AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಕ್ತದಲ್ಲಿ ಚಿತ್ರ ಬಿಡಿಸಿ ಸೋನು ಸೂದ್​ಗೆ ನೀಡಿದ ಕಲಾವಿದ; ಅಂದುಕೊಂಡಿದ್ದೇ ಒಂದು ಆಗಿದ್ದೇ ಇನ್ನೊಂದು

ಮಧು ಗುರ್ಜರ್ ಎಂಬುವವರನ್ನು ಸೋನು ಸೂದ್ ಅವರನ್ನು ಭೇಟಿ ಮಾಡಿದ್ದಾರೆ. ಮಧು ಬಿಡಿಸಿದ ಚಿತ್ರವನ್ನು ಹಿಡಿದು ಇಬ್ಬರೂ ನಿಂತಿದ್ದಾರೆ. ಇದು ರಕ್ತದಿಂದ ಬಿಡಿಸಿದ ಚಿತ್ರ ಎಂಬ ವಿಚಾರ ಸೋನುಗೆ ಆರಂಭದಲ್ಲಿ ತಿಳಿದಿರಲಿಲ್ಲ.

ರಕ್ತದಲ್ಲಿ ಚಿತ್ರ ಬಿಡಿಸಿ ಸೋನು ಸೂದ್​ಗೆ ನೀಡಿದ ಕಲಾವಿದ; ಅಂದುಕೊಂಡಿದ್ದೇ ಒಂದು ಆಗಿದ್ದೇ ಇನ್ನೊಂದು
ಸೋನು ಸೂದ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Sep 10, 2022 | 11:08 AM

Share

ನಟ ಸೋನು ಸೂದ್ (Sonu Sood) ಅವರು ರಿಯಲ್ ಲೈಫ್ ಹೀರೋ ಆಗಿದ್ದಾರೆ. 2020ರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡ ಸಂದರ್ಭದಲ್ಲಿ ಅವರು ಅನೇಕರಿಗೆ ಸಹಾಯ ಮಾಡಿದ್ದರು. ಆ ಬಳಿಕ ಸೋನು ತಮ್ಮ ಸಹಾಯ ಮುಂದುವರಿಸಿದರು. ಇದರಿಂದ ಅವರು ರಿಯಲ್ ಲೈಫ್ ಹೀರೋ ಆಗಿದ್ದಾರೆ. ಅನೇಕರು ಸೋನು ಫೋಟೋವನ್ನು ದೇವರ ಕೋಣೆಯಲ್ಲಿ ಇಟ್ಟು ಪೂಜಿಸುತ್ತಿದ್ದಾರೆ. ಈಗ ಅಭಿಮಾನಿಯೋರ್ವ ರಕ್ತದಲ್ಲಿ ಸೋನು ಸೂದ್ ಚಿತ್ರವನ್ನು ಬಿಡಿಸಿದ್ದಾರೆ. ಇದನ್ನು ನೋಡಿ ಸೋನ್ ಸೂದ್​ಗೆ ಖುಷಿಯಾಗಿದೆ. ಇದರ ಜತೆಗೆ ಬೇಸರ ಕೂಡ ಆಗಿದೆ.

ಮಧು ಗುರ್ಜರ್ ಎಂಬುವವರು ಸೋನು ಸೂದ್ ಅವರನ್ನು ಭೇಟಿ ಮಾಡಿದ್ದಾರೆ. ಮಧು ಬಿಡಿಸಿದ ಚಿತ್ರವನ್ನು ಹಿಡಿದು ಇಬ್ಬರೂ ನಿಂತಿದ್ದಾರೆ. ಇದು ರಕ್ತದಿಂದ ಬಿಡಿಸಿದ ಚಿತ್ರ ಎಂಬ ವಿಚಾರ ಸೋನುಗೆ ಆರಂಭದಲ್ಲಿ ತಿಳಿದಿರಲಿಲ್ಲ. ‘ಮಧು ಅವರು ಟ್ಯಾಲೆಂಟೆಡ್ ಆರ್ಟಿಸ್ಟ್​. ಎಲ್ಲರೂ ನನ್ನ ಪೇಂಟಿಂಗ್ ಬಿಡಿಸುತ್ತಿದ್ದಾರೆ’ ಎಂದರು. ಈ ವೇಳೆ ಅಲ್ಲಿದ್ದ ಅಭಿಮಾನಿಯೋರ್ವ ‘ಇದು ರಕ್ತದಿಂದ ಬಿಡಿಸಿದ್ದು’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಈ ಮಾತನ್ನು ಕೇಳಿ ಸೋನು ಸೂದ್​ಗೆ ಬೇಸರ ಆಗಿದೆ.

ಇದನ್ನೂ ಓದಿ
Image
ಕೆಟ್ಟ ಹಿಂದಿ ಚಿತ್ರಗಳನ್ನು ಮಾಡದಂತೆ ಸೌತ್​ ನನ್ನನ್ನು ಉಳಿಸುತ್ತಿದೆ ಎಂದ ಸೋನು ಸೂದ್
Image
Sonu Sood: ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಸೋನು ಸೂದ್​ಗೆ ಹಣ ಬರೋದು ಎಲ್ಲಿಂದ? ಪೂರ್ತಿ ವಿವರ ನೀಡಿದ ನಟ
Image
ಬಿಯರ್​ ದಾನ ಮಾಡಿ ಎಂದು ಸೋನು ಸೂದ್​ಗೆ ಮನವಿ ಮಾಡಿದ ಭೂಪ; ರಿಯಲ್​ ಹೀರೋ ಉತ್ತರ ಏನು?
Image
ಕಾಂಗ್ರೆಸ್​ ಸೇರಿದ ತಂಗಿ ಪರ ಪ್ರಚಾರಕ್ಕೆ ಇಳಿದ ಸೋನು ಸೂದ್​; ನೀವು ಮಾತು ತಪ್ಪಿದಿರಿ ಎಂದ ಫ್ಯಾನ್ಸ್​

‘ರಕ್ತದಿಂದ ಚಿತ್ರ ಬಿಡಿಸಬಾರದು. ರಕ್ತವನ್ನು ದಾನ ಮಾಡಬೇಕು. ಇದರಿಂದ ಅನೇಕರಿಗೆ ಸಹಾಯ ಆಗುತ್ತದೆ’ ಎಂದು ಅಭಿಮಾನಿಗೆ ತಿಳಿ ಹೇಳಿದರು ಸೋನು. ಸೋನು ಸೂದ್ ತಮ್ಮನ್ನು ಹೊಗಳುತ್ತಾರೆ ಎಂದು ಮಧು ಭಾವಿಸಿದ್ದರು. ಆದರೆ, ಅವರು ಬೇರೆಯದೇ ರೀತಿಯಲ್ಲಿ ಹೇಳಿಕೆ ನೀಡಿದರು. ‘ನೀವು ನನ್ನ ದೇವರು. ಈ ಕಾರಣಕ್ಕೆ ನಾನು ರಕ್ತದಿಂದ ನಿಮ್ಮ ಚಿತ್ರ ಬಿಡಿಸಿದೆ’ ಎಂದು ಅಭಿಮಾನಿ ಹೇಳಿಕೊಂಡಿದ್ದಾರೆ. ‘ನನಗೆ ನಿಮ್ಮ ಅಭಿಮಾನ ಅರ್ಥ ಆಗುತ್ತದೆ. ಹಾಗಂತ ರಕ್ತದಲ್ಲಿ ಚಿತ್ರ ಬಿಡಿಸಬಾರದು. ಅದನ್ನು ದಾನ ಮಾಡಿ’ ಎಂದು ಸೋನು ಕೋರಿಕೊಂಡಿದ್ದಾರೆ.

ಇದನ್ನೂ ಓದಿ: ಮಾನ್ವಿತಾ ತಾಯಿಗೆ ಅನಾರೋಗ್ಯ: ಸಹಾಯಕ್ಕೆ ಬಂದ ಸೋನು ಸೂದ್; ಧನ್ಯವಾದ ಹೇಳಿದ ನಟಿ

ಸೋನು ಸೂದ್ ಅವರು ವಿಲನ್ ಪಾತ್ರಗಳ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಅವರು ವಿಲನ್ ಪಾತ್ರಗಳಿಂದ ದೂರವೇ ಇದ್ದಾರೆ. ಸೋನು ಸೂದ್ ಅವರ ಚಾರ್ಮ್​ ಬದಲಾಗಿರುವುದರಿಂದ ಅನೇಕರು ಸೋನುಗೆ ಹೀರೋ ಪಾತ್ರವನ್ನೇ ನೀಡುತ್ತಿದ್ದಾರೆ. ಈ ಬಗ್ಗೆ ಅವರಿಗೆ ಖುಷಿ ಇದೆ.

Published On - 8:26 am, Sat, 10 September 22

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ