AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mohanlal: ‘ದೃಶ್ಯಂ 3’ ಬರೋದು ಖಚಿತ; ನಿರ್ಮಾಪಕರಿಂದಲೇ ಹೊರಬಿತ್ತು ಅಧಿಕೃತ ಮಾಹಿತಿ

Mohanlal | Drishyam 3: ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರ್ಮಾಪಕರು ಈ ಸುದ್ದಿ ನೀಡಿದ್ದಾರೆ. ಮೋಹನ್​ ಲಾಲ್​ ನಟಿಸಲಿರುವ ‘ದೃಶ್ಯಂ 3’ ಚಿತ್ರ ಶೀಘ್ರವೇ ಸೆಟ್ಟೇರಲಿದೆ.

Mohanlal: ‘ದೃಶ್ಯಂ 3’ ಬರೋದು ಖಚಿತ; ನಿರ್ಮಾಪಕರಿಂದಲೇ ಹೊರಬಿತ್ತು ಅಧಿಕೃತ ಮಾಹಿತಿ
ಮೋಹನ್ ಲಾಲ್
TV9 Web
| Updated By: ಮದನ್​ ಕುಮಾರ್​|

Updated on:Aug 29, 2022 | 10:30 AM

Share

ಭಾರತೀಯ ಚಿತ್ರರಂಗದಲ್ಲಿ ‘ದೃಶ್ಯಂ’ (Drishyam) ಸಿನಿಮಾ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಮರ್ಡರ್​ ಮಿಸ್ಟರಿ ಕಥೆ ಹೊಂದಿರುವ ಆ ಸಿನಿಮಾದಿಂದ ಮೋಹನ್​ ಲಾಲ್ (Mohanlal)​ ವೃತ್ತಿಜೀವನಕ್ಕೆ ದೊಡ್ಡ ಮೈಲೇಜ್​ ಸಿಕ್ಕಿತು. ಮಲಯಾಳಂನಲ್ಲಿ ಸಿದ್ಧಗೊಂಡ ‘ದೃಶ್ಯಂ’ ಸಿನಿಮಾ ಬೇರೆ ಬೇರೆ ಭಾಷೆಗಳಿಗೆ ರಿಮೇಕ್​ ಆಗಿಯೂ ಯಶಸ್ಸು ಗಳಿಸಿತು. ನಿರ್ದೇಶಕ ಜೀತು ಜೋಸೆಫ್​ ಅವರಿಗೆ ಆ ಚಿತ್ರದಿಂದ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಹೆಚ್ಚಿತು. ಇಷ್ಟೆಲ್ಲ ಸದ್ದು ಮಾಡಿದ ಈ ಚಿತ್ರದ ‘ಪಾರ್ಟ್​ 2’ ಕೂಡ ಸೂಪರ್​ ಹಿಟ್​ ಆಯಿತು. ‘ದೃಶ್ಯಂ 2’ ಚಿತ್ರ ನೇರವಾಗಿ ಒಟಿಟಿಯಲ್ಲಿ ತೆರೆಕಂಡು ಯಶಸ್ಸು ಪಡೆಯಿತು. ಈಗ ‘ದೃಶ್ಯಂ 3’ (Drishyam 3) ಬರೋದು ಕೂಡ ಖಚಿತವಾಗಿದೆ. ಸ್ವತಃ ನಿರ್ಮಾಪಕರೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ಆ ಮೂಲಕ ಫ್ಯಾನ್ಸ್​ ವಲಯದಲ್ಲಿ ಭಾರಿ ನಿರೀಕ್ಷೆ ಹೆಚ್ಚುವಂತೆ ಮಾಡಿದ್ದಾರೆ.

‘ದೃಶ್ಯಂ’ ಸರಣಿ ಸಿನಿಮಾಗಳನ್ನು ನಿರ್ಮಾಪಕ ಆ್ಯಂಟನಿ ಪೆರುಂಬವೂರ್ ಅವರು ನಿರ್ಮಾಣ ಮಾಡಿದ್ದಾರೆ. ‘ದೃಶ್ಯಂ’ ಮತ್ತು ‘ದೃಶ್ಯಂ 2’ ಚಿತ್ರದಿಂದ ಅವರಿಗೆ ಭರ್ಜರಿ ಲಾಭ ಆಗಿದೆ. ಈಗ ಅವರು ಮೂರನೇ ಪಾರ್ಟ್​ ಮಾಡಲು ಸಿದ್ಧರಾಗಿದ್ದಾರೆ. ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಈ ಸುದ್ದಿಯನ್ನು ನೀಡಿದ್ದಾರೆ. ಮೂರನೇ ಪಾರ್ಟ್​ನಲ್ಲೂ ಹೀರೋ ಆಗಿ ಮೋಹನ್ ಲಾಲ್​ ಮಿಂಚಲಿದ್ದಾರೆ.

ಇದನ್ನೂ ಓದಿ
Image
Mohanlal Birthday: ಕುಸ್ತಿಯಲ್ಲಿ ಸ್ಟೇಟ್​ ಚಾಂಪಿಯನ್​ ಆಗಿದ್ದ ಮೋಹನ್​ಲಾಲ್​ ನಂತರ ನಟನಾಗಿದ್ದು ಹೇಗೆ?
Image
Drushyam 2 Teaser: ಬಿಡುಗಡೆಯಾಯ್ತು ವೆಂಕಟೇಶ್ ನಟನೆಯ ದೃಶ್ಯಂ 2 ಟೀಸರ್; ಚಿತ್ರದ ಬಿಡುಗಡೆ ಯಾವಾಗ? ಇಲ್ಲಿದೆ ಮಾಹಿತಿ
Image
Mohanlal: ‘ದೃಶ್ಯಂ’ ಸರಣಿಯ ಯಶಸ್ಸಿನ ನಂತರ ಮತ್ತೆ ಒಂದಾದ ಮೋಹನ್​ಲಾಲ್, ಜೀತು ಜೋಸೆಫ್ ಜೋಡಿ; ಯಾವ ಚಿತ್ರ?
Image
ದೃಶ್ಯಂ ಸಿನಿಮಾ ನಿರ್ದೇಶಕರ ಸಾವಿನ ಸುದ್ದಿ ಕೇವಲ ವದಂತಿ ಎಂದ ಸ್ನೇಹಿತರು

ಕುಟುಂಬದ ರಕ್ಷಣೆಗಾಗಿ ಕಥಾನಾಯಕನ ಪತ್ನಿ ಒಂದು ಕೊಲೆ ಮಾಡುತ್ತಾಳೆ. ಆ ಕೊಲೆ ಪ್ರಕರಣದಿಂದ ಪತ್ನಿ ಮತ್ತು ಮಕ್ಕಳನ್ನು ಬಚಾವ್​ ಮಾಡಲು ಹೀರೋ ಕಷ್ಟಪಡುತ್ತಾನೆ. ಬುದ್ಧಿವಂತಿಕೆಯಿಂದಲೇ ಎಲ್ಲವನ್ನೂ ಆತ ನಿಭಾಯಿಸುತ್ತಾನೆ. ಪೊಲೀಸರಿಗೆ ಹೆಣವೇ ಸಿಗದ ರೀತಿಯಲ್ಲಿ ಆತ ಚಾಲಾಕಿತನ ತೋರಿಸುತ್ತಾನೆ. ಇದು ‘ದೃಶ್ಯಂ’ ಸಿನಿಮಾದ ಕಥೆ. ಅದರ ಮುಂದುವರಿದ ಭಾಗವಾಗಿ ‘ದೃಶ್ಯಂ 2’ ಚಿತ್ರ ಮೂಡಿಬಂದಿತ್ತು.

‘ದೃಶ್ಯಂ 2’ ಚಿತ್ರದಲ್ಲಿ ಹೆಣ ಸಿಗುತ್ತದೆ. ಆದರೂ ಕೂಡ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವಲ್ಲಿ ಕಥಾನಾಯಕ ಯಶಸ್ವಿ ಆಗುತ್ತಾನೆ. ಅಲ್ಲಿಗೆ ಆ ಕೇಸ್​ ಕ್ಲೋಸ್​ ಆಗುತ್ತದೆ. ಹಾಗಾದರೆ ‘ದೃಶ್ಯಂ 3’ ಚಿತ್ರದಲ್ಲಿ ಮತ್ತೆ ಆ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್​ ಸಿಗಲಿದೆಯಾ? ಮೂರನೇ ಪಾರ್ಟ್​ನಲ್ಲಿ ಹೀರೋಗೆ ಜೈಲು ಶಿಕ್ಷೆ ಆಗುತ್ತಾ? ಅಂತಿಮವಾಗಿ ಈ ಕಥೆಗೆ ಸಿಗುವ ಕನ್​ಕ್ಲೂಷನ್​ ಏನು ಎಂಬುದನ್ನು ತಿಳಿಯಲು ಮೋಹನ್​ ಲಾಲ್​ ಫ್ಯಾನ್ಸ್​ ಕಾಯುತ್ತಿದ್ದಾರೆ.

ಮೋಹನ್​ ಲಾಲ್​ ಅವರ ಕೈಗೆ ಬೇಡಿ ತೊಡಿಸಿರುವ ಒಂದು ಪೋಸ್ಟರ್​ ವೈರಲ್​ ಆಗಿದೆ. ಈ ಪೋಸ್ಟರ್​ ಶೇರ್​ ಮಾಡಿಕೊಳ್ಳುವ ಮೂಲಕ ‘ದೃಶ್ಯಂ 3’ ಚಿತ್ರದ ಮೇಲೆ ತಮಗೆಷ್ಟು ಕಾತರ ಇದೆ ಎಂಬುದನ್ನು ಫ್ಯಾನ್ಸ್​ ತೋರಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:30 am, Mon, 29 August 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ