‘ದೃಶ್ಯಂ 2’ ಚಿತ್ರದಿಂದ ಹಲವು ವರ್ಷಗಳ ಬಳಿಕ ಹೌಸ್​ಫುಲ್ ಪ್ರದರ್ಶನ ಕಂಡಿತು ಈ ಚಿತ್ರಮಂದಿರ

ಮಲಯಾಳಂನಲ್ಲಿ ತೆರೆಗೆ ಬಂದ ‘ದೃಶ್ಯಂ 2’ ಚಿತ್ರವನ್ನು ಅದೇ ಹೆಸರಲ್ಲಿ ಹಿಂದಿಗೆ ರಿಮೇಕ್ ಮಾಡಲಾಗಿದೆ. ಮರ್ಡರ್ ಮಿಸ್ಟರಿ ಕಥೆ ಚಿತ್ರದ ಜೀವಾಳ.

‘ದೃಶ್ಯಂ 2’ ಚಿತ್ರದಿಂದ ಹಲವು ವರ್ಷಗಳ ಬಳಿಕ ಹೌಸ್​ಫುಲ್ ಪ್ರದರ್ಶನ ಕಂಡಿತು ಈ ಚಿತ್ರಮಂದಿರ
ಅಜಯ್ ದೇವಗನ್
TV9kannada Web Team

| Edited By: Rajesh Duggumane

Nov 24, 2022 | 7:37 AM

ಅಜಯ್ ದೇವಗನ್ (Ajay Devgn) ನಟನೆಯ ‘ದೃಶ್ಯಂ 2’ ಸಿನಿಮಾ (Drishyam 2) ಬಾಲಿವುಡ್ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸುತ್ತಿದೆ. ಈ ಸಿನಿಮಾ ಕೇವಲ ಐದು ದಿನಕ್ಕೆ 86 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಾರದ ದಿನಗಳಲ್ಲೂ ಈ ಸಿನಿಮಾ 10 ಕೋಟಿ ರೂಪಾಯಿ ಮೇಲೆ ಬಾಚುತ್ತಿದೆ. ಈ ವಾರಾಂತ್ಯಕ್ಕೆ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸುವ ಸಾಧ್ಯತೆ ಇದೆ. ಶೀಘ್ರದಲ್ಲೇ ಈ ಚಿತ್ರ 100 ಕೋಟಿ ರೂಪಾಯಿ ಕ್ಲಬ್ ಸೇರಲಿದೆ. ಈ ಚಿತ್ರದಿಂದ ಮುಂಬೈನ ಕೆಲ ಚಿತ್ರಮಂದಿರಗಳು ಎಷ್ಟೋ ವರ್ಷಗಳ ಬಳಿಕ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ.

ಮಲಯಾಳಂನಲ್ಲಿ ತೆರೆಗೆ ಬಂದ ‘ದೃಶ್ಯಂ 2’ ಚಿತ್ರವನ್ನು ಅದೇ ಹೆಸರಲ್ಲಿ ಹಿಂದಿಗೆ ರಿಮೇಕ್ ಮಾಡಲಾಗಿದೆ. ಮರ್ಡರ್ ಮಿಸ್ಟರಿ ಕಥೆ ಚಿತ್ರದ ಜೀವಾಳ. ಮೊದಲ ಪಾರ್ಟ್​​ನಲ್ಲಿ ಮಗಳು ಮಾಡಿದ ಕೊಲೆಯನ್ನು ಕಥಾನಾಯಕ ಮುಚ್ಚಿ ಹಾಕುತ್ತಾನೆ. ಆ ಪ್ರಕರಣದಿಂದ ಆತ ತಪ್ಪಿಸಿಕೊಳ್ಳುತ್ತಾನೆ. ಎರಡನೇ ಪಾರ್ಟ್​​ನಲ್ಲಿ ಈ ಕೇಸ್ ರೀ-ಓಪನ್ ಆಗುತ್ತದೆ. ಆಗಲೂ ಕಥಾನಾಯಕ ಬಚಾವ್ ಆಗುತ್ತಾನೆ. ಅದು ಹೇಗೆ ಅನ್ನೋದು ‘ದೃಶ್ಯಂ 2’ ಚಿತ್ರದ ಹೈಲೈಟ್. ಈ ಚಿತ್ರವನ್ನು ಹಿಂದಿ ಮಂದಿ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಈ ಕಾರಣಕ್ಕೆ ಮುಗಿಬಿದ್ದು ಚಿತ್ರಮಂದಿರಕ್ಕೆ ನುಗ್ಗುತ್ತಿದ್ದಾರೆ. ಹೀಗಾಗಿ, ಸಹಜವಾಗಿಯೇ ಚಿತ್ರದ ಕಲೆಕ್ಷನ್ ಹೆಚ್ಚಿದೆ.

ಮುಂಬೈನ ಮರಾಠ ಮಂದಿರ್ ಚಿತ್ರಮಂದಿರ ನಿರ್ಮಾಣ ಆಗಿದ್ದು 1958ರಲ್ಲಿ. ಈ ಸಿನಿಮಾ ಹಾಲ್​ಗೆ ಹಲವು ವರ್ಷಗಳ ಇತಿಹಾಸ ಇದೆ. ಈ ಚಿತ್ರ ಮಂದಿರದಲ್ಲಿ 1000ಕ್ಕೂ ಅಧಿಕ ಆಸನಗಳಿವೆ. ಈ ಸಿನಿಮಾ ಮಂದಿರ ಈಗ ‘ದೃಶ್ಯಂ 2’ ಚಿತ್ರದಿಂದ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ‘ನಮ್ಮ ಕಣ್ಣಲ್ಲಿ ನೀರು ಬರುತ್ತಿದೆ. ಹಿಂದಿ ಚಿತ್ರಗಳು ಈ ಚಿತ್ರಮಂದಿರದಲ್ಲಿ ಹೌಸ್​ಫುಲ್ ಪ್ರದರ್ಶನ ಕಾಣದೆ ಹಲವು ವರ್ಷಗಳೇ ಕಳೆದ್ದವು. ‘ದೃಶ್ಯಂ 2’ ಚಿತ್ರದಿಂದ ನಮ್ಮ ಸಿನಿಮಾ ಮಂದಿರ ಹೌಸ್​ಫುಲ್ ಆಗಿದೆ’ ಎಂದು ಪ್ರದರ್ಶಕ ಮನೋಜ್ ದೇಸಾಯಿ ಅವರು ಫಿಲ್ಮ್​ಫೇರ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Drishyam 2 Collection: 5ನೇ ದಿನವೂ ಅಬ್ಬರಿಸಿದ ‘ದೃಶ್ಯಂ 2’; 100 ಕೋಟಿ ರೂ. ಸನಿಹದಲ್ಲಿ ಅಜಯ್​ ದೇವಗನ್​ ಸಿನಿಮಾ

‘ದೃಶ್ಯಂ 2’ ಸಿನಿಮಾ ನವೆಂಬರ್​ 18ರಂದು ಬಿಡುಗಡೆ ಆಯಿತು. ಭರ್ಜರಿ ಓಪನಿಂಗ್​ ಪಡೆದ ಈ ಚಿತ್ರ ಮೊದಲ ದಿನವೇ 15.38 ಕೋಟಿ ರೂಪಾಯಿ ಬಾಚಿಕೊಂಡಿತು. ಎರಡನೇ ದಿನ 21.59 ಕೋಟಿ ರೂಪಾಯಿ, ಮೂರನೇ ದಿನ 27.17 ಕೋಟಿ ರೂಪಾಯಿ, 4ನೇ ದಿನ 11.87 ಕೋಟಿ ಹಾಗೂ 5ನೇ ದಿನ 10.48 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ. ಆ ಮೂಲಕ ಒಟ್ಟು ಕಲೆಕ್ಷನ್​ 86.40 ಕೋಟಿ ರೂಪಾಯಿ ಗಡಿ ಮುಟ್ಟಿದೆ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada