Mohanlal Birthday: ಕುಸ್ತಿಯಲ್ಲಿ ಸ್ಟೇಟ್​ ಚಾಂಪಿಯನ್​ ಆಗಿದ್ದ ಮೋಹನ್​ಲಾಲ್​ ನಂತರ ನಟನಾಗಿದ್ದು ಹೇಗೆ?

Happy Birthday Mohanlal: ​ಮೋಹನ್​ಲಾಲ್​ ಅವರು ಅನೇಕರಿಗೆ ಸ್ಫೂರ್ತಿ ಆಗಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೇ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಈ ದಿಗ್ಗಜ ನಟನ ಜನ್ಮದಿನಕ್ಕೆ ಶುಭ ಕೋರುತ್ತಿದ್ದಾರೆ.

Mohanlal Birthday: ಕುಸ್ತಿಯಲ್ಲಿ ಸ್ಟೇಟ್​ ಚಾಂಪಿಯನ್​ ಆಗಿದ್ದ ಮೋಹನ್​ಲಾಲ್​ ನಂತರ ನಟನಾಗಿದ್ದು ಹೇಗೆ?
ಮೋಹನ್​ಲಾಲ್
Follow us
TV9 Web
| Updated By: ಮದನ್​ ಕುಮಾರ್​

Updated on: May 21, 2022 | 11:42 AM

ಮಲಯಾಳಂ ಚಿತ್ರರಂಗದಲ್ಲಿ 4 ದಶಕಗಳಿಂದ ಸೂಪರ್​ ಸ್ಟಾರ್​ ಆಗಿ ಮಿಂಚುತ್ತಿದ್ದಾರೆ ಮೋಹನ್​ಲಾಲ್​. ಇಂದಿನ ಯುವ ನಟರಿಗೂ ಪೈಪೋಟಿ ನೀಡುತ್ತ ಅವರು ಡಿಮ್ಯಾಂಡ್​ ಉಳಿಸಿಕೊಂಡಿದ್ದಾರೆ. ಒಂದಕ್ಕಿಂತ ಒಂದು ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಇಂದು (ಮೇ 21) ಅವರ ಜನ್ಮದಿನದ (Mohanlal Birthday) ಪ್ರಯುಕ್ತ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. 62ನೇ ವಯಸ್ಸಿಗೆ ಕಾಲಿಟ್ಟಿರುವ ಅವರಿಗೆ ಸೋಶಿಯಲ್​ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. ಮೋಹನ್​ಲಾಲ್ (Mohanlal) ಜೊತೆ ಕೆಲಸ ಮಾಡಬೇಕು ಎಂದು ಅನೇಕ ಯುವ ನಿರ್ದೇಶಕರು ಹಂಬಲ ವ್ಯಕ್ತಪಡಿಸುತ್ತಿದ್ದಾರೆ. ಅವರು ನಟಿಸಿದ ‘ದೃಶ್ಯಂ’ ಮತ್ತು ‘ದೃಶ್ಯಂ 2’ ಸಿನಿಮಾವನ್ನು ಇಡೀ ದೇಶವೇ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದೆ. ‘ಪುಲಿಮುರುಗನ್​’, ‘ಮರಕ್ಕರ್​’ ಮುಂತಾದ ಅದ್ದೂರಿ ಸಿನಿಮಾಗಳಲ್ಲಿ ನಟಿಸುವ ಮೂಲಕವೂ ಮೋಹನ್​ಲಾಲ್​ ಸೈ ಎನಿಸಿಕೊಂಡಿದ್ದಾರೆ. ವಿಶೇಷ ಎಂದರೆ, ನಟನಾಗುವುದಕ್ಕೂ ಮುನ್ನ ಅವರು ವೃತ್ತಿಪರ ಕುಸ್ತಿಪಟು ಆಗಿದ್ದರು. ಕುಸ್ತಿಯಲ್ಲಿ ಅವರು ರಾಜ್ಯ ಮಟ್ಟದ ಚಾಂಪಿಯನ್​ ಕೂಡ ಆಗಿದ್ದರು. ಆದರೆ ಅವರು ಬದುಕು ಕಟ್ಟಿಕೊಂಡಿದ್ದು ಬಣ್ಣದ ಲೋಕದಲ್ಲಿ. ಹಾಗಾದರೆ ಕುಸ್ತಿ (Wrestling) ಪಟು ಆಗಬೇಕಿದ್ದ ಮೋಹನ್​ಲಾಲ್​ ಅವರು ನಟನಾಗಿ ಮುಂದುವರಿದಿದ್ದಕ್ಕೆ ಕಾರಣ ಏನು? ಇಲ್ಲಿದೆ ವಿವರ..

ಸ್ಟಾರ್​ ನಟನಾಗುವುದಕ್ಕೂ ಮುನ್ನ ಮೋಹನ್​ಲಾಲ್ ಅವರಿಗೆ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಇತ್ತು. ಅವರು ಅತ್ಯುತ್ತಮ ಕುಸ್ತಿ ಪಟು ಆಗಿದ್ದರು. ರಾಜ್ಯ ಮಟ್ಟದ ಚಾಂಪಿಯನ್​ ಆಗಿದ್ದ ಅವರು ರಾಷ್ಟ್ರ ಮಟ್ಟದ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದರು. ದೆಹಲಿಯಲ್ಲಿ ಆಯೋಜನೆಗೊಂಡಿದ್ದ ಸ್ಪರ್ಧೆಗೆ ಅವರು ತೆರಳಬೇಕಿತ್ತು. ಆದರೆ ಮೊದಲ ಸಿನಿಮಾಗೆ ಆಡಿಷನ್​ ನೀಡಲು ತೆರಳಿದ್ದರಿಂದ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸುವುದು ಮಿಸ್​ ಆಯಿತು. ಬಳಿಕ ಅವರು ಚಿತ್ರರಂಗದಲ್ಲೇ ಭವಿಷ್ಯ ಕಟ್ಟಿಕೊಂಡರು.

ಇದನ್ನೂ ಓದಿ
Image
ದೊಡ್ಡ ವಂಚಕನಿಗೂ ಮೋಹನ್​ಲಾಲ್​​ಗೂ ನಂಟು? ಸ್ಟಾರ್​ ನಟನಿ​ಗೆ ಬಂತು ಇಡಿ ನೋಟಿಸ್
Image
‘ತಲೆ ಉಪಯೋಗಿಸಿ ಸ್ವಂತವಾಗಿ ಏನನ್ನಾದರೂ ಮಾಡಿ’; ಕರಣ್ ಜೋಹರ್​ಗೆ ನೆಟ್ಟಿಗರ ಟೀಕೆ
Image
Mohanlal: ಡೈರೆಕ್ಷನ್‌ ಕ್ಯಾಪ್ ತೊಟ್ಟ ಮೊದಲ ಸಿನಿಮಾದಲ್ಲೇ‌ ಗುರುತು ಸಿಗದಷ್ಟು ಬದಲಾದ ಮೋಹನ್‌ಲಾಲ್; ಏನಿದರ ವಿಶೇಷ?
Image
ಹೊರ ಜಗತ್ತಿಗೆ ತಿಳಿಯಲೇ ಇಲ್ಲ ಮೋಹನ್​ಲಾಲ್​-ಪವನ್​ ಕಲ್ಯಾಣ್​ ಭೇಟಿ; ಏನಿದರ ಉದ್ದೇಶ?

ನೂರಾರು ಸಿನಿಮಾಗಳಲ್ಲಿ ನಟಿಸಿ ಅನೇಕ ಸೂಪರ್​ ಹಿಟ್​ ಚಿತ್ರಗಳನ್ನು ನೀಡಿರುವ ಮೋಹನ್​ಲಾಲ್​ ಅವರು ಅನೇಕರಿಗೆ ಸ್ಫೂರ್ತಿ ಆಗಿದ್ದಾರೆ ಅಭಿಮಾನಿಗಳು ಮಾತ್ರವಲ್ಲದೇ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಈ ದಿಗ್ಗಜ ನಟನಿಗೆ ಶುಭ ಕೋರುತ್ತಿದ್ದಾರೆ.

ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಮೋಹನ್​ಲಾಲ್​ ಅವರಿಗೆ ಬೇರೆ ಭಾಷೆಯ ಚಿತ್ರರಂಗದ ಜೊತೆಗೂ ನಂಟು ಇದೆ. ಕನ್ನಡದಲ್ಲಿ ಪುನೀತ್​ ರಾಜ್​ಕುಮಾರ್​ ನಟಿಸಿದ್ದ ‘ಮೈತ್ರಿ’ ಚಿತ್ರದಲ್ಲಿ ಮೋಹನ್​ಲಾಲ್​ ಕೂಡ ಅಭಿನಯಸಿದ್ದರು. ಆ ಸಿನಿಮಾ 2015ರಲ್ಲಿ ತೆರೆಕಂಡಿತು. ತಮಿಳು ಮತ್ತು ತೆಲುಗಿನ ಹಲವು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಎಲ್ಲ ಭಾಷೆಯ ಚಿತ್ರರಂಗದಿಂದಲೂ ಅಭಿಮಾನಿಗಳು ಅವರ ಹುಟ್ಟುಹಬ್ಬದ ಸಲುವಾಗಿ ವಿಶ್​ ಮಾಡುತ್ತಿದ್ದಾರೆ.

ನಟನಾಗಿ ಮಾತ್ರವಲ್ಲದೇ ಕಿರುತೆರೆ ಕಾರ್ಯಕ್ರಮಗಳ ನಿರೂಪಕನಾಗಿಯೂ ಮೋಹನ್​ಲಾಲ್​ ಫೇಮಸ್​ ಆಗಿದ್ದಾರೆ. ಮಲಯಾಳಂ ಬಿಗ್​ ಬಾಸ್​ ನಾಲ್ಕು ಸೀಸನ್​ಗಳನ್ನು ಯಶಸ್ವಿಯಾಗಿ ನಿರೂಪಣೆ ಮಾಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಸಿಂಗಿಂಗ್​ ರಿಯಾಲಿಟಿ ಶೋನಲ್ಲಿ ಅವರು ಜಡ್ಜ್​ ಆಗಿ ಕೆಲಸ ಮಾಡಿದ್ದಾರೆ. ಸಿನಿಮಾ ನಿರ್ಮಾಪಕನಾಗಿ, ವಿತರಕನಾಗಿಯೂ ಅವರು ದಶಕಗಳ ಅನುಭವ ಹೊಂದಿದ್ದಾರೆ. ಹಲವಾರು ಪ್ರಶಸ್ತಿಗಳನ್ನು ಮೋಹನ್​ಲಾಲ್​ ಬಾಚಿಕೊಂಡಿದ್ದಾರೆ. ಅವರ ಮುಂಬರುವ ಸಿನಿಮಾಗಳ ಬಗ್ಗೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ