AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Raj Kundra: ‘ಪತ್ನಿ ಶಿಲ್ಪಾ ಶೆಟ್ಟಿಯಿಂದ ನನಗೆ ಕುಖ್ಯಾತಿ ಸಿಕ್ತು’: ನೇರವಾಗಿ ಆರೋಪ ಮಾಡಿದ ರಾಜ್​ ಕುಂದ್ರಾ

Raj Kundra Troll: ‘ನೀನು ಯಾರೆಂಬುದೇ ಗೊತ್ತಿಲ್ಲದಿದ್ದರೆ ನಿನ್ನನ್ನು ಯಾರು ಟ್ರೋಲ್​ ಮಾಡುತ್ತಾರೆ? ನೀನು ಫೇಮಸ್​ ಆಗಿದ್ದೇ ಪತ್ನಿ ಶಿಲ್ಪಾ ಶೆಟ್ಟಿಯಿಂದ’ ಎಂದು ರಾಜ್​ ಕುಂದ್ರಾಗೆ ನೆಟ್ಟಿಗರೊಬ್ಬರು ಛಾಟಿ ಬೀಸಿದ್ದಾರೆ.

Raj Kundra: ‘ಪತ್ನಿ ಶಿಲ್ಪಾ ಶೆಟ್ಟಿಯಿಂದ ನನಗೆ ಕುಖ್ಯಾತಿ ಸಿಕ್ತು’: ನೇರವಾಗಿ ಆರೋಪ ಮಾಡಿದ ರಾಜ್​ ಕುಂದ್ರಾ
ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ
Follow us
TV9 Web
| Updated By: ಮದನ್​ ಕುಮಾರ್​

Updated on:Oct 19, 2022 | 8:45 AM

ಉದ್ಯಮಿ ರಾಜ್​ ಕುಂದ್ರಾ (Raj Kundra) ಮೇಲೆ ಕೆಲವು ಗಂಭೀರ ಆರೋಪಗಳಿವೆ. ನಟಿಯರು ಮತ್ತು ಮಾಡೆಲ್​ಗಳನ್ನು ಇಟ್ಟುಕೊಂಡು ಅವರು ಅಶ್ಲೀಲ ಸಿನಿಮಾ ನಿರ್ಮಾಣ ಮಾಡುತ್ತಿದ್ದರು ಎಂಬ ಆರೋಪ ಅವರ ಮೇಲಿದೆ. 2021ರ ಜುಲೈ ವೇಳೆ ಆ ಕೇಸ್​ನಲ್ಲಿ ಜೈಲು ಸೇರಿದ್ದ ಅವರು ಸದ್ಯಕ್ಕೆ ಜಾಮೀನು ಪಡೆದು ಹೊರಗಿದ್ದಾರೆ. ಜೈಲಿನಿಂದ ಹೊರಗೆ ಬಂದಾಗಿನಿಂದಲೂ ರಾಜ್​ ಕುಂದ್ರಾ ಮುಖ ಮುಚ್ಚಿಕೊಂಡು ತಿರುಗುತ್ತಿದ್ದಾರೆ. ಶಿಲ್ಪಾ ಶೆಟ್ಟಿ (Shilpa Shetty) ಪತಿ ಎಂಬ ಕಾರಣಕ್ಕೆ ಅವರು ಹೆಚ್ಚು ಫೇಮಸ್​ ಆಗಿದ್ದುಂಟು ಇದೇ ವಿಚಾರ ಇಟ್ಟುಕೊಂಡು ಅನೇಕರು ಅವರನ್ನು ಟ್ರೋಲ್​ (Troll) ಮಾಡಿದ್ದಾರೆ. ಆದರೆ ಪತ್ನಿ ಶಿಲ್ಪಾ ಶೆಟ್ಟಿಯ ಕಾರಣದಿಂದ ತಮಗೆ ಕುಖ್ಯಾತಿ ಸಿಕ್ಕಿದೆ ಎಂದು ರಾಜ್​ ಕುಂದ್ರಾ ನೇರವಾಗಿಯೇ ಹೇಳಿದ್ದಾರೆ.

ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ತಮ್ಮ ಹೆಸರು ತಳುಕು ಹಾಕಿಕೊಂಡ ಬಳಿಕ ರಾಜ್​ ಕುಂದ್ರಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಸೈಲೆಂಟ್​ ಆಗಿದ್ದರು. ಬಳಿಕ ಟ್ವಿಟರ್​ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರು. ಈಗ ಮತ್ತೆ ಅವರು ಟ್ವಿಟರ್​ಗೆ ಮರಳಿದ್ದಾರೆ. ಜನರು ಕೇಳಿದ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ಇದನ್ನೂ ಓದಿ
Image
ಶಿಲ್ಪಾ ಶೆಟ್ಟಿಗೆ ಕೋಟ್ಯಂತರ ರೂಪಾಯಿ ಆಸ್ತಿ, ಮನೆ ಬರೆದುಕೊಟ್ಟ ರಾಜ್​ ಕುಂದ್ರಾ; ಅಚ್ಚರಿ ಮೂಡಿಸಿದ ನಡೆ
Image
ಶಿಲ್ಪಾ ಶೆಟ್ಟಿ-ರಾಜ್​ ಕುಂದ್ರಾ ದಾಂಪತ್ಯಕ್ಕೆ 12 ವರ್ಷದ ಸಂಭ್ರಮ; ಸುಖ ಸಂಸಾರದ ಗುಟ್ಟು ಬಿಚ್ಚಿಟ್ಟ ನಟಿ
Image
Shilpa Shetty: ಪತಿ ರಾಜ್​ ಕುಂದ್ರಾ ಚಿಂತೆ ಮರೆತು ಬಿಂದಾಸ್​ ಆಗಿ ಕುಣಿದು ಕುಪ್ಪಳಿಸಿದ ನಟಿ ಶಿಲ್ಪಾ ಶೆಟ್ಟಿ; ವಿಡಿಯೋ ವೈರಲ್​
Image
‘ರಾಜ್​ ಕುಂದ್ರಾ ದಾರಿ ತಪ್ಪಲು ಕಾರಣವಾದ ಈಕೆಗೆ ಬಟ್ಟೆ ಬಿಚ್ಚೋದು ಬಿಟ್ಟು ಬೇರೇನೂ ಗೊತ್ತಿಲ್ಲ’: ಗೆಹನಾ ಆರೋಪ

‘ನೀನು ಯಾರೆಂಬುದೇ ಗೊತ್ತಿಲ್ಲದಿದ್ದರೆ ನಿನ್ನನ್ನು ಯಾರು ಟ್ರೋಲ್​ ಮಾಡ್ತಾರೆ? ನೀನು ಫೇಮಸ್​ ಆಗಿದ್ದೇ ಪತ್ನಿ ಶಿಲ್ಪಾ ಶೆಟ್ಟಿಯಿಂದ’ ಎಂದು ನೆಟ್ಟಿಗರೊಬ್ಬರು ಛಾಟಿ ಬೀಸಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜ್​ ಕುಂದ್ರಾ ಅವರು, ‘ಶಿಲ್ಪಾ ಶೆಟ್ಟಿಯಿಂದ ಕುಖ್ಯಾತಿ ಕೂಡ ಪಡೆದಿದ್ದೇನೆ’ ಎಂದು ಟ್ವೀಟ್​ ಮಾಡಿದ್ದಾರೆ. ಇದರ ಜೊತೆಗೆ #trollers ಎಂದು ಹ್ಯಾಶ್​ ಟ್ಯಾಗ್​ ಬಳಸಿದ್ದಾರೆ.

ರಾಜ್​ ಕುಂದ್ರಾ ಮುಖ ಮುಚ್ಚಿಕೊಂಡು ತಿರುಗಾಡುತ್ತಿರುವುದರ ಬಗ್ಗೆ ಅನೇಕರು ತಕರಾರು ತೆಗೆದಿದ್ದಾರೆ. ‘ನಿಮ್ಮ ಮುಖ ತೋರಿಸಿ. ನೀವು ಒಳ್ಳೆಯದು ಅಥವಾ ಕೆಟ್ಟದ್ದು ಏನೇ ಮಾಡಿದ್ದರೂ ಅದರ ಬಗ್ಗೆ ಒಂದು ನಿಲುವು ತೆಗೆದುಕೊಳ್ಳುವ ಧೈರ್ಯ ತೋರಿಸಿ’ ಎಂದು ನೆಟ್ಟಿಗರೊಬ್ಬರು ಉಪದೇಶ ನೀಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜ್ ಕುಂದ್ರಾ, ‘ನಾನು ಜನರಿಂದ ಮುಖ ಮುಚ್ಚಿಕೊಂಡಿಲ್ಲ. ಮಾಧ್ಯಮಗಳಿಗೆ ನನ್ನ ಮುಖ ತೋರಿಸಬಾರದು ಅಂತ ಹೀಗೆ ಮಾಡುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಈ ವರ್ಷ ಶಿಲ್ಪಾ ಶೆಟ್ಟಿ ಮನೆಯಲ್ಲಿ ಗಣೇಶೋತ್ಸವ ಆಚರಿಸಲಾಯಿತು. ಆಗಲೂ ಕೂಡ ರಾಜ್​ ಕುಂದ್ರಾ ಅವರು ಮುಖ ಮುಚ್ಚಿಕೊಂಡಿದ್ದರು. ಅವರ ಸೋಶಿಯಲ್​ ಮೀಡಿಯಾ ಡಿಪಿಯಲ್ಲಿ ಇರುವ ಫೋಟೋದಲ್ಲೂ ಅವರು ಮುಖ ತೋರಿಸಿಲ್ಲ. ಇದೆಲ್ಲ ಅತಿ ಆಯ್ತು ಎಂದು ಜನರು ಕಮೆಂಟ್​ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:39 am, Wed, 19 October 22

Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭಫಲ
Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭಫಲ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ