‘ಶಿವಾಜಿ ಸುರತ್ಕಲ್ 2’ ತಂಡದೊಂದಿಗೆ ರಮೇಶ್ ಅರವಿಂದ್ ಬರ್ತ್​ಡೇ ಆಚರಣೆ

Ramesh Aravind Birthday: ‘ಶಿವಾಜಿ ಸುರತ್ಕಲ್’ ಸಿನಿಮಾ ಹಿಟ್ ಆಗಿತ್ತು. ಡಿಟೆಕ್ಟಿವ್ ಆಗಿ ರಮೇಶ್ ಅರವಿಂದ್ ಅವರು ಗಮನ ಸೆಳೆದಿದ್ದರು. ಈಗ ಆ ಚಿತ್ರಕ್ಕೆ ಸೀಕ್ವೆಲ್ ಬರುತ್ತಿದೆ.

TV9kannada Web Team

| Edited By: Rajesh Duggumane

Sep 10, 2022 | 11:10 AM

ನಟ ರಮೇಶ್ ಅರವಿಂದ್ (Ramesh Aravind) ಅವರು ಇಂದು (ಸೆಪ್ಟೆಂಬರ್ 10) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಎಲ್ಲ ಕಡೆಗಳಿಂದ ಅವರಿಗೆ ಬರ್ತ್​​ಡೇ ವಿಶ್ ಬರುತ್ತಿದೆ. ಅವರ ನಟನೆಯ ‘ಶಿವಾಜಿ ಸುರತ್ಕಲ್’ ಸಿನಿಮಾ (Shivaji Surathkal) ಹಿಟ್ ಆಗಿತ್ತು. ಡಿಟೆಕ್ಟಿವ್ ಆಗಿ ರಮೇಶ್ ಅರವಿಂದ್ ಅವರು ಗಮನ ಸೆಳೆದಿದ್ದರು. ಈಗ ಆ ಚಿತ್ರಕ್ಕೆ ಸೀಕ್ವೆಲ್ ಬರುತ್ತಿದೆ. ಮಾಧ್ಯಮದವರಿಗೆ ಹಾಗೂ ಸಿನಿಮಾ ತಂಡದವರಿಗೋಸ್ಕರ ಸೆಪ್ಟೆಂಬರ್ 9ರಂದು ಈ ಸಿನಿಮಾದ ಟೀಸರ್ ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ರಮೇಶ್ ಅರವಿಂದ್ ಅವರ ಬರ್ತ್​ಡೇ ಆಚರಣೆ ಮಾಡಲಾಗಿದೆ. ಆ ವಿಡಿಯೋ ಇಲ್ಲಿದೆ. ‘ಶಿವಾಜಿ ಸುರತ್ಕಲ್​ 2’ ಚಿತ್ರಕ್ಕೆ ಆಕಾಶ್​ ಶ್ರೀವಸ್ತ ನಿರ್ದೇಶನ ಮಾಡುತ್ತಿದ್ದಾರೆ. ರೇಖಾ ಕೆಎನ್​ ಮತ್ತು ಅನೂಪ್​ ಗೌಡ ನಿರ್ಮಾಣ ಮಾಡುತ್ತಿ​ದ್ದಾರೆ.

Follow us on

Click on your DTH Provider to Add TV9 Kannada