Drishyam 2 Collection: ಸೋತಿದ್ದ ಬಾಲಿವುಡ್​ಗೆ ‘ದೃಶ್ಯಂ 2’ ಚಿತ್ರದಿಂದ ಹೊಸ ಚೈತನ್ಯ; ಮೂರೇ ದಿನಕ್ಕೆ 64 ಕೋಟಿ ರೂ. ಕಮಾಯಿ

Drishyam 2 Box Office Collection Day 3: ಅಜಯ್​ ದೇವಗನ್​ ನಟನೆಯ ‘ದೃಶ್ಯಂ 2’ ಚಿತ್ರಕ್ಕೆ ಅಭಿಷೇಕ್​ ಪಾಠಕ್​ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನೋಡಿದ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Drishyam 2 Collection: ಸೋತಿದ್ದ ಬಾಲಿವುಡ್​ಗೆ ‘ದೃಶ್ಯಂ 2’ ಚಿತ್ರದಿಂದ ಹೊಸ ಚೈತನ್ಯ; ಮೂರೇ ದಿನಕ್ಕೆ 64 ಕೋಟಿ ರೂ. ಕಮಾಯಿ
ಅಜಯ್ ದೇವಗನ್
Follow us
TV9 Web
| Updated By: ಮದನ್​ ಕುಮಾರ್​

Updated on: Nov 21, 2022 | 12:15 PM

ಖ್ಯಾತ ನಟ ಅಜಯ್​ ದೇವಗನ್​ (Ajay Devgn) ಅವರು ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳಿದ್ದಾರೆ. ಈ ಹಿಂದಿನ ಸಿನಿಮಾಗಳಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಕಂಡಿರದ ಅವರಿಗೆ ಈಗ ‘ದೃಶ್ಯಂ 2’ (Drishyam 2) ಸಿನಿಮಾದಿಂದ ಗೆಲುವು ಸಿಕ್ಕಿದೆ. ಬಿಡುಗಡೆಯಾದ ಮೂರೇ ದಿನಕ್ಕೆ ಈ ಸಿನಿಮಾ ಬರೋಬ್ಬರಿ 64.14 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಇದು ಅವರ ಅಭಿಮಾನಿಗಳಿಗೆ ಸಖತ್​ ಖುಷಿ ನೀಡಿದೆ. ಇದು ಮಲಯಾಳಂನ ‘ದೃಶ್ಯಂ 2’ ಚಿತ್ರದ ಹಿಂದಿ ರಿಮೇಕ್​. ಉತ್ತರ ಭಾರತದ ಮಂದಿ ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಆ ಮೂಲಕ ಮೊದಲ ವೀಕೆಂಡ್​ನಲ್ಲಿಯೇ ನಿರ್ಮಾಪಕರ ಜೇಬು ತುಂಬಿದೆ. ಬಾಕ್ಸ್​ ಆಫೀಸ್​ ಕಲೆಕ್ಷನ್​ (Drishyam 2 Box Office Collection) ಇದೇ ರೀತಿ ಮುಂದುವರಿದರೆ ಇನ್ನು ಮೂರು ಅಥವಾ ನಾಲ್ಕು ದಿನದಲ್ಲಿ 100 ಕೋಟಿ ರೂಪಾಯಿ ಗಳಿಕೆ ಆಗಲಿದೆ.

ನ.18ರಂದು ‘ದೃಶ್ಯಂ 2’ ಬಿಡುಗಡೆ ಆಯಿತು. ಅಜಯ್​ ದೇವಗನ್​ ಜೊತೆ ಶ್ರೀಯಾ ಶರಣ್​, ಟಬು, ಅಕ್ಷಯ್​ ಖನ್ನಾ, ಇಶಿತಾ ದತ್ತ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಮೊದಲ ದಿನ ಈ ಸಿನಿಮಾದ ಕಲೆಕ್ಷನ್​ ಆಗಿದ್ದು 15.38 ಕೋಟಿ ರೂಪಾಯಿ. ಎರಡನೇ ದಿನ ವೀಕೆಂಡ್​ ಆದ್ದರಿಂದ ಕಲೆಕ್ಷನ್​ ಹೆಚ್ಚಿತು. ಅಂದರೆ, ಶನಿವಾರ (ನ.19) ಬರೋಬ್ಬರಿ 21.59 ಕೋಟಿ ರೂಪಾಯಿ ಆದಾಯ ಬಂತು. ಭಾನುವಾರವಂತೂ (ನ.20) ಚಿತ್ರದ ಗಳಿಕೆ ಗಣನೀಯವಾಗಿ ಏರಿಕೆ ಆಗಿದೆ. ಮೂರನೇ ದಿನ 27.17 ಕೋಟಿ ರೂಪಾಯಿ ಸಂಗ್ರಹ ಆಗುವ ಮೂಲಕ ಈವರೆಗಿನ ಒಟ್ಟು ಕಲೆಕ್ಷನ್​ 64.14 ಕೋಟಿ ರೂಪಾಯಿ ಆಗಿದೆ.

ಇದನ್ನೂ ಓದಿ
Image
‘Drishyam 2’ box office day 2 collection: ಎರಡನೇ ದಿನವು ಗಳಿಕೆಯ ಓಟ ಮುಂದುವರೆಸಿದ ‘ದೃಶ್ಯಂ 2’, ಬಾಕ್ಸ್ ಆಫೀಸ್​ ಕಲೆಕ್ಷನ್​​​ ವಿವರ ಇಲ್ಲಿದೆ
Image
ಬಾಕ್ಸ್ ಆಫೀಸ್​ನಲ್ಲಿ ಬಂಗಾರದ ಬೆಳೆ ತೆಗೆದ ‘ದೃಶ್ಯಂ 2’; ಅಕ್ಷಯ್ ಕುಮಾರ್ ದಾಖಲೆ ಉಡೀಸ್
Image
Drishyam 2 Twitter Review: ‘ದೃಶ್ಯಂ 2’ ಟ್ವಿಟರ್​ ವಿಮರ್ಶೆ; ಅಜಯ್​ ದೇವಗನ್​ ಚಿತ್ರಕ್ಕೆ ಪ್ರೇಕ್ಷಕರ ರಿಯಾಕ್ಷನ್​ ಇಲ್ಲಿದೆ..
Image
Mohanlal: ‘ದೃಶ್ಯಂ 3’ ಬರೋದು ಖಚಿತ; ನಿರ್ಮಾಪಕರಿಂದಲೇ ಹೊರಬಿತ್ತು ಅಧಿಕೃತ ಮಾಹಿತಿ

‘ದೃಶ್ಯಂ 2’ ಚಿತ್ರಕ್ಕೆ ಅಭಿಷೇಕ್​ ಪಾಠಕ್​ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನೋಡಿದ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆತ್ಮರಕ್ಷಣೆಗಾಗಿ ನಡೆದ ಒಂದು ಕೊಲೆಯನ್ನು ಕಥಾನಾಯಕ ಮುಚ್ಚಿ ಹಾಕುತ್ತಾನೆ. ತನ್ನ ಕುಟುಂಬದವರು ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳದಂತೆ ಚಾಲಾಕಿತನದಿಂದ ಬಚಾವ್​ ಮಾಡುತ್ತಾನೆ. ಇದು ‘ದೃಶ್ಯಂ’ ಮೊದಲ ಪಾರ್ಟ್​ ಕಥೆ. ಎರಡನೇ ಪಾರ್ಟ್​ನಲ್ಲಿ ಆ ಕೇಸ್​ ಮತ್ತೆ ಓಪನ್​ ಆಗುತ್ತದೆ. ಹಲವು ಟ್ವಿಸ್ಟ್​ಗಳ ಮೂಲಕ ಕಥೆ ಸಾಗುತ್ತದೆ. ಈ ಬಾರಿ ಹೀರೋ ತನ್ನ ಕುಟುಂಬವನ್ನು ಹೇಗೆ ರಕ್ಷಿಸುತ್ತಾನೆ ಎಂಬುದನ್ನು ನೋಡಲು ಜನರು ಥಿಯೇಟರ್​ನತ್ತ ಹೆಜ್ಜೆ ಹಾಕುತ್ತಿದ್ದಾರೆ.

ಸೌತ್​ ಸಿನಿಮಾಗಳ ಅಬ್ಬರದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಹಿಂದಿ ಸಿನಿಮಾಗಳು ಸೊರಗಿದ್ದವು. ಈಗ ‘ದೃಶ್ಯಂ 2’ ಚಿತ್ರ ಸೂಪರ್​ ಹಿಟ್​ ಆಗಿರುವುದರಿಂದ ಬಿ-ಟೌನ್​ನಲ್ಲಿ ಹೊಸ ಭರವಸೆ ಮೂಡಿದಂತಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ