ್ ದೇವಗನ್ ನಟನೆಯ ‘ದೃಶ್ಯಂ 2’ (Drishyam 2) ಚಿತ್ರ ಈ ಪರಿ ಕಲೆಕ್ಷನ್ ಮಾಡುತ್ತದೆ ಎಂದು ಬಹುತೇಕರು ಊಹಿಸಿರಲಿಲ್ಲ. ಯಾಕೆಂದರೆ ಇದು ಮಲಯಾಳಂನಿಂದ ಹಿಂದಿಗೆ ರಿಮೇಕ್ ಆದ ಸಿನಿಮಾ. ಒಟಿಟಿಯಲ್ಲಿ ಮಲಯಾಳಂ ‘ದೃಶ್ಯಂ 2’ ಚಿತ್ರವನ್ನು ಪ್ರೇಕ್ಷಕರು ಈ ಮೊದಲೇ ನೀಡಿದ್ದರು. ಹಾಗಿದ್ದರೂ ಕೂಡ ಹಿಂದಿ ರಿಮೇಕ್ ನೋಡಲು ಉತ್ತರ ಭಾರತದ ಮಂದಿ ಮುಗಿ ಬಿದ್ದಿದ್ದಾರೆ. ಅದರ ಪರಿಣಾಮವಾಗಿ ಈ ಚಿತ್ರಕ್ಕೆ ಭರ್ಜರಿ ಕಲೆಕ್ಷನ್ (Drishyam 2 Box Office Collection) ಆಗುತ್ತಿದೆ. 4 ದಿನಕ್ಕೆ ಬರೋಬ್ಬರಿ 76 ಕೋಟಿ ರೂಪಾಯಿ ಹರಿದುಬಂದಿದೆ. ಸೋಮವಾರದ ಪರೀಕ್ಷೆಯಲ್ಲೂ ಈ ಸಿನಿಮಾ ಪಾಸ್ ಆಗಿದ್ದು, ಶೀಘ್ರವೇ ನೂರು ಕೋಟಿ ರೂಪಾಯಿ ಕ್ಲಬ್ ಸೇರಲಿದೆ. ಈ ಸಿನಿಮಾದಿಂದ ನಟ ಅಜಯ್ ದೇವಗನ್ (Ajay Devgn) ಅವರು ಮತ್ತೆ ಮೊದಲಿನ ಚಾರ್ಮ್ ಪಡೆದುಕೊಂಡಿದ್ದಾರೆ.
ಮೊದಲ ವೀಕೆಂಡ್ನಲ್ಲಿಯೇ ‘ದೃಶ್ಯಂ 2’ ನಿರ್ಮಾಪಕರ ಜೇಬು ತುಂಬಿದೆ. ನ.18ರಂದು ತೆರೆಕಂಡ ಈ ಚಿತ್ರದಲ್ಲಿ ಅಜಯ್ ದೇವಗನ್ ಜೊತೆ ಶ್ರೀಯಾ ಶರಣ್, ಟಬು, ಅಕ್ಷಯ್ ಖನ್ನಾ, ಇಶಿತಾ ದತ್ತ ಮುಂತಾದವರು ನಟಿಸಿದ್ದಾರೆ. ಮೊದಲ ದಿನ ಸಂಗ್ರಹ ಆಗಿದ್ದು 15.38 ಕೋಟಿ ರೂಪಾಯಿ. ಎರಡನೇ ದಿನ ಕಲೆಕ್ಷನ್ ಹೆಚ್ಚಿತು. ಶನಿವಾರ (ನ.19) ಬರೋಬ್ಬರಿ 21.59 ಕೋಟಿ ರೂಪಾಯಿ ಆದಾಯ ಹರಿದು ಬಂತು. ಭಾನುವಾರ (ನ.20) 27.17 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು ಈ ಚಿತ್ರದ ಹೆಚ್ಚುಗಾರಿಗೆ.
ಯಾವುದೇ ಚಿತ್ರಕ್ಕೆ ಸೋಮವಾರದ ಗಳಿಕೆ ತುಂಬ ಮುಖ್ಯವಾಗುತ್ತದೆ. ಸೋಮವಾರದ ಪರೀಕ್ಷೆಯಲ್ಲಿ ಚಿತ್ರ ಪಾಸ್ ಆದರೆ ಇನ್ನೂ ಒಂದಷ್ಟು ದಿನ ಉತ್ತಮ ಗಳಿಕೆ ಮಾಡುವುದು ಖಚಿತ. ಈ ವಿಚಾರದಲ್ಲಿ ‘ದೃಶ್ಯಂ 2’ ಸಿನಿಮಾ ಯಶಸ್ವಿ ಆಗಿದೆ. ಸೋಮವಾರ (ನ.21) 11.87 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಮೂಲಕ ಒಟ್ಟು ನಾಲ್ಕು ದಿನಕ್ಕೆ 76 ಕೋಟಿ ರೂಪಾಯಿ ಸಂಗ್ರಹ ಆಗಿದೆ.
#Drishyam2 continues its VICTORIOUS RUN… Trends EXCEPTIONALLY WELL on Day 4 [Mon]… Hits double digits… Crosses ₹ 75 cr… Racing towards ₹ ? cr… #D2 is NOT slowing down soon… Fri 15.38 cr, Sat 21.59 cr, Sun 27.17 cr, Mon 11.87 cr. Total: ₹ 76.01 cr. #India biz. pic.twitter.com/zvLDBp1EUY
— taran adarsh (@taran_adarsh) November 22, 2022
‘ದೃಶ್ಯಂ 2’ ಚಿತ್ರಕ್ಕೆ ಅಭಿಷೇಕ್ ಪಾಠಕ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನೋಡಿದ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆತ್ಮರಕ್ಷಣೆಗಾಗಿ ನಡೆದ ಒಂದು ಕೊಲೆಯನ್ನು ಕಥಾನಾಯಕ ಮುಚ್ಚಿ ಹಾಕುತ್ತಾನೆ. ತನ್ನ ಕುಟುಂಬದವರು ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳದಂತೆ ಚಾಲಾಕಿತನದಿಂದ ಬಚಾವ್ ಮಾಡುತ್ತಾನೆ. ಇದು ‘ದೃಶ್ಯಂ’ ಮೊದಲ ಪಾರ್ಟ್ ಕಥೆ. ಎರಡನೇ ಪಾರ್ಟ್ನಲ್ಲಿ ಆ ಕೇಸ್ ಮತ್ತೆ ಓಪನ್ ಆಗುತ್ತದೆ. ಹಲವು ಟ್ವಿಸ್ಟ್ಗಳ ಮೂಲಕ ಕಥೆ ಸಾಗುತ್ತದೆ. ಈ ಬಾರಿ ಹೀರೋ ತನ್ನ ಕುಟುಂಬವನ್ನು ಹೇಗೆ ರಕ್ಷಿಸುತ್ತಾನೆ ಎಂಬುದು ‘ದೃಶ್ಯಂ 2’ ಕಥಾಹಂದರ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:46 pm, Tue, 22 November 22