AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Graduate Chaiwali: ಟೀ ಮಾರುವ ‘ಪದವೀಧರೆ ಚಾಯ್​ವಾಲಿ’ ಪ್ರಿಯಾಂಕಾ ಗುಪ್ತಾ ಕಣ್ಣೀರಿಗೆ ಕರಗಿದ ಸೋನು ಸೂದ್​

Sonu Sood | Priyanka Gupta: ಪ್ರಿಯಾಂಕಾ ಗುಪ್ತಾ ಅವರ ವಿಡಿಯೋ ವೈರಲ್​ ಆಗಿದ್ದು, ಅದಕ್ಕೆ ಸೋನು ಸೂದ್​ ಪ್ರತಿಕ್ರಿಯಿಸಿದ್ದಾರೆ. ರಿಯಲ್​ ಹೀರೋ ಮಾಡಿದ ಸಹಾಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Graduate Chaiwali: ಟೀ ಮಾರುವ ‘ಪದವೀಧರೆ ಚಾಯ್​ವಾಲಿ’ ಪ್ರಿಯಾಂಕಾ ಗುಪ್ತಾ ಕಣ್ಣೀರಿಗೆ ಕರಗಿದ ಸೋನು ಸೂದ್​
ಪ್ರಿಯಾಂಕಾ ಗುಪ್ತಾ, ಸೋನು ಸೂದ್
TV9 Web
| Updated By: ಮದನ್​ ಕುಮಾರ್​|

Updated on:Nov 21, 2022 | 7:48 AM

Share

ಅರ್ಥಶಾಸ್ತ್ರದಲ್ಲಿ ಪದವಿ ಶಿಕ್ಷಣ ಪಡೆದರೂ ಕೂಡ ಸೂಕ್ತ ಉದ್ಯೋಗ ಸಿಗದ ಕಾರಣ ತಮ್ಮದೇ ಟೀ ಅಂಗಡಿ ಶುರು ಮಾಡುವ ಮೂಲಕ ಫೇಮಸ್​ ಆದ ಪ್ರಿಯಾಂಕಾ ಗುಪ್ತಾ (Graduate Chaiwali) ಇತ್ತೀಚೆಗೆ ಕಣ್ಣೀರು ಹಾಕಿದ್ದರು. ಪಾಟ್ನಾ ಮಹಾನಗರ ಪಾಲಿಕೆಯ ಅಧಿಕಾರಿಗಳ ಟೀ ಅಂಗಡಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರಿಂದ ನಮಗೆ ಎದುರಾಗಿರುವ ಅಸಹಾಯಕ ಪರಿಸ್ಥಿತಿಯನ್ನು ಅವರು ವಿಡಿಯೋ ಮೂಲಕ ವಿವರಿಸಿದ್ದರು. ಅವರ ಕಷ್ಟಕ್ಕೆ ಈಗ ಸೋನು ಸೂದ್​ ಸ್ಪಂದಿಸಿದ್ದಾರೆ. ಪ್ರಿಯಾಂಕಾ ಗುಪ್ತಾ (Priyanka Gupta) ಅವರು ಹೊಸದಾಗಿ ಟೀ ಅಂಗಡಿ ಹಾಕಲು ರಿಯಲ್​ ಹೀರೋ ಸಹಾಯ ಮಾಡಿದ್ದಾರೆ. ಶೀಘ್ರದಲ್ಲೇ ಅವರ ಹೊಸ ಟೀ ಸ್ಟಾಲ್​ ಕಾರ್ಯಾರಂಭ ಮಾಡಲಿದೆ. ಸೋನು ಸೂದ್​ (Sonu Sood) ಅವರ ಈ ಸಹಾಯಕ್ಕೆ ಅಭಿಮಾನಿಗಳು ಭೇಷ್​ ಎನ್ನುತ್ತಿದ್ದಾರೆ.

ಮೊದಲ ಬಾರಿ ಲಾಕ್​ ಡೌನ್ ಆರಂಭ ಆದಾಗಿನಿಂದಲೂ ಸೋನು ಸೂದ್​ ಅವರು ಜನರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಕಷ್ಟದಲ್ಲಿ ಇರುವ ಜನರ ಕೈ ಹಿಡಿಯುವ ಮೂಲಕ ಅವರು ರಿಯಲ್ ಹೀರೋ ಎನಿಸಿಕೊಂಡಿದ್ದಾರೆ. ಎಷ್ಟೋ ಜನರ ಸರ್ಜರಿಗೆ ನೆರವಾಗಿದ್ದಾರೆ. ಮನೆ ಇಲ್ಲದವರಿಗೆ ಆಶ್ರಯ ಒದಗಿಸಿದ್ದಾರೆ. ಸಾಕಷ್ಟು ಮಂದಿಯ ಶಿಕ್ಷಣಕ್ಕೆ ಹಣದ ಸಹಾಯ ಮಾಡಿದ್ದಾರೆ. ಈಗ ಅವರು ಪ್ರಿಯಾಂಕಾ ಗುಪ್ತಾಗೂ ನೆರವಿನ ಹಸ್ತ ಚಾಚಿದ್ದಾರೆ.

ಕಣ್ಣೀರು ಹಾಕಿದ್ದ ಪದವೀಧರೆ ಚಾಯ್​ವಾಲಿ:

ಇದನ್ನೂ ಓದಿ
Image
ಕೆಟ್ಟ ಹಿಂದಿ ಚಿತ್ರಗಳನ್ನು ಮಾಡದಂತೆ ಸೌತ್​ ನನ್ನನ್ನು ಉಳಿಸುತ್ತಿದೆ ಎಂದ ಸೋನು ಸೂದ್
Image
Sonu Sood: ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಸೋನು ಸೂದ್​ಗೆ ಹಣ ಬರೋದು ಎಲ್ಲಿಂದ? ಪೂರ್ತಿ ವಿವರ ನೀಡಿದ ನಟ
Image
ಬಿಯರ್​ ದಾನ ಮಾಡಿ ಎಂದು ಸೋನು ಸೂದ್​ಗೆ ಮನವಿ ಮಾಡಿದ ಭೂಪ; ರಿಯಲ್​ ಹೀರೋ ಉತ್ತರ ಏನು?
Image
ಕಾಂಗ್ರೆಸ್​ ಸೇರಿದ ತಂಗಿ ಪರ ಪ್ರಚಾರಕ್ಕೆ ಇಳಿದ ಸೋನು ಸೂದ್​; ನೀವು ಮಾತು ತಪ್ಪಿದಿರಿ ಎಂದ ಫ್ಯಾನ್ಸ್​

‘ನಾನು ಏನಾದರೂ ಡಿಫರೆಂಟ್​ ಆಗಿ ಮಾಡಬೇಕು ಎಂದು ನಿರ್ಧರಿಸಿದ್ದೆ. ಜನರು ಕೂಡ ಬೆಂಬಲ ನೀಡುತ್ತಿದ್ದರು. ಆದರೆ ಇದು ಬಿಹಾರ್​. ಇಲ್ಲಿ ಮಹಿಳೆಯರ ಸ್ಥಾನವನ್ನು ಅಡುಗೆ ಮನೆಗೆ ಸೀಮಿತಗೊಳಿಸಲಾಗಿದೆ. ಪಾಟ್ನಾದಲ್ಲಿ ಅನೇಕ ಅಕ್ರಮ ವ್ಯವಹಾರಗಳು ನಡೆಯುತ್ತಿವೆ. ಅದರ ವಿರುದ್ಧ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಆದರೆ ಒಬ್ಬಳು ಹುಡುಗಿ ತನ್ನ ಸ್ವಂತ ಬಿಸ್ನೆಸ್​ ಮಾಡಿದಾಗ ಪದೇ ಪದೇ ಅಡ್ಡಿಪಡಿಸುತ್ತಾರೆ’ ಎಂದು ಪ್ರಿಯಾಂಕಾ ಗುಪ್ತಾ ಕೆಲವೇ ದಿನಗಳ ಹಿಂದೆ ಕಣ್ಣೀರು ಹಾಕಿದ್ದರು.

ಸೋನು ಸೂದ್​ ಪ್ರತಿಕ್ರಿಯೆ:

ಪ್ರಿಯಾಂಕಾ ಗುಪ್ತಾ ಅವರ ವಿಡಿಯೋ ವೈರಲ್​ ಆಗಿದ್ದು, ಅದಕ್ಕೆ ಸೋನು ಸೂದ್​ ಪ್ರತಿಕ್ರಿಯಿಸಿದ್ದಾರೆ. ‘ಪ್ರಿಯಾಂಕಾ ಅವರ ಟೀ ಶಾಪ್​ಗೆ ವ್ಯವಸ್ಥೆ ಆಗಿದೆ. ಈಗ ಅವರನ್ನು ಎತ್ತಂಗಡಿ ಮಾಡಿಸಲು ಯಾರೂ ಬರುವುದಿಲ್ಲ. ಶೀಘ್ರವೇ ನಾನು ಬಿಹಾರಕ್ಕೆ ಬಂದು ಅವರ ಅಂಗಡಿಯಲ್ಲಿ ಟೀ ಸವಿಯುತ್ತೇನೆ’ ಎಂದು ಸೋನು ಸೂದ್​ ಟ್ವೀಟ್​ ಮಾಡಿದ್ದಾರೆ.

ಈಗ ಬೇರೆ ಬೇರೆ ಕಡೆಗಳಲ್ಲಿ ತಮ್ಮ ಟೀ ಅಂಗಡಿಯ ಶಾಖೆ ಆರಂಭಿಸಲು ಪ್ರಿಯಾಂಕಾ ಗುಪ್ತಾ ಮುಂದಾಗಿದ್ದಾರೆ. ಅವರ ಈ ಕಾರ್ಯದಲ್ಲಿ ಕೈ ಜೋಡಿಸಲು ಅನೇಕರು ಆಸಕ್ತಿ ತೋರಿಸಿದ್ದಾರೆ. ಈ ಕುರಿತು ಪ್ರಿಯಾಂಕಾ ಮಾಡಿರುವ ಸೋಶಿಯಲ್​ ಮೀಡಿಯಾ ಪೋಸ್ಟ್​ ವೈರಲ್​ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:48 am, Mon, 21 November 22

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ