AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ganesh Chaturthi: ಮುಖ ಮುಚ್ಕೊಂಡು ಗಣೇಶನ ಹಬ್ಬ ಮಾಡುತ್ತಿರುವ ರಾಜ್​ ಕುಂದ್ರಾ; ಕುಂಟುತ್ತಿರುವ ಶಿಲ್ಪಾ ಶೆಟ್ಟಿ

Shilpa Shetty | Raj Kundra: ಮನೆಗೆ ಬಂದ ಗಣಪನನ್ನು ಸ್ವಾಗತಿಸುವ ವೇಳೆಯೂ ರಾಜ್​ ಕುಂದ್ರಾ ಮುಖ ಮುಚ್ಚಿಕೊಂಡಿದ್ದರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

Ganesh Chaturthi: ಮುಖ ಮುಚ್ಕೊಂಡು ಗಣೇಶನ ಹಬ್ಬ ಮಾಡುತ್ತಿರುವ ರಾಜ್​ ಕುಂದ್ರಾ; ಕುಂಟುತ್ತಿರುವ ಶಿಲ್ಪಾ ಶೆಟ್ಟಿ
ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ
TV9 Web
| Edited By: |

Updated on:Aug 30, 2022 | 7:31 AM

Share

ಎಲ್ಲ ಕಡೆಗಳಲ್ಲಿ ಗಣೇಶ ಚತುರ್ಥಿ ಸಂಭ್ರಮ ಮನೆ ಮಾಡಿದೆ. ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಸೆಲೆಬ್ರಿಟಿಗಳ ಮನೆಯಲ್ಲಿ ಗಣಪತಿಯನ್ನು ಕೂರಿಸಿ ಹಬ್ಬ (Ganesh Chaturthi 2022) ಮಾಡಲಾಗುತ್ತಿದೆ. ಬಾಲಿವುಡ್​ನಲ್ಲಿ ಅನೇಕ ನಟ-ನಟಿಯರ ಮನೆಯಲ್ಲಿ ವಿಘ್ನ ವಿನಾಶಕನ ಮೂರ್ತಿ ಇರಿಸಿ ಪೂಜೆ ಮಾಡಲಾಗುತ್ತದೆ. ನಟಿ ಶಿಲ್ಪಾ ಶೆಟ್ಟಿ (Shilpa Shetty) ಕುಟುಂಬ ಕೂಡ ಇದಕ್ಕೆ ಹೊರತಾಗಿಲ್ಲ. ಪ್ರತಿ ವರ್ಷ ಈ ಹಬ್ಬವನ್ನು ಅವರ ಮನೆಯಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಬಾರಿ ಸಹ ಹಬ್ಬಕ್ಕೆ ಸಕಲ ಸಿದ್ಧತೆ ನಡೆದಿದೆ. ಮನೆಗೆ ತಂದಿರುವ ಗಣೇಶನ ಮೂರ್ತಿಯನ್ನು ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ (Raj Kundra) ದಂಪತಿ ಬರಮಾಡಿಕೊಂಡಿದ್ದಾರೆ. ಈ ಕ್ಷಣದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಎಲ್ಲಿಗೇ ಹೋದರೂ ರಾಜ್​ ಕುಂದ್ರಾ ಅವರು ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಸದ್ಯಕ್ಕಂತೂ ಮಾಸ್ಕ್​ ಕಡ್ಡಾಯ ಎಂಬ ನಿಯಮ ಇಲ್ಲ. ಕೊರೊನಾ ಹಾವಳಿಯೂ ಮೊದಲಿನಂತಿಲ್ಲ. ಆದರೂ ಕೂಡ ರಾಜ್​ ಕುಂದ್ರಾ ಮಾಸ್ಕ್​ ಹಾಕಿಕೊಂಡು ತಿರುಗಾಡುತ್ತಿದ್ದಾರೆ. ಮನೆಯಲ್ಲಿ ಇದ್ದಾಗಲೂ ಅವರು ಪೂರ್ತಿ ಮುಖ ಮುಚ್ಚುವಂತಹ ಮಾಸ್ಕ್​ ಧರಿಸುತ್ತಾರೆ. ಮನೆಗೆ ಬಂದ ಗಣಪನನ್ನು ಸ್ವಾಗತಿಸುವ ವೇಳೆಯೂ ಅವರು ಮುಖ ಮುಚ್ಚಿಕೊಂಡಿದ್ದರು!

ಇದನ್ನೂ ಓದಿ
Image
‘ನಾನು ಅಶ್ಲೀಲ ಸಿನಿಮಾ ಮಾಡಿಲ್ಲ, ಮುಖ ಮುಚ್ಕೊಂಡು ಓಡಾಡಲ್ಲ’; ಮೌನ ಮುರಿದ ರಾಜ್​ ಕುಂದ್ರಾ
Image
‘ರಾಜ್​ ಕುಂದ್ರಾ ದಾರಿ ತಪ್ಪಲು ಕಾರಣವಾದ ಈಕೆಗೆ ಬಟ್ಟೆ ಬಿಚ್ಚೋದು ಬಿಟ್ಟು ಬೇರೇನೂ ಗೊತ್ತಿಲ್ಲ’: ಗೆಹನಾ ಆರೋಪ
Image
Shilpa Shetty: ರಾಜ್​ ಕುಂದ್ರಾ ಪೋರ್ನ್​ ದಂಧೆಯಲ್ಲಿ ಶಿಲ್ಪಾ ಶೆಟ್ಟಿ ತಪ್ಪು ಒಪ್ಪಿಕೊಳ್ಳಲಿ ಎಂದು ಹಠ ಹಿಡಿದ ಶೆರ್ಲಿನ್​ ಚೋಪ್ರಾ
Image
Shilpa Shetty: ರಾಜ್​ ಕುಂದ್ರಾ ಜೈಲಿನಲ್ಲಿರುವಾಗಲೇ ಗುಡ್​ ನ್ಯೂಸ್​ ನೀಡಿದ ಶಿಲ್ಪಾ ಶೆಟ್ಟಿ

ಇನ್ನು, ಶಿಲ್ಪಾ ಶೆಟ್ಟಿ ಅವರು ಇತ್ತೀಚೆಗೆ ಶೂಟಿಂಗ್​ ಸಂದರ್ಭದಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಹಾಗಾಗಿ ಅವರಿಗೆ ನಡೆಯಲು ಕಷ್ಟ ಆಗುತ್ತಿದೆ. ವಾಕರ್​ ಸಹಾಯದಿಂದ ಕುಂಟುತ್ತಾ ಬಂದು ಅವರು ಗಣೇಶನ ವಿಗ್ರಹವನ್ನು ಸ್ವೀಕರಿಸಿದ್ದಾರೆ. ಪಾಪರಾಜಿ ಕ್ಯಾಮೆರಾದಲ್ಲಿ ಈ ವಿಡಿಯೋ ಸೆರೆಯಾಗಿದ್ದು, ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಅಶ್ಲೀಲ ವಿಡಿಯೋ ನಿರ್ಮಾಣದ ಕೇಸ್​ನಲ್ಲಿ ಸಿಕ್ಕಿ ಹಾಕಿಕೊಂಡ ಬಳಿಕ ರಾಜ್​ ಕುಂದ್ರಾ ಅವರು ಬಹುತೇಕ ತೆರೆಮರೆಗೆ ಸರಿದರು. ಮೊದಲೆಲ್ಲ ಪತ್ನಿ ಶಿಲ್ಪಾ ಶೆಟ್ಟಿ ಜೊತೆ ಖುಷಿ ಖುಷಿಯಿಂದ ಪೋಸ್​ ನೀಡುತ್ತಿದ್ದ ಅವರು ಈಗ ಸಂಪೂರ್ಣ ಮುಖ ಮುಚ್ಚಿಕೊಂಡು ಓಡಾಡುವಂತಾಗಿದೆ. ನಟಿಯರನ್ನು ಮತ್ತು ಮಾಡೆಲ್​ಗಳನ್ನು ಯಾಮಾರಿಸಿ ಅಶ್ಲೀಲ ಸಿನಿಮಾ ಚಿತ್ರೀಕರಣ ಮಾಡಿದ ಆರೋಪ ರಾಜ್​ ಕುಂದ್ರಾ ಅವರ ಮೇಲಿದೆ. ಈ ಪ್ರಕರಣದಲ್ಲಿ ಕಳೆದ ವರ್ಷ ಅವರನ್ನು ಬಂಧಿಸಲಾಗಿತ್ತು. ಹಲವು ದಿನಗಳ ಕಾಲ ಜೈಲಿನಲ್ಲಿ ಕಂಬಿ ಎಣಿಸಿದ ನಂತರ ಅವರು ಜಾಮೀನಿನ ಮೇಲೆ ಹೊರಬಂದರು. ಆ ಘಟನೆ ನಡೆದು ಒಂದು ವರ್ಷವೇ ಕಳೆದಿದ್ದರೂ ಕೂಡ ರಾಜ್​ ಕುಂದ್ರಾ ಅವರು ಸಾರ್ವಜನಿಕವಾಗಿ ಮುಖ ತೋರಿಸಲು ಹಿಂಜರಿಯುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:31 am, Tue, 30 August 22

ಫಿಲಿಪೈನ್ಸ್​ನಲ್ಲಿ ಭೂಕುಸಿತ, ಬೃಹತ್ ಕಸದ ರಾಶಿ ಮೈಮೇಲೆ ಬಿದ್ದು ಓರ್ವ ಸಾವು
ಫಿಲಿಪೈನ್ಸ್​ನಲ್ಲಿ ಭೂಕುಸಿತ, ಬೃಹತ್ ಕಸದ ರಾಶಿ ಮೈಮೇಲೆ ಬಿದ್ದು ಓರ್ವ ಸಾವು
ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ರೈಲಿನ ಮೇಲೆ ಹತ್ತಿ ಪವರ್​ ಲೈನ್ ಕೆಳಗೆ ಕುಳಿತ ಯುವಕ
ರೈಲಿನ ಮೇಲೆ ಹತ್ತಿ ಪವರ್​ ಲೈನ್ ಕೆಳಗೆ ಕುಳಿತ ಯುವಕ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು