‘ರಾಜ್​ ಕುಂದ್ರಾ ದಾರಿ ತಪ್ಪಲು ಕಾರಣವಾದ ಈಕೆಗೆ ಬಟ್ಟೆ ಬಿಚ್ಚೋದು ಬಿಟ್ಟು ಬೇರೇನೂ ಗೊತ್ತಿಲ್ಲ’: ಗೆಹನಾ ಆರೋಪ

‘2012ರಿಂದಲೇ ಶೆರ್ಲಿನ್​ ಚೋಪ್ರಾ ಇಂಥ ಸಿನಿಮಾ ಮಾಡುತ್ತಿದ್ದಾಳೆ. ನೀಲಿ ಚಿತ್ರ ದಂಧೆಗೆ ರಾಜ್​ ಕುಂದ್ರಾ ಅವರನ್ನು ಎಳೆದು ತಂದಿದ್ದೇ ಈಕೆ’ ಎಂದು ನಟಿ ಗೆಹನಾ ವಸಿಷ್ಠ್​ ಆರೋಪಿಸಿದ್ದಾರೆ.

‘ರಾಜ್​ ಕುಂದ್ರಾ ದಾರಿ ತಪ್ಪಲು ಕಾರಣವಾದ ಈಕೆಗೆ ಬಟ್ಟೆ ಬಿಚ್ಚೋದು ಬಿಟ್ಟು ಬೇರೇನೂ ಗೊತ್ತಿಲ್ಲ’: ಗೆಹನಾ ಆರೋಪ
ಗೆಹನಾ ವಸಿಷ್ಠ್, ಶೆರ್ಲಿನ್ ಚೋಪ್ರಾ, ರಾಜ್ ಕುಂದ್ರಾ,
Follow us
TV9 Web
| Updated By: ಮದನ್​ ಕುಮಾರ್​

Updated on: Sep 28, 2021 | 4:10 PM

ಉದ್ಯಮಿ ರಾಜ್​ ಕುಂದ್ರಾ ಅವರು ನೀಲಿ ಚಿತ್ರ ನಿರ್ಮಾಣ ದಂಧೆಯ ಆರೋಪ ಹೊತ್ತು ಜೈಲು ಸೇರಿದ್ದರು. ಈಗ ಅವರು ಜಾಮೀನು ಪಡೆದು ಹೊರಬಂದಿದ್ದಾರೆ. ಹಾಗಂತ ಅವರ ಕುರಿತಾದ ಸುದ್ದಿಗಳು ನಿಂತಿಲ್ಲ. ಅಶ್ಲೀಲ ಸಿನಿಮಾ ಲೋಕದಲ್ಲಿ ಕುತ್ಯಾತಿ ಪಡೆದಿರುವ ನಟಿಯರಾದ ಶೆರ್ಲಿನ್​ ಚೋಪ್ರಾ ಮತ್ತು ಗೆಹನಾ ವಸಿಷ್ಠ್​ ಅವರು ಪರಸ್ಪರ ಕಚ್ಚಾಡಿಕೊಳ್ಳುತ್ತಿದ್ದಾರೆ. ಈ ನಡುವೆ ರಾಜ್​ ಕುಂದ್ರಾ ಹೆಸರನ್ನು ಎಳೆದು ತಂದಿದ್ದಾರೆ. ರಾಜ್​ ಕುಂದ್ರಾ ಮೇಲೆ ಶೆರ್ಲಿನ್​ ಚೋಪ್ರಾ ಹಲವು ಆರೋಪಗಳನ್ನು ಮಾಡಿದ್ದರು. ಅದಕ್ಕೆಲ್ಲ ಈಗ ಗೆಹನಾ ವಸಿಷ್ಠ್​ ತಿರುಗೇಟು ನೀಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಬಯಲಿಗೆ ಎಳೆದಿದ್ದಾರೆ.

‘2012ರಿಂದಲೇ ಶೆರ್ಲಿನ್​ ಚೋಪ್ರಾ ಇಂಥ ಸಿನಿಮಾ ಮಾಡುತ್ತಿದ್ದಾಳೆ. ನೀಲಿ ಚಿತ್ರ ದಂಧೆಗೆ ರಾಜ್​ ಕುಂದ್ರಾ ಅವರನ್ನು ಎಳೆದು ತಂದಿದ್ದೇ ಈಕೆ. ಕೇವಲ ಎರಡೂವರೆ ವರ್ಷದ ಹಿಂದೆ ಅವರಿಬ್ಬರಿಗೂ ಪರಸ್ಪರ ಪರಿಚಯ ಆಗಿತ್ತು. ಇಂದು ಶೆರ್ಲಿನ್ ಏನೇ ಗಳಿಸಿದ್ದರೂ ಕೂಡ ಅದು ರಾಜ್​ ಕುಂದ್ರಾ ಕಾರಣದಿಂದ. ಹಾಗಾಗಿ ಅವರಿಗೆ ಆಕೆ ಋಣಿಯಾಗಿ ಇರಬೇಕು’ ಎಂದು ಗೆಹನಾ ವಸಿಷ್ಠ್​ ಹೇಳಿದ್ದಾರೆ.

‘ಶೆರ್ಲಿನ್​ಗೆ ಮಾಡಲು ಏನೂ ಕೆಲಸ ಇಲ್ಲ. ಸದಾ ಸುದ್ದಿಯಲ್ಲಿ ಇರಬೇಕು ಎಂಬ ಕಾರಣಕ್ಕೆ ಇದನ್ನೆಲ್ಲ ಮಾಡುತ್ತಿದ್ದಾಳೆ. ತಾನು ತಪ್ಪಿಸಿಕೊಳ್ಳಲು ಇಷ್ಟೆಲ್ಲ ಡ್ರಾಮಾ ಮಾಡುತ್ತಿದ್ದಾಳೆ. ಈಗ ಶಿಲ್ಪಾ ಶೆಟ್ಟಿಯನ್ನು ಟಾರ್ಗೆಟ್​ ಮಾಡಿದ್ದಾಳೆ. ಅದಕ್ಕೆಲ್ಲ ಶಿಲ್ಪಾ ಗಮನ ಕೊಡುತ್ತಿಲ್ಲ’ ಎಂದು ಗೆಹನಾ ವಸಿಷ್ಠ್​ ಹೇಳಿದ್ದಾರೆ.

‘ಶೆರ್ಲಿನ್​ಗೆ ಬೆತ್ತಲಾಗುವುದು ಬಿಟ್ಟು ಬೇರೇನೋ ಗೊತ್ತಿಲ್ಲ. ನೀಲಿ ಚಿತ್ರದ ದಂಧೆಗೆ ರಾಜ್​ ಕುಂದ್ರಾ ಎಂಟ್ರಿ ಪಡೆಯಲು ಆಕೆಯೇ ಕಾರಣ. ಈಗ ರಾಜ್​ ಕುಂದ್ರಾ ವಿರುದ್ಧವಾಗಿ ಮಾತನಾಡಿದರೆ ಮಾತ್ರ ಜನರ ಗಮನವನ್ನು ತನ್ನತ್ತ ಸೆಳೆದುಕೊಳ್ಳಬಹುದು ಎಂಬುದು ಆಕೆಗೆ ಗೊತ್ತಾಗಿದೆ. ಅದಕ್ಕೆ ಹೀಗೆಲ್ಲ ಮಾಡುತ್ತಿದ್ದಾಳೆ. ಆಕೆ ಎಷ್ಟೇ ಕೂಗಾಡಿದರೂ ಕೂಡ ಶಿಲ್ಪಾ ಶೆಟ್ಟಿ ಗಮನ ಕೊಡುತ್ತಿಲ್ಲ. ಅವರ ಪಾಲಿಗೆ ಆಕೆ ಲೆಕ್ಕಕ್ಕೇ ಇಲ್ಲ’ ಎಂದು ಗೆಹನಾ ವಸಿಷ್ಠ್​ ಹೇಳಿದ್ದಾರೆ. ಈ ಮಾತುಗಳಿಗೆ ಶೆರ್ಲಿನ್​ ಚೋಪ್ರಾ ಯಾವ ರೀತಿ ತಿರುಗೇಟು ನೀಡುತ್ತಾರೆ ಎಂಬ ಕೌತುಕ ಈಗ ನಿರ್ಮಾಣ ಆಗಿದೆ.

ಇದನ್ನೂ ಓದಿ:

ಕೇಸ್​ ಮೇಲೆ ಕೇಸ್​ ಬಿದ್ರೂ ಕಮ್ಮಿ ಆಗಿಲ್ಲ ಗೆಹನಾ ಮಾದಕತೆ; ನೀಲಿ ಚಿತ್ರ ದಂಧೆ ಆರೋಪಿಯ ಹೊಸ ಫೋಟೋಶೂಟ್​

ರಾಜ್​ ಕುಂದ್ರಾ ಜಾಮೀನು ಸುದ್ದಿ ಕೇಳಿ ಶಿಲ್ಪಾ ಶೆಟ್ಟಿಗೆ ಖುಷಿಯೋ ದುಃಖವೋ? ಹೀಗಿತ್ತು ನೋಡಿ ಮೊದಲ ಪ್ರತಿಕ್ರಿಯೆ

ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು