Mohanlal: ‘ದೃಶ್ಯಂ’ ಸರಣಿಯ ಯಶಸ್ಸಿನ ನಂತರ ಮತ್ತೆ ಒಂದಾದ ಮೋಹನ್​ಲಾಲ್, ಜೀತು ಜೋಸೆಫ್ ಜೋಡಿ; ಯಾವ ಚಿತ್ರ?

Jeethu Joseph: ಮಾಲಿವುಡ್​ನ ಹಿಟ್ ಜೋಡಿಯಾದ ನಿರ್ದೇಶಕ ಜೀತು ಜೋಸೆಫ್ ಹಾಗೂ ನಟ ಮೋಹನ್​ಲಾಲ್ ಜೊತೆಯಾಗಿ ಹೊಸ ಚಿತ್ರವನ್ನು ಘೋಷಿಸಿದ್ದಾರೆ. ಚಿತ್ರಕ್ಕೆ '12th ಮ್ಯಾನ್' ಎಂದು ಹೆಸರಿಡಲಾಗಿದೆ.

Mohanlal: ‘ದೃಶ್ಯಂ’ ಸರಣಿಯ ಯಶಸ್ಸಿನ ನಂತರ ಮತ್ತೆ ಒಂದಾದ ಮೋಹನ್​ಲಾಲ್, ಜೀತು ಜೋಸೆಫ್ ಜೋಡಿ; ಯಾವ ಚಿತ್ರ?
‘12th ಮ್ಯಾನ್’ ಚಿತ್ರದ ಪೋಸ್ಟರ್
Follow us
TV9 Web
| Updated By: shivaprasad.hs

Updated on: Aug 18, 2021 | 12:41 PM

ಮಾಲಿವುಡ್​ನ ಖ್ಯಾತ ನಟ ಮೋಹನ್​ಲಾಲ್  ತಮ್ಮ ಮುಂದಿನ ಚಿತ್ರವನ್ನು ಘೋಷಿಸಿದ್ದಾರೆ. ದೃಶ್ಯಂ 1 ಹಾಗೂ ದೃಶ್ಯಂ 2ರ ಸೂಪರ್​ಹಿಟ್ ನಿರ್ದೇಶಕ ಜೀತು ಜೋಸೆಫ್ ನಿರ್ದೇಶನದಲ್ಲಿ ಚಿತ್ರ ಸೆಟ್ಟೇರಿದೆ. ಮೋಹನ್​ಲಾಲ್ ಟ್ವೀಟ್​ ಮೂಲಕ ಹೊಸ ಚಿತ್ರದ ಪೂಜೆಯ ಸಂದರ್ಭದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರ ಮೋಹನ್​ಲಾಲ್ ಹಾಗೂ ಜೀತು ಜೋಸೆಫ್ ಜೋಡಿಯ ನಾಲ್ಕನೇ ಚಿತ್ರವಾಗಿದೆ. ‘ಚಿಂಗಮ್’ ಮಾಸದ ಮೊದಲನೆಯ ದಿನ ಪೂಜೆ ನಡೆದಿದ್ದು, ಅಭಿಮಾನಿಗಳು ಪುಳಕಿತಗೊಂಡಿದ್ದಾರೆ. ಹೊಸ ಚಿತ್ರಕ್ಕೆ ’12th ಮ್ಯಾನ್’ ಎಂದು ಹೆಸರಿಡಲಾಗಿದೆ. ಮಲಯಾಳಂನ ಖ್ಯಾತ ನಿರ್ಮಾಪಕ ಆಂಟೊನಿ ಪೆರುವಾಂಬೂರ್  ಆಶೀರ್ವಾದ್ ಸಿನಿಮಾಸ್ ಮೂಲಕ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಪೂಜೆಯ ಸಂದರ್ಭದಲ್ಲಿ ಆಂಟೊನಿ ಹಾಗೂ ನಟ ಉನ್ನಿ ಮುಕುಂದನ್ ಸೇರಿದಂತೆ ಹಲವು ತಾರೆಯರು ಉಪಸ್ಥಿತರಿದ್ದರು.

ಈ ಮೊದಲು ಜೀತು ಜೋಸೆಫ್ ನಿರ್ದೇಶನದ  ದೃಶ್ಯಂ ಚಿತ್ರವು ಕನ್ನಡ ಸೇರಿದಂತೆ, ನಾಲ್ಕು ಭಾಷೆಗಳಲ್ಲಿ ರಿಮೇಕ್ ಆಗಿತ್ತು. ಕನ್ನಡದಲ್ಲಿ ನಟ ರವಿಚಂದ್ರನ್ ನಟಿಸಿದ್ದರು. ಇತ್ತೀಚೆಗೆ ದೃಶ್ಯಂ 2 ತೆರೆಕಂಡಿದ್ದು, ಅಪಾರ ಜನಮೆಚ್ಚುಗೆ ಗಳಿಸಿತ್ತು. ದೃಶ್ಯಂನ ಮುಂದುವರೆದ ಭಾಗವಾದ ದೃಶ್ಯಂ 2 ಒಟಿಟಿ ಮುಖಾಂತರ ನೇರವಾಗಿ ತೆರೆಕಂಡಿತ್ತು. ದೃಶ್ಯಂ 2ಗೂ ಮೊದಲು ಜೀತು ಹಾಗೂ ಮೋಹನ್​ಲಾಲ್ ಕಾಂಬಿನೇಷನ್​ನಲ್ಲಿ ಆಕ್ಷನ್ ಥ್ರಿಲ್ಲರ್ ಚಿತ್ರವಾದ ‘ರಾಮ್’ ಸೆಟ್ಟೇರಿತ್ತು. ಆದರೆ ಕೊರೊನಾದ ನಿಯಮಾವಳಿಗಳಿಂದ ಚಿತ್ರವು ಅರ್ಧಕ್ಕೆ ನಿಂತಿದೆ.

ಮೋಹನ್​ಲಾಲ್ ಹಂಚಿಕೊಂಡಿರುವ ಟ್ವೀಟ್:

ಪ್ರಸ್ತುತ ಮೋಹನ್​ಲಾಲ್ ಮಲಯಾಳಂನ ಮತ್ತೊಬ್ಬ ಖ್ಯಾತ ನಟ ಪೃಥ್ವಿರಾಜ್ ಸುಕುಮಾರ್ ಅವರೊಂದಿಗೆ ‘ಬ್ರೊ ಡ್ಯಾಡಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಸ್ವತಃ ಪೃಥ್ವಿರಾಜ್ ನಿರ್ದೇಶಿಸುತ್ತಿದ್ದು, ‘ಲೂಸಿಫರ್’ ನಂತರ ಈ ಜೋಡಿ ಮತ್ತೆ ಒಂದಾಗಿದೆ. ಈ ಚಿತ್ರದಲ್ಲಿ ಬಹುದೊಡ್ಡ ತಾರಾಗಣವಿದ್ದು, ಮೀನಾ, ಕಲ್ಯಾಣಿ ಪ್ರಿಯದರ್ಶನ್, ಲಾಲು ಅಲೆಕ್ಸ್, ಮುರಳಿ ಗೋಪಿ, ಸೌಬಿನ್ ಶಾಹಿರ್ ಮೊದಲಾದವರು ಕಾಣಿಸಿಕೊಳ್ಳುತ್ತಿದ್ದಾರೆ.

ನಟನೆಯಲ್ಲದೇ ಮೋಹನ್​ಲಾಲ್ ಸದ್ಯ ನಿರ್ದೇಶನದ ಕ್ಯಾಪ್ ಸಹ ತೊಟ್ಟಿದ್ದಾರೆ. ಅವರ ಚೊಚ್ಚಲ ನಿರ್ದೇಶನದಲ್ಲಿ ‘ಬರ್ರೋಸ್’ ಚಿತ್ರ ಮೂಡಿಬರಲಿದ್ದು, ಆ ಚಿತ್ರದಲ್ಲೂ ಮೋಹನ್​ಲಾಲ್ ಹಾಗೂ ಪೃಥ್ವಿ ಕಾಣಿಸಿಕೊಳ್ಳಲಿದ್ದಾರೆ. ಮೋಹನ್​ಲಾಲ್ ನಟಿಸಿರುವ ಎರಡು ಚಿತ್ರಗಳು ಬಿಡುಗಡೆಗೆ ತಯಾರಾಗಿವೆ. ಅದರಲ್ಲಿ ‘ಮರಕ್ಕರ್: ಅರಬಿಕಡಲಿಂಟೆ ಸಿಂಹಮ್’ ಚಿತ್ರ ಈಗಾಗಲೇ ಎಲ್ಲರ ಗಮನ ಸೆಳೆದಿದ್ದು, ಮತ್ತೊಂದು ಚಿತ್ರ ‘ಆರಟ್ಟು’ ಕೂಡಾ ನಿರೀಕ್ಷೆ ಹುಟ್ಟಿಸಿದೆ.

ಇದನ್ನೂ ಓದಿ:

ಬಾಲಿವುಡ್​ಗೆ ಶಾರುಖ್​ ಖಾನ್​ ಮಗಳ ಬ್ಯಾಂಗ್ ಎಂಟ್ರಿ; ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ ಸ್ಟಾರ್​ ನಿರ್ದೇಶಕಿ

Kamal Haasan: ಕಮಲ್ ಹಾಸನ್, ಚಾರುಹಾಸನ್, ಮಣಿರತ್ನಂ, ಸುಹಾಸಿನಿ ಎಲ್ಲರೂ ಒಂದೇ ಚಿತ್ರದಲ್ಲಿ; ಏನು ವಿಶೇಷ?

(Jeethu Joseph and Mohanlal again collaborated for 12th Man after Drishyam series hit)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ