Shamita Shetty: ಲವ್​ ಮಾಡಿದ್ದು ಸಾಕಾಯ್ತು, ಇನ್ಮುಂದೆ ಜಸ್ಟ್​ ಫ್ರೆಂಡ್ಸ್​; ರಾಕೇಶ್​ ಬಾಪಟ್​ ಜತೆ ಶಿಲ್ಪಾ ಶೆಟ್ಟಿ ತಂಗಿಯ ಬ್ರೇಕಪ್​

Shamita Shetty Raqesh Bapat Breakup: ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಅವರು ರಾಕೇಶ್​ ಬಾಪಟ್​ ಜೊತೆ ಮದುವೆ ಆಗುತ್ತಾರೆ ಎಂದು ಫ್ಯಾನ್ಸ್​ ಊಹಿಸಿದ್ದರು. ಆದರೆ ಈಗ ಬ್ರೇಕಪ್​ ಸುದ್ದಿ ಕೇಳಿ ಅಭಿಮಾನಿಗಳಿಗೆ ಬೇಸರ ಆಗಿದೆ.

Shamita Shetty: ಲವ್​ ಮಾಡಿದ್ದು ಸಾಕಾಯ್ತು, ಇನ್ಮುಂದೆ ಜಸ್ಟ್​ ಫ್ರೆಂಡ್ಸ್​; ರಾಕೇಶ್​ ಬಾಪಟ್​ ಜತೆ ಶಿಲ್ಪಾ ಶೆಟ್ಟಿ ತಂಗಿಯ ಬ್ರೇಕಪ್​
ರಾಕೇಶ್ ಬಾಪಟ್, ಶಮಿತಾ ಶೆಟ್ಟಿ
Follow us
TV9 Web
| Updated By: ಮದನ್​ ಕುಮಾರ್​

Updated on: Jun 10, 2022 | 9:29 AM

ಬಣ್ಣದ ಲೋಕದಲ್ಲಿ ಲವ್​ ಮತ್ತು ಬ್ರೇಕಪ್​ಗಳಿಗೆ ಬರವಿಲ್ಲ. ಪ್ರತಿದಿನ ಸೆಲೆಬ್ರಿಟಿಗಳ ಹೊಸಹೊಸ ಕಥೆಗಳು ಹುಟ್ಟಿಕೊಳ್ಳುತ್ತವೆ. ಒಂದಷ್ಟು ದಿನ ಪ್ರೀತಿಯ ಹೆಸರಲ್ಲಿ ಜೊತೆಜೊತೆಗೆ ಸುತ್ತಾಡಿ, ನಂತರ ಬ್ರೇಕಪ್​ ಮಾಡಿಕೊಳ್ಳುವುದು ಒಂಥರಾ ಟ್ರೆಂಡ್​ ಆಗಿದೆ. ಶಿಲ್ಪಾ ಶೆಟ್ಟಿ (Shilpa Shetty) ತಂಗಿ ಶಮಿತಾ ಶೆಟ್ಟಿ ಕೂಡ ಹಾಗೇ ಮಾಡಿದ್ರಾ ಎಂಬ ಪ್ರಶ್ನೆ ಈಗ ಅಭಿಮಾನಿಗಳ ತಲೆಯಲ್ಲಿ ಕೊರೆಯುತ್ತಿದೆ. ‘ಬಿಗ್​ ಬಾಸ್​ ಒಟಿಟಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಮಿತಾ ಶೆಟ್ಟಿ (Shamita Shetty) ಅವರಿಗೆ ನಟ ರಾಕೇಶ್​ ಬಾಪಟ್​ ಜೊತೆಗೆ ಸ್ನೇಹ ಚಿಗುರಿತ್ತು. ನಂತರ ಅದೇ ಸ್ನೇಹವು ಪ್ರೀತಿಗೆ ತಿರುಗಿತು. ‘ಬಿಗ್​ ಬಾಸ್​ ಒಟಿಟಿ’ ಮುಗಿದ ಬಳಿಕವೂ ಇಬ್ಬರ ಸಂಬಂಧ ಮುಂದುವರಿದಿತ್ತು. ಅನೇಕ ಸಂದರ್ಭಗಳಲ್ಲಿ ಈ ಪ್ರೇಮಪಕ್ಷಿಗಳು ಒಟ್ಟಾಗಿ ಕಾಣಿಸಿಕೊಂಡಿದ್ದವು. ಆದರೆ ಈಗ ಬೇರೆ ನ್ಯೂಸ್​ ಕೇಳಿಬಂದಿದೆ. ಈ ಜೋಡಿ ಬ್ರೇಕಪ್​ ಮಾಡಿಕೊಂಡಿದೆ ಎನ್ನಲಾಗಿದೆ. ಆ ಕುರಿತು ಶಮಿತಾ ಶೆಟ್ಟಿ ಅವರಾಗಲೀ ಅಥವಾ ರಾಕೇಶ್​ ಬಾಪಟ್​ (Raqesh Bapat) ಆಗಲಿ ಅಧಿಕೃತವಾಗಿ ಹೇಳಿಕೆ ನೀಡುವುದೊಂದೇ ಬಾಕಿ.

ಶಮಿತಾ ಶೆಟ್ಟಿ ಮತ್ತು ರಾಕೇಶ್​ ಬಾಪಟ್​ ಅವರು ಬ್ರೇಕಪ್​ ಮಾಡಿಕೊಳ್ಳಲಿದ್ದಾರೆ ಎಂಬ ಗುಸುಗುಸು ಹಲವು ದಿನಗಳಿಂದ ಕೇಳಿಬರುತ್ತಿತ್ತು. ಆದರೆ ಈವರೆಗೂ ಅದರ ಬಗ್ಗೆ ಅವರ ಕುಟುಂಬದವರು ಅಥವಾ ಆಪ್ತರು ಏನನ್ನೂ ಬಾಯಿ ಬಿಟ್ಟಿಲ್ಲ. ಇವರಿಬ್ಬರು ಬ್ರೇಕಪ್​ ಮಾಡಿಕೊಂಡು ಕೆಲವು ತಿಂಗಳು ಕಳೆದಿದೆ ಎಂದು ‘ಬಾಲಿವುಡ್​ ಲೈಫ್​’ ವರದಿ ಮಾಡಿದೆ. ಆದರೆ ಈ ಸಂಬಂಧದಲ್ಲಿ ಒಂದು ಟ್ವಿಸ್ಟ್​ ಇದೆ. ಪ್ರೇಮಕ್ಕೆ ಅಂತ್ಯ ಹಾಡಿದ್ದರೂ ಕೂಡ ಫ್ರೆಂಡ್ಸ್​ ಆಗಿ ಮುಂದುವರಿಯಲು ಶಮಿತಾ ಶೆಟ್ಟಿ ಮತ್ತು ರಾಕೇಶ್​ ಬಾಪಟ್​ ನಿರ್ಧರಿಸಿದ್ದಾರೆ ಎಂದು ವರದಿ ಪ್ರಕಟ ಆಗಿದೆ!

ಇದನ್ನೂ ಓದಿ: ಕಷ್ಟದ ಸಮಯದಲ್ಲಿ ಅಕ್ಕ-ಭಾವನನ್ನು ಬಿಟ್ಟು ಶಮಿತಾ ಶೆಟ್ಟಿ ಬಿಗ್​ ಬಾಸ್​ಗೆ ಹೋಗಿದ್ದು ಏಕೆ? ಕಾರಣ ತಿಳಿಸಿದ ನಟಿ

ಇದನ್ನೂ ಓದಿ
Image
ಸಲ್ಮಾನ್​ ಖಾನ್​ ಜೊತೆ ಶಮಿತಾ ಶೆಟ್ಟಿ ತುಳು ಮಾತುಕತೆ; ಮಾತೃಭಾಷೆ ಅಭಿಮಾನಕ್ಕೆ ಜನರು ಫಿದಾ
Image
ಮೊದಲ ಬಾಯ್​ಫ್ರೆಂಡ್​ ಮೃತಪಟ್ಟಿದ್ದು ಹೇಗೆ? ಅಳುತ್ತಲೇ ಶಮಿತಾ ಶೆಟ್ಟಿ ಬಿಚ್ಚಿಟ್ರು ಶಾಕಿಂಗ್​ ವಿಚಾರ
Image
‘ಅನುಭವ ಪಡೆಯೋಕೆ ಬಂದಿದೀನಿ’; ಶಮಿತಾ ಶೆಟ್ಟಿ ಎದುರು ಸತ್ಯ ಒಪ್ಪಿಕೊಂಡ ರಾಕೇಶ್​ ಬಾಪಟ್​
Image
ಕೈಯಲ್ಲಿ ಸಿನಿಮಾಗಳೇ ಇಲ್ಲದಿದ್ರೂ ರಾಜ್​ ಕುಂದ್ರಾ ನಾದಿನಿ ಶಮಿತಾ ಶೆಟ್ಟಿ 35 ಕೋಟಿ ಆಸ್ತಿಯ ಒಡತಿ; ಹೇಗೆ ಗೊತ್ತಾ?

ಆರಂಭದ ದಿನಗಳಿಂದಲೂ ತಮ್ಮ ಖಾಸಗಿ ಬದುಕಿನ ವಿವರಗಳನ್ನು ಆದಷ್ಟು ಗೌಪ್ಯವಾಗಿಡಲು ಶಮಿತಾ ಮತ್ತು ರಾಕೇಶ್​ ಬಾಪಟ್​ ಪ್ರಯತ್ನಿಸುತ್ತಿದ್ದರು. ಆ ಕಾರಣದಿಂದಲೇ ಅವರು ಈಗ ಬ್ರೇಕಪ್​ ವಿಚಾರವನ್ನು ಕೂಡ ಗುಟ್ಟಾಗಿ ಇರಿಸಿದ್ದಾರೆ ಎನ್ನಲಾಗಿದೆ. ಬಾಲಿವುಡ್​ನಲ್ಲಿ ಕೆಲವು ಸಿನಿಮಾಗಳನ್ನು ಮಾಡಿದರೂ ಕೂಡ ಶಮಿತಾ ಶೆಟ್ಟಿಗೆ ನಿರೀಕ್ಷಿತ ಮಟ್ಟದ ಗೆಲುವು ಸಿಕ್ಕಿಲ್ಲ. ವಯಸ್ಸು 43 ಆಗಿದ್ದರೂ ಅವರು ಮದುವೆ ಆಗಿಲ್ಲ. ರಾಕೇಶ್​ ಬಾಪಟ್​ ಜೊತೆ ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ ಎಂದು ಫ್ಯಾನ್ಸ್​ ಊಹಿಸಿದ್ದರು. ಆದರೆ ಈಗ ಬ್ರೇಕಪ್​ ಸುದ್ದಿ ಕೇಳಿ ಅಭಿಮಾನಿಗಳಿಗೆ ಬೇಸರ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್