AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Drishyam 2 Collection: 5ನೇ ದಿನವೂ ಅಬ್ಬರಿಸಿದ ‘ದೃಶ್ಯಂ 2’; 100 ಕೋಟಿ ರೂ. ಸನಿಹದಲ್ಲಿ ಅಜಯ್​ ದೇವಗನ್​ ಸಿನಿಮಾ

Drishyam 2 Box Office Collection Day 5: ವೀಕೆಂಡ್​ ಮಾತ್ರವಲ್ಲದೇ ಬಾಕಿ ದಿನಗಳಲ್ಲೂ ‘ದೃಶ್ಯಂ 2’ ಚಿತ್ರ ಉತ್ತಮ ಕಲೆಕ್ಷನ್​ ಮಾಡುತ್ತಿದೆ. ಶೀಘ್ರದಲ್ಲೇ 100 ಕೋಟಿ ರೂಪಾಯಿ ಗಡಿ ಮುಟ್ಟಲಿದೆ.

Drishyam 2 Collection: 5ನೇ ದಿನವೂ ಅಬ್ಬರಿಸಿದ ‘ದೃಶ್ಯಂ 2’; 100 ಕೋಟಿ ರೂ. ಸನಿಹದಲ್ಲಿ ಅಜಯ್​ ದೇವಗನ್​ ಸಿನಿಮಾ
ಅಜಯ್ ದೇವಗನ್
TV9 Web
| Edited By: |

Updated on:Nov 23, 2022 | 2:40 PM

Share

ಸಸ್ಪೆನ್ಸ್​ ಥ್ರಿಲ್ಲರ್​ ಕಥಾಹಂದರ ಹೊಂದಿರುವ ‘ದೃಶ್ಯಂ 2’ (Drishyam 2) ಸಿನಿಮಾ ಸೂಪರ್ ಹಿಟ್​ ಆಗಿದೆ. ಈ ಸಿನಿಮಾದಿಂದ ಬಹುದಿನಗಳ ಬಳಿಕ ಬಾಲಿವುಡ್​ ಮಾರ್ಕೆಟ್​ನಲ್ಲಿ ಹೊಸ ಚೈತನ್ಯ ಮೂಡಿದೆ. ಅಜಯ್​ ದೇವಗನ್​ (Ajay Devgn) ನಟನೆಯ ಈ ಚಿತ್ರ ಪ್ರತಿ ದಿನ ಬಹುಕೋಟಿ ರೂಪಾಯಿ ಬಾಚಿಕೊಳ್ಳುತ್ತ ಮುನ್ನುಗ್ಗತ್ತಿದೆ. 100 ಕೋಟಿ ರೂಪಾಯಿ ಕ್ಲಬ್​ ಸೇರಲು ಇನ್ನು ಕೆಲವೇ ಕೋಟಿಗಳು ಬಾಕಿ ಇದೆ. ಒಟ್ಟು 5 ದಿನಗಳಲ್ಲಿ ‘ದೃಶ್ಯಂ 2’ ಚಿತ್ರದ ಕಲೆಕ್ಷನ್ (Drishyam 2 Box Office Collection) 86.49 ಕೋಟಿ ರೂಪಾಯಿ ಆಗಿದೆ. ಈ ಸಿನಿಮಾದಿಂದ ಅಜಯ್​ ದೇವಗನ್​ ಅವರ ವೃತ್ತಿಜೀವನದ ಮೈಲೇಜ್​ ಹೆಚ್ಚಿದೆ.

‘ದೃಶ್ಯಂ 2’ ಸಿನಿಮಾ ನವೆಂಬರ್​ 18ರಂದು ಬಿಡುಗಡೆ ಆಯಿತು. ಭರ್ಜರಿ ಓಪನಿಂಗ್​ ಪಡೆದ ಈ ಚಿತ್ರ ಮೊದಲ ದಿನವೇ 15.38 ಕೋಟಿ ರೂಪಾಯಿ ಬಾಚಿಕೊಂಡಿತು. ಎರಡನೇ ದಿನ 21.59 ಕೋಟಿ ರೂಪಾಯಿ, ಮೂರನೇ ದಿನ 27.17 ಕೋಟಿ ರೂಪಾಯಿ, 4ನೇ ದಿನ 11.87 ಕೋಟಿ ಹಾಗೂ 5ನೇ ದಿನ 10.48 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ. ಆ ಮೂಲಕ ಒಟ್ಟು ಕಲೆಕ್ಷನ್​ 86.40 ಕೋಟಿ ರೂಪಾಯಿ ಗಡಿ ಮುಟ್ಟಿದೆ.

ಇದನ್ನೂ ಓದಿ
Image
Drishyam 2 Collection: ಸೋತಿದ್ದ ಬಾಲಿವುಡ್​ಗೆ ‘ದೃಶ್ಯಂ 2’ ಚಿತ್ರದಿಂದ ಹೊಸ ಚೈತನ್ಯ; ಮೂರೇ ದಿನಕ್ಕೆ 64 ಕೋಟಿ ರೂ. ಕಮಾಯಿ
Image
Drishyam 2 Twitter Review: ‘ದೃಶ್ಯಂ 2’ ಟ್ವಿಟರ್​ ವಿಮರ್ಶೆ; ಅಜಯ್​ ದೇವಗನ್​ ಚಿತ್ರಕ್ಕೆ ಪ್ರೇಕ್ಷಕರ ರಿಯಾಕ್ಷನ್​ ಇಲ್ಲಿದೆ..
Image
Mohanlal: ‘ದೃಶ್ಯಂ 3’ ಬರೋದು ಖಚಿತ; ನಿರ್ಮಾಪಕರಿಂದಲೇ ಹೊರಬಿತ್ತು ಅಧಿಕೃತ ಮಾಹಿತಿ
Image
ಮೊದಲ ಪ್ರೇಮಿಯ ಜೊತೆ ಸೇರಿ ತನ್ನದೇ ಮನೆಯ ತಿಜೋರಿ ಚೋರಿ ಮಾಡಿದ ವಿವಾಹಿತೆ! ಕಡೂರಿನಲ್ಲಿ ದೃಶ್ಯಂ ಸೀಕ್ವೆಲ್

2022ರ ವರ್ಷ ಬಾಲಿವುಡ್​ ಪಾಲಿಗೆ ತುಂಬ ನೀರಸವಾದುದು. ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಸಿನಿಮಾಗಳೆಲ್ಲವೂ ಮಕಾಡೆ ಮಲಗಿದವು. ಅವುಗಳ ನಡುವೆ ಗೆಲುವು ಕಂಡ ಚಿತ್ರಗಳ ಸಂಖ್ಯೆ ತುಂಬಾ ವಿರಳ. ಗೆದ್ದ ಕೆಲವೇ ಕೆಲವು ಚಿತ್ರಗಳ ಸಾಲಿಗೆ ‘ದೃಶ್ಯಂ 2’ ಕೂಡ ಸೇರ್ಪಡೆ ಆಗಿದೆ.

ಮಲಯಾಳಂನ ‘ದೃಶ್ಯಂ 2’ ಚಿತ್ರವನ್ನೇ ಅಜಯ್​ ದೇವಗನ್​ ಅವರು ಹಿಂದಿಗೆ ರಿಮೇಕ್​ ಮಾಡಿದ್ದಾರೆ. ಮೂಲ ಸಿನಿಮಾ ಒಟಿಟಿಯಲ್ಲಿ ಈಗಾಗಲೇ ಧೂಳೆಬ್ಬಿಸಿದೆ. ಹಾಗಾಗಿ ಹಿಂದಿ ರಿಮೇಕ್​ ಅನ್ನು ಚಿತ್ರಮಂದಿರದಲ್ಲಿ ಜನರ ನೋಡುತ್ತಾರೋ ಇಲ್ಲವೋ ಎಂಬ ಅನುಮಾನ ಬಹುತೇಕರಿಗೆ ಇತ್ತು. ಆದರೆ ಅಚ್ಚರಿಯ ರೀತಿಯಲ್ಲಿ ಈ ಸಿನಿಮಾ ಕಲೆಕ್ಷನ್​ ಮಾಡುತ್ತಿದೆ.

ಅಭಿಷೇಕ್​ ಪಾಠಕ್​ ಅವರು ‘ದೃಶ್ಯಂ 2’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಅಜಯ್​ ದೇವಗನ್​ ಜೊತೆ ಟಬು, ಅಕ್ಷಯ್​ ಖನ್ನಾ, ಇಶಿತಾ ದತ್ತ ಮುಂತಾದವರು ನಟಿಸಿದ್ದಾರೆ. ಕೊಲೆ ಕೌತುಕದ ಕಹಾನಿ ನೋಡಲು ಸಿನಿಪ್ರಿಯರು ಚಿತ್ರಮಂದಿರಕ್ಕೆ ಮುಗಿ ಬಿದ್ದಿದ್ದಾರೆ. ಎಲ್ಲರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವೀಕೆಂಡ್​ ಮಾತ್ರವಲ್ಲದೇ ಬಾಕಿ ದಿನಗಳಲ್ಲೂ ಈ ಚಿತ್ರ ಉತ್ತಮ ಕಲೆಕ್ಷನ್​ ಮಾಡುತ್ತಿದೆ. ಶೀಘ್ರದಲ್ಲೇ 100 ಕೋಟಿ ರೂಪಾಯಿ ಗಡಿ ಮುಟ್ಟಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:40 pm, Wed, 23 November 22