ರಾಜ್ ಕುಂದ್ರಾ ಮೇಲೆ ಎಷ್ಟೇ ಆರೋಪ ಇದ್ರೂ ಪತಿಯ ಪರ ನಿಂತ ಶಿಲ್ಪಾ ಶೆಟ್ಟಿ; ದಾಂಪತ್ಯಕ್ಕೀಗ 13 ವರ್ಷ
Shilpa Shetty | Raj Kundra: ನಟಿ ಶಿಲ್ಪಾ ಶೆಟ್ಟಿ ಮತ್ತು ಉದ್ಯಮಿ ರಾಜ್ ಕುಂದ್ರಾ ಅವರು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಇಬ್ಬರ ದಾಂಪತ್ಯ ಜೀವನಕ್ಕೆ 13 ವರ್ಷ ತುಂಬಿದೆ.
ನಟಿ ಶಿಲ್ಪಾ ಶೆಟ್ಟಿ ಅವರು ಉದ್ಯಮಿ ರಾಜ್ ಕುಂದ್ರಾ (Raj Kundra) ಜೊತೆ ಹಾಯಾಗಿ ಸಂಸಾರ ಮಾಡಿಕೊಂಡಿದ್ದಾರೆ. ಈ ಜೋಡಿಯ ಬದುಕಿನಲ್ಲಿ ಕೆಲವು ಕಹಿ ಘಟನೆಗಳು ಎದುರಾದವು ಎಂಬುದು ನಿಜ. ರಾಜ್ ಕುಂದ್ರಾ ವಿರುದ್ಧ ಅಶ್ಲೀಲ ಸಿನಿಮಾ ನಿರ್ಮಾಣದ ಆರೋಪ ಇದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಈಗಾಗಲೇ ಜೈಲಿಗೂ ಹೋಗಿ ಬಂದಿದ್ದಾರೆ. ಇಂಥ ಗಂಭೀರ ಪ್ರಕರಣದಲ್ಲಿ ರಾಜ್ ಕುಂದ್ರಾ ಹೆಸರು ಸೇರಿಕೊಂಡಿದ್ದರೂ ಕೂಡ ಶಿಲ್ಪಾ ಶೆಟ್ಟಿ (Shilpa Shetty) ಅವರು ಪತಿಯನ್ನು ಬಿಟ್ಟುಕೊಟ್ಟಿಲ್ಲ. ಈ ರೀತಿ ಕಠಿಣ ಸಂದರ್ಭದಲ್ಲಿ ಕೂಡ ದಾಂಪತ್ಯದಲ್ಲಿ ಬಿರುಕು ಮೂಡದ ರೀತಿಯಲ್ಲಿ ಅವರು ನಡೆದುಕೊಂಡಿದ್ದಾರೆ. ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಅವರು ಮಂಗಳವಾರ (ನ.22) ವಿವಾಹ ವಾರ್ಷಿಕೋತ್ಸವ (Shilpa Shetty Raj Kundra Wedding Anniversary) ಆಚರಿಸಿಕೊಂಡಿದ್ದಾರೆ.
‘ನನ್ನ ಜೊತೆ ಈ ಪಯಣವನ್ನು ಹಂಚಿಕೊಂಡಿದ್ದಕ್ಕಾಗಿ ಮತ್ತು ಜೀವನವನ್ನು ಸುಂದರವಾಗಿಸಿದ್ದಕ್ಕಾಗಿ ಧನ್ಯವಾದಗಳು’ ಎಂದು ಶಿಲ್ಪಾ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಪತಿಯ ಜೊತೆ ತಾವಿರುವ ಅನೇಕ ಫೋಟೋಗಳನ್ನು ಸೇರಿಸಿ ವಿಡಿಯೋ ರೂಪದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಜೋಡಿಗೆ ಅನೇಕ ಸೆಲೆಬ್ರಿಟಿಗಳು ವಿವಾಹ ವಾರ್ಷಿಕೋತ್ಸವದ ಶುಭಾಶಯ ತಿಳಿಸುತ್ತಿದ್ದಾರೆ.
View this post on Instagram
ಚಿತ್ರರಂಗದಲ್ಲಿ ಶಿಲ್ಪಾ ಶೆಟ್ಟಿ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಈಗಲೂ ಅವರು ತಮ್ಮ ಚಾರ್ಮ್ ಉಳಿಸಿಕೊಂಡಿದ್ದಾರೆ. 2009ರಲ್ಲಿ ಅವರು ಉದ್ಯಮಿ ರಾಜ್ ಕುಂದ್ರಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗೆ ಇಬ್ಬರು ಮಕ್ಕಳು ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಶಿಲ್ಪಾ ಶೆಟ್ಟಿ ಅವರು ಅನೇಕ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.
ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ರಾಜ್ ಕುಂದ್ರಾ ಹೆಸರು ತಳುಕು ಹಾಕಿಕೊಂಡಾಗ ಶಿಲ್ಪಾ ಶೆಟ್ಟಿ ಅವರು ಒಂದಷ್ಟು ದಿನ ಮನೆ ಬಿಟ್ಟು ಹೊರಗೆ ಬಂದಿರಲಿಲ್ಲ. ಇವರ ಸಂಸಾರದಲ್ಲಿ ಬಿರುಕು ಮೂಡಲಿದೆ ಎಂದು ಎಲ್ಲರೂ ಊಹಿಸಿದ್ದರು. ಆದರೆ ಆ ರೀತಿ ಏನೂ ಆಗಲೇ ಇಲ್ಲ. ಕಷ್ಟದ ಪರಿಸ್ಥಿತಿಯಲ್ಲೂ ಕೂಡ ಶಿಲ್ಪಾ ಶೆಟ್ಟಿ ಅವರು ಗಂಡನ ಪರವಾಗಿ ನಿಂತರು.
ಸದ್ಯಕ್ಕೆ ಜಾಮೀನಿನ ಮೇಲೆ ರಾಜ್ ಕುಂದ್ರಾ ಅವರು ಹೊರಗೆ ಇದ್ದಾರೆ. ಸಾರ್ವಜನಿಕವಾಗಿ ಅವರು ಮುಖ ತೋರಿಸಿಕೊಂಡು ಓಡಾಡುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಸಖತ್ ಟ್ರೋಲ್ ಮಾಡಲಾಗುತ್ತಿದೆ. ಆ ವಿಚಾರಗಳ ಬಗ್ಗೆ ಶಿಲ್ಪಾ ಶೆಟ್ಟಿ ತಲೆ ಕೆಡಿಸಿಕೊಂಡಿಲ್ಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:25 pm, Tue, 22 November 22