ದೊಡ್ಡ ವಂಚಕನಿಗೂ ಮೋಹನ್​ಲಾಲ್​​ಗೂ ನಂಟು? ಸ್ಟಾರ್​ ನಟನಿ​ಗೆ ಬಂತು ಇಡಿ ನೋಟಿಸ್

ದೊಡ್ಡ ವಂಚಕನಿಗೂ ಮೋಹನ್​ಲಾಲ್​​ಗೂ ನಂಟು? ಸ್ಟಾರ್​ ನಟನಿ​ಗೆ ಬಂತು ಇಡಿ ನೋಟಿಸ್
ಮೋಹನ್​ಲಾಲ್

ಮೋಹನ್​ಲಾಲ್ ಹಾಗೂ ಮಾನ್ಸನ್ ನಡುವೆ ಗೆಳೆತನವಿತ್ತೇ ಎನ್ನುವ ಅನುಮಾನ ಇಡಿ ಅಧಿಕಾರಿಗಳಿಗೆ ಮೂಡಿದೆ. ಏಕೆಂದರೆ ಈ ಮೊದಲು ಮಾನ್ಸನ್​ ಮನೆಗೆ ಮೋಹನ್​ಲಾಲ್ ಅವರು ಒಮ್ಮೆ ಭೇಟಿ ನೀಡಿದ್ದರು.

TV9kannada Web Team

| Edited By: Rajesh Duggumane

May 14, 2022 | 6:20 PM

ಮೋಹನ್​ಲಾಲ್ ಅವರು (Mohanlal) ಮಲಯಾಳಂನಲ್ಲಿ ದೊಡ್ಡ ಮಟ್ಟದ ಖ್ಯಾತಿ ಪಡೆದುಕೊಂಡಿದ್ದಾರೆ. ಈಗ ಅವರಿಗೆ ಸಂಕಷ್ಟ ಒಂದು ಎದುರಾಗಿದೆ. ಅಕ್ರಮ ಹಣ ವರ್ಗಾವಣೆ (Money Laundering Case) ಪ್ರಕರಣದಲ್ಲಿ ಅವರ ಹೆಸರು ತಳುಕು ಹಾಕಿಕೊಂಡಿದೆ. ಹೀಗಾಗಿ, ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಮೋಹನ್​ಲಾಲ್ ಮೇಲೆ ಕಣ್ಣಿಟ್ಟಿದ್ದಾರೆ. ಅವರಿಗೆ ನೋಟಿಸ್ ನೀಡಲಾಗಿದ್ದು, ಮುಂದಿನ ವಾರ ಅವರು ವಿಚಾರಣೆಗೆ ಹಾಜರಿ ಹಾಕಲಿದ್ದಾರೆ ಎನ್ನಲಾಗುತ್ತಿದೆ.

ಪುರಾತನ ವಸ್ತುಗಳ ಹೆಸರಿನಲ್ಲಿ ಕೇರಳದ ವ್ಯಾಪಾರಿ ಮಾನ್ಸನ್ ಮಾವುಂಕಲ್ ಅನೇಕರಿಗೆ ವಂಚಿಸಿದ್ದಾನೆ. ಅಕ್ರಮ ಹಣ ವರ್ಗವಣೆ ಪ್ರಕರಣದಲ್ಲಿ ಅವನ ವಿರುದ್ಧ ತನಿಖೆ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಮೋಹನ್​ಲಾಲ್​ಗೆ ನೋಟಿಸ್ ನೀಡಲಾಗಿದೆ ಎನ್ನಲಾಗುತ್ತಿದೆ. ಅವರು ಮುಂದಿನ ವಾರ ಕೊಚ್ಚಿಯ ಇಡಿ ಕಚೇರಿಗೆ ತೆರಳಿ ವಿಚಾರಣೆ ಎದುರಿಸಲಿದ್ದಾರೆ ಎಂದು ವರದಿ ಆಗಿದೆ.

ಅಪರೂಪದ ಮತ್ತು ಪುರಾತನ ವಸ್ತುಗಳನ್ನು ಹೊಂದಿದ್ದೇನೆಂದು ಹಲವರಿಗೆ ಮಾನ್ಸನ್ ಮಾವುಂಕಲ್ ವಂಚನೆ ಎಸಗಿದ್ದ. ಈತನ ವಿರುದ್ಧ ಹಲವು ದೂರುಗಳು ಬಂದಿದ್ದವು. ಈ ದೂರನ್ನು ಆಧರಿಸಿ ಮಾವುಂಕಲ್‌ನನ್ನು ಕೇರಳ ಕ್ರೈಂ ಬ್ರ್ಯಾಂಚ್ ಪೊಲೀಸರು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಈತನನ್ನು ಬಂಧಿಸಿದ್ದರು.

ಮಾನ್ಸನ್​ಗೂ ಮೋಹನ್​ಲಾಲ್​ಗೂ ಏನು ಸಂಬಂಧ?

ಮೋಹನ್​ಲಾಲ್ ಹಾಗೂ ಮಾನ್ಸನ್ ನಡುವೆ ಗೆಳೆತನವಿತ್ತೇ ಎನ್ನುವ ಅನುಮಾನ ಇಡಿ ಅಧಿಕಾರಿಗಳಿಗೆ ಮೂಡಿದೆ. ಏಕೆಂದರೆ ಈ ಮೊದಲು ಮಾನ್ಸನ್​ ಮನೆಗೆ ಮೋಹನ್​ಲಾಲ್ ಅವರು ಒಮ್ಮೆ ಭೇಟಿ ನೀಡಿದ್ದರು. ಈ ಭೇಟಿ ಹಿಂದಿನ ಉದ್ದೇಶ ಗುಟ್ಟಾಗಿಯೇ ಉಳಿದಿದೆ. ಈ ಭೇಟಿ ಹಿನ್ನೆಲೆಯಲ್ಲಿ ಅವರಿಗೆ ನೋಟಿಸ್ ಹೋಗಿದೆ ಎನ್ನಲಾಗುತ್ತಿದೆ. ವಿಚಾರಣೆ ವೇಳೆ ಮೋಹನ್​ಲಾಲ್ ಯಾವ ರೀತಿಯ ಉತ್ತರ ನೀಡಲಿದ್ದಾರೆ ಎಂಬುದು ಸದ್ಯದ ಕುತೂಹಲ. (Source)

ಮೋಹನ್​ಲಾಲ್​ ಸಿನಿಮಾ ತೆಲುಗಿಗೆ ರಿಮೇಕ್​:

ಮೋಹನ್​ಲಾಲ್​ ನಟನೆಯ ‘ಲೂಸಿಫರ್​’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಈ ಚಿತ್ರದಲ್ಲಿ ಪೃಥ್ವಿರಾಜ್​ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮೋಹನ್​ಲಾಲ್​​ಗೆ ಸಹಾಯ ಮಾಡುವ ಡಾನ್​ ಪಾತ್ರ ಇದಾಗಿತ್ತು. ಈ ಸಿನಿಮಾದ ತೆಲುಗು ರಿಮೇಕ್​ನಲ್ಲಿ ಮೋಹನ್​ಲಾಲ್​ ಪಾತ್ರವನ್ನು ಚಿರಂಜೀವಿ ಮಾಡಿದರೆ, ಪೃಥ್ವಿರಾಜ್ ಪಾತ್ರವನ್ನು ಸಲ್ಮಾನ್ ಖಾನ್ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada