Raj Kundra: ಅಶ್ಲೀಲ ವಿಡಿಯೋ ಮಾಡಿದ ತಪ್ಪಿಗೆ ಇನ್ನೂ ಮುಖ ಮುಚ್ಕೊಂಡು ತಿರುಗುತ್ತಿರುವ ರಾಜ್ ಕುಂದ್ರಾ
Raj Kundra Viral Video: ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಮುಖ ಮುಚ್ಚಿಕೊಂಡು ಓಡಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ‘ಮುಖ ತೋರಿಸುವ ಯೋಗ್ಯತೆ ಇಲ್ಲ ಎಂದಮೇಲೆ ಸುಮ್ಮನೆ ಮನೆಯಲ್ಲೇ ಕುಳಿತುಕೊಳ್ಳಿ’ ಎಂದ ನೆಟ್ಟಿಗರು ಚಾಟಿ ಬೀಸಿದ್ದಾರೆ.
ಅಶ್ಲೀಲ ವಿಡಿಯೋ ನಿರ್ಮಾಣದ ಕೇಸ್ನಲ್ಲಿ ಸಿಕ್ಕಿ ಹಾಕಿಕೊಂಡ ಬಳಿಕ ಉದ್ಯಮಿ ರಾಜ್ ಕುಂದ್ರಾ (Raj Kundra) ಅವರು ಬಹುತೇಕ ತೆರೆಮರೆಗೆ ಸರಿದರು. ಮೊದಲೆಲ್ಲ ಪತ್ನಿ ಶಿಲ್ಪಾ ಶೆಟ್ಟಿ (Shilpa Shetty) ಜೊತೆ ಖುಷಿ ಖುಷಿಯಿಂದ ಪೋಸ್ ನೀಡುತ್ತಿದ್ದ ಅವರು ಈಗ ಸಂಪೂರ್ಣ ಮುಖ ಮುಚ್ಚಿಕೊಂಡು ಓಡಾಡುವಂತಾಗಿದೆ. ನಟಿಯರನ್ನು ಮತ್ತು ಮಾಡೆಲ್ಗಳನ್ನು ಯಾಮಾರಿಸಿ ಅಶ್ಲೀಲ ಸಿನಿಮಾ ಚಿತ್ರೀಕರಣ ಮಾಡಿದ ಆರೋಪ ರಾಜ್ ಕುಂದ್ರಾ ಅವರ ಮೇಲಿದೆ. ಈ ಪ್ರಕರಣದಲ್ಲಿ ಕಳೆದ ವರ್ಷ ಅವರನ್ನು ಬಂಧಿಸಲಾಗಿತ್ತು. ಹಲವು ದಿನಗಳ ಕಾಲ ಜೈಲಿನಲ್ಲಿ ಕಂಬಿ ಎಣಿಸಿದ ನಂತರ ಅವರು ಜಾಮೀನಿನ ಮೇಲೆ ಹೊರಬಂದರು. ಆ ಘಟನೆ (Raj Kundra Case) ನಡೆದು ಒಂದು ವರ್ಷವೇ ಕಳೆದಿದ್ದರೂ ಕೂಡ ರಾಜ್ ಕುಂದ್ರಾ ಅವರು ಸಾರ್ವಜನಿಕವಾಗಿ ಮುಖ ತೋರಿಸಲು ಹಿಂಜರಿಯುತ್ತಿದ್ದಾರೆ.
ರಾಜ್ ಕುಂದ್ರಾ ಮಾಡಿದ ತಪ್ಪಿನಿಂದಾಗಿ ಅವರ ಇಡೀ ಕುಟುಂಬಕ್ಕೆ ಮುಜುಗರ ಆಯಿತು. ಒಂದಷ್ಟು ದಿನಗಳ ಕಾಲ ಶಿಲ್ಪಾ ಶೆಟ್ಟಿ ಕೂಡ ಮನೆಯಿಂದ ಹೊರಬಂದಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ಅವರು ಸಹಜ ಸ್ಥಿತಿಗೆ ಮರಳಿದರು. ತಮ್ಮ ದೈನಂದಿನ ಶೂಟಿಂಗ್ ಕೆಲಸಗಳಲ್ಲಿ ತೊಡಗಿಕೊಳ್ಳಲು ಆರಂಭಿಸಿದರು. ಕಹಿ ಘಟನೆಯನ್ನು ಆದಷ್ಟು ಮರೆಯಲು ಅವರು ಪ್ರಯತ್ನಿಸಿದರು. ಆದರೆ ರಾಜ್ ಕುಂದ್ರಾ ಅವರಿಗೆ ಇದು ಸಾಧ್ಯವಾಗುತ್ತಿಲ್ಲ. ಎಲ್ಲರ ಎದುರು ಮುಖ ತೋರಿಸಲು ಅವರು ಒಪ್ಪುತ್ತಿಲ್ಲ.
ಇತ್ತೀಚೆಗೆ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರು ಒಂದು ಪಾರ್ಟಿಗೆ ಆಗಮಿಸಿದ್ದರು. ಈ ವೇಳೆ ಅವರ ಫೋಟೋ ಮತ್ತು ವಿಡಿಯೋ ಕ್ಲಿಕ್ಕಿಸಲು ಪಾಪರಾಜಿಗಳು ಮುಗಿಬಿದ್ದರು. ಶಿಲ್ಪಾ ಶೆಟ್ಟಿ ನಗುತ್ತಾ ಪೋಸ್ ನೀಡಿದರು. ಆದರೆ ರಾಜ್ ಕುಂದ್ರಾ ಮಾತ್ರ ಸಂಪೂರ್ಣ ಮುಖ ಮುಚ್ಚಿಕೊಂಡು ನಡೆದುಹೋದರು. ಒಮ್ಮೆ ಮುಖ ತೋರಿಸಿ ಎಂದು ಪಾಪರಾಜಿಗಳು ಕೇಳಿಕೊಂಡರೂ ಕೂಡ ಅದಕ್ಕೆ ರಾಜ್ ಕುಂದ್ರಾ ಗಮನ ನೀಡಲಿಲ್ಲ.
View this post on Instagram
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜನರು ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ‘ಮುಖ ತೋರಿಸುವ ಯೋಗ್ಯತೆ ಇಲ್ಲ ಎಂದಮೇಲೆ ಹೊರಗೆ ಯಾಕೆ ಬರುತ್ತೀರಿ? ಸುಮ್ಮನೆ ಮನೆಯಲ್ಲೇ ಅಡಗಿ ಕುಳಿತುಕೊಳ್ಳಿ’ ಎಂದ ನೆಟ್ಟಿಗರೊಬ್ಬರು ಚಾಟಿ ಬೀಸಿದ್ದಾರೆ. ‘ಜೀವನ ಪೂರ್ತಿ ಇದೇ ರೀತಿ ಮುಖ ಮುಚ್ಚಿಕೊಂಡು ಇರುತ್ತೀರಾ?’ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. ‘ಈತ ಜೈಲಿನಲ್ಲಿ ಇರಬೇಕಾಗಿತ್ತು. ಈಗ ಇವನ ಆಟಿಟ್ಯೂಡ್ ಹೇಗಿದೆ ನೋಡಿ’ ಎಂದು ನೆಟ್ಟಿಗರು ಖಾರವಾಗಿ ಕಮೆಂಟ್ ಮಾಡಿದ್ದಾರೆ.
Published On - 8:09 am, Thu, 4 August 22