AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shamita Shetty: ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಬಾಳಲ್ಲಿ ಬ್ರೇಕಪ್​; ರಾಕೇಶ್​ ಬಾಪಟ್​ ಜತೆಗಿನ ಸಂಬಂಧ ಅಂತ್ಯ

Shamita Shetty Raqesh Bapat Break Up: ರಾಕೇಶ್​ ಬಾಪಟ್​ ಮತ್ತು ಶಮಿತಾ ಶೆಟ್ಟಿ ನಡುವೆ ಬ್ರೇಕಪ್​ ಆಗಿದೆ ಎಂಬ ಸುದ್ದಿ ಹಲವು ದಿನಗಳಿಂದ ಕೇಳಿಬರುತ್ತಲೇ ಇತ್ತು. ಈಗ ಶಮಿತಾ ಶೆಟ್ಟಿ ಅವರು ಅದನ್ನು ಖಚಿತಪಡಿಸಿದ್ದಾರೆ.

Shamita Shetty: ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಬಾಳಲ್ಲಿ ಬ್ರೇಕಪ್​; ರಾಕೇಶ್​ ಬಾಪಟ್​ ಜತೆಗಿನ ಸಂಬಂಧ ಅಂತ್ಯ
ಶಮಿತಾ ಶೆಟ್ಟಿ, ರಾಕೇಶ್ ಬಾಪಟ್
TV9 Web
| Edited By: |

Updated on: Jul 27, 2022 | 7:14 AM

Share

ಸೆಲೆಬ್ರಿಟಿಗಳ ಲೋಕದಲ್ಲಿ ಲವ್​ ಆಗೋದು ಎಷ್ಟು ಸುಲಭವೋ ಬ್ರೇಕಪ್​ ಆಗೋದು ಕೂಡ ಅಷ್ಟೇ ಸುಲಭ ಎಂಬಂತಾಗಿದೆ. ಸಂಬಂಧ ಚಿಗುರಿದ ಬಳಿಕ ಕೆಲವೇ ತಿಂಗಳು ಕಳೆಯುವುದರೊಳಗೆ ಆ ಸಂಬಂಧಕ್ಕೆ ಎಳ್ಳು-ನೀರು ಬಿಡಲಾಗುತ್ತದೆ. ಅದನ್ನು ಕೆಲವರು ಒಪ್ಪಿಕೊಳ್ಳುತ್ತಾರೆ. ಇನ್ನೂ ಕೆಲವರು ಮುಚ್ಚಿಡುತ್ತಾರೆ. ನಟಿ ಶಮಿತಾ ಶೆಟ್ಟಿ (Shamita Shetty) ಅವರು ತಮ್ಮ ರಿಲೇಷನ್​ಶಿಪ್​ ಬಗ್ಗೆ ಈಗ ನೇರವಾಗಿ ಸ್ಪಷ್ಟನೆ ನೀಡಿದ್ದಾರೆ. ಅವರ ಬದುಕಿನಲ್ಲಿ ಬ್ರೇಕಪ್ ಬಿರುಗಾಳಿ ಬೀಸಿದೆ. ಒಂದಷ್ಟು ದಿನಗಳ ಕಾಲ ನಟ ರಾಕೇಶ್​ ಬಾಪಟ್​ (Raqesh Bapat) ಜೊತೆ ಓಡಾಡುತ್ತಿದ್ದ ಶಮಿತಾ ಶೆಟ್ಟಿ ಈಗ ಪ್ರೀತಿ-ಪ್ರೇಮಕ್ಕೆ ಪೂರ್ಣವಿರಾಮ ಹಾಕಿದ್ದಾರೆ. ರಾಕೇಶ್​ ಬಾಪಟ್​ ಜೊತೆ ತಮಗೆ ಬ್ರೇಕಪ್​ (Shamita Shetty Break Up) ಆಗಿದೆ ಎಂಬುದನ್ನು ಸೋಶಿಯಲ್​ ಮೀಡಿಯಾ ಮೂಲಕ ಅವರು ಖಚಿತ ಪಡಿಸಿದ್ದಾರೆ. ಬಿಗ್​ ಬಾಸ್​ ಒಟಿಟಿ ಮೂಲಕ ಇವರಿಬ್ಬರು ಒಂದಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇಬ್ಬರ ನಡುವಿನ ಸಂಬಂಧ ಹಳಸಿತು.

ಶಮಿತಾ ಶೆಟ್ಟಿ ಅವರಿಗೆ ಈಗ 43 ವರ್ಷ ವಯಸ್ಸು. ಶಿಲ್ಪಾ ಶೆಟ್ಟಿಯ ಸಹೋದರಿ ಎಂಬ ಕಾರಣಕ್ಕೆ ಅವರಿಗೆ ಹೆಚ್ಚು ಪ್ರಚಾರ ಸಿಗುತ್ತದೆ. ರಾಕೇಶ್​ ಬಾಪಟ್​​ ಜೊತೆ ಅವರು ಡೇಟಿಂಗ್​ ಮಾಡಲು ಆರಂಭಿಸಿದಾಗ ಅಭಿಮಾನಿಗಳಿಗೆ ಖುಷಿ ಆಗಿತ್ತು. ಇನ್ನಾದರೂ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂದು ಎಲ್ಲರೂ ಊಹಿಸಿದ್ದರು. ಬಿಗ್​ ಬಾಸ್​ ಒಟಿಟಿ ಮುಗಿದ ಬಳಿಕವೂ ಅನೇಕ ಬಾರಿ ರಾಕೇಶ್​ ಬಾಪಟ್​ ಮತ್ತು ಶಮಿತಾ ಶೆಟ್ಟಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಆದರೆ ಇಬ್ಬರ ಸಂಬಂಧ ಮದುವೆ ಮಂಟಪದವರೆಗೆ ಬಂದಿಲ್ಲ.

ಇದನ್ನೂ ಓದಿ
Image
ಬ್ರೇಕಪ್​ ಬೆನ್ನಲ್ಲೇ ಅನನ್ಯಾ ಪಾಂಡೆಗೆ ಮತ್ತೆ ಲವ್​? ಸ್ಟಾರ್ ಹೀರೋ ಜತೆ ರಿಲೇಶನ್​ಶಿಪ್​
Image
‘ವೈಯಕ್ತಿಕ ಜೀವನದಲ್ಲಿ ನಾನು ಖುಷಿಯಾಗಿದ್ದೇನೆ’; ಬ್ರೇಕಪ್​ನಿಂದ ಚೇತರಿಸಿಕೊಂಡ ಕಿಯಾರಾ ಅಡ್ವಾಣಿ
Image
Nayanthara Marriage: ಪ್ರಭುದೇವ ಜತೆ ಡೇಟಿಂಗ್​ ಮಾಡುತ್ತಿದ್ದ ನಯನತಾರಾ ಬ್ರೇಕಪ್​ ಮಾಡಿಕೊಂಡಿದ್ದು ಯಾಕೆ?
Image
ಬ್ರೇಕಪ್​ಗಳ ರಾಜ ರಣಬೀರ್​ ಜತೆ ಆಲಿಯಾ ಮದುವೆ ಆಗ್ತಿರೋದು ಯಾಕೆ? ಕೊನೆಗೂ ಬಯಲಾಯ್ತು ಸತ್ಯ

ರಾಕೇಶ್​ ಬಾಪಟ್​ ಮತ್ತು ಶಮಿತಾ ಶೆಟ್ಟಿ ನಡುವೆ ಬ್ರೇಕಪ್​ ಆಗಿದೆ ಎಂಬ ಸುದ್ದಿ ಹಲವು ದಿನಗಳಿಂದ ಕೇಳಿಬರುತ್ತಲೇ ಇತ್ತು. ಆದರೆ ಆ ಬಗ್ಗೆ ಯಾರೂ ಅಧಿಕೃತವಾಗಿ ಮಾತನಾಡಿರಲಿಲ್ಲ. ಈಗ ಶಮಿತಾ ಶೆಟ್ಟಿ ಅವರು ಖಚಿತಪಡಿಸಿದ್ದಾರೆ. ‘ಈ ವಿಚಾರವನ್ನು ಸ್ಪಷ್ಟಪಡಿಸುವುದು ತುಂಬ ಮುಖ್ಯ ಎನಿಸುತ್ತಿದೆ. ನಾನು ಮತ್ತು ರಾಕೇಶ್​ ಬಾಪಟ್​​ ಜೊತೆಯಾಗಿಲ್ಲ. ಕಳೆದ ಕೆಲವು ಸಮಯದಿಂದ ನಾವು ದೂರ ಇದ್ದೇವೆ. ಆದರೆ ನಮಗೆ ಬೆಂಬಲ ನೀಡಿದ ಅಭಿಮಾನಿಗಳಿಗೆ ಧನ್ಯವಾದಗಳು. ಇನ್ಮುಂದೆ ಕೂಡ ನಮಗೆ ನಿಮ್ಮ ಪ್ರೀತಿ ನೀಡುವುದನ್ನು ಮುಂದುವರಿಸಿ’ ಎಂದು ಶಮಿತಾ ಶೆಟ್ಟಿ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

Follow Us
Web contact
Web contact

TV9 Kannada

Read More
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ