ಟ್ರೋಲ್ ಮಧ್ಯೆಯೂ ಓಂ ರಾವತ್ಗೆ 4 ಕೋಟಿ ರೂ. ಕಾರು ಕೊಟ್ಟ ‘ಆದಿಪುರುಷ್’ ನಿರ್ಮಾಪಕ ಭೂಷಣ್ ಕುಮಾರ್?
ಭೂಷಣ್ ಕುಮಾರ್ ಹಾಗೂ ಓಂ ರಾವತ್ ಒಟ್ಟಾಗಿ ನಿಂತಿರುವ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇವರ ಹಿಂದೆ ಫೆರಾರಿ ಕಾರು ನಿಂತಿತ್ತು. ಇದನ್ನು ನೋಡಿದ ಬಾಲಿವುಡ್ ಮಂದಿ ತಪ್ಪಾಗಿ ಅರ್ಥೈಸಿಕೊಂಡಿದ್ದರು.
ಸಾಕಷ್ಟು ಅದ್ದೂರಿಯಾಗಿ ಮೂಡಿ ಬಂದಿರುವ ‘ಆದಿಪುರುಷ್’ ಸಿನಿಮಾದ (Adipurush Movie) ಟೀಸರ್ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಕೇಳಿ ಬರಬಹುದು ಎಂದು ಚಿತ್ರತಂಡದವರು ನಿರೀಕ್ಷಿಸಿದ್ದರು. ಆದರೆ, ಅದು ಸುಳ್ಳಾಗಿತ್ತು. ಎಲ್ಲರೂ ಹಿಗ್ಗಾಮುಗ್ಗಾ ಈ ಚಿತ್ರವನ್ನು ಟ್ರೋಲ್ ಮಾಡಿದ್ದರು. ಇದರಿಂದ ಸಿನಿಮಾಗೆ ಹಿನ್ನಡೆ ಆಗಿದೆ. ನಿರ್ದೇಶಕ ಓಂ ರಾವತ್ ಬಗ್ಗೆ ಎಲ್ಲರೂ ಟೀಕೆ ಮಾಡುತ್ತಿದ್ದಾರೆ. ಈ ಮಧ್ಯೆ ಈ ಚಿತ್ರದ ನಿರ್ಮಾಪಕ ಭೂಷಣ್ ಕುಮಾರ್ (Bhushan Kumar) ಅವರು ಓಂ ರಾವವತ್ಗೆ ಬರೋಬ್ಬರಿ 4 ಕೋಟಿ ರೂಪಾಯಿ ಮೌಲ್ಯದ ಫೆರಾರಿ ಕಾರನ್ನು ಗಿಫ್ಟ್ ನೀಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಇದು ಸುಳ್ಳು ಎಂಬುದು ನಂತರ ಗೊತ್ತಾಗಿದೆ.
ಭೂಷಣ್ ಕುಮಾರ್ ಹಾಗೂ ಓಂ ರಾವತ್ ಒಟ್ಟಾಗಿ ನಿಂತಿರುವ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇವರ ಹಿಂದೆ ಫೆರಾರಿ ಕಾರು ನಿಂತಿತ್ತು. ಇದನ್ನು ನೋಡಿದ ಬಾಲಿವುಡ್ ಮಂದಿ ತಪ್ಪಾಗಿ ಅರ್ಥೈಸಿಕೊಂಡಿದ್ದರು. ‘ಓಂ ರಾವತ್ ಕೆಲಸ ಮೆಚ್ಚಿ ಭೂಷಣ್ ಕುಮಾರ್ ದುಬಾರಿ ಬೆಲೆಯ ಕಾರನ್ನು ಗಿಫ್ಟ್ ನೀಡಿದ್ದಾರೆ’ ಎಂದು ವರದಿ ಬಿತ್ತರ ಮಾಡಲಾಗಿತ್ತು. ಆದರೆ, ಈ ಸುದ್ದಿ ಶುದ್ಧ ಸುಳ್ಳು.
ವೈರಲ್ ಆದ ಕಾರಿನ ನಂಬರ್ಪ್ಲೇಟ್ನಲ್ಲಿರುವ ರಿಜಿಸ್ಟರ್ ಸಂಖ್ಯೆಯನ್ನು ಪರಿಶೀಲಿಸಿದಾಗ ಈ ಕಾರು ಭೂಷಣ್ ಕುಮಾರ್ ಹೆಸರಲ್ಲಿ ರಿಜಿಸ್ಟರ್ ಆಗಿರುವ ವಿಚಾರ ಗೊತ್ತಾಗಿದೆ. ಈ ಬಗ್ಗೆ ಕೆಲವು ಮಾಧ್ಯಮಗಳು ಸ್ಪಷ್ಟನೆ ನೀಡುವ ಕೆಲಸ ಮಾಡಿವೆ. ಕೆಲವರು ಸತ್ಯ ತಿಳಿಯದೇ ಸುಳ್ಳು ಸುದ್ದಿಯನ್ನೇ ಹಂಚುತ್ತಿದ್ದಾರೆ.
ಇದನ್ನೂ ಓದಿ: Prabhas: ‘ಆದಿಪುರುಷ್’ ಚಿತ್ರದ ಐವರ ಮೇಲೆ ಕೇಸ್; ಪ್ರಭಾಸ್, ಸೈಫ್ ಅಲಿ ಖಾನ್ಗೆ ಕಾನೂನಿನ ಸಂಕಷ್ಟ
‘ಆದಿಪುರುಷ್’ ಚಿತ್ರ 2023ರ ಸಂಕ್ರಾಂತಿಗೆ ರಿಲೀಸ್ ಆಗುತ್ತಿದೆ. 500 ಕೋಟಿ ರೂಪಾಯಿ ಬಜೆಟ್ನಲ್ಲಿ ಈ ಸಿನಿಮಾ ಮೂಡಿ ಬಂದಿದೆ. 3ಡಿಯಲ್ಲಿ ಚಿತ್ರವನ್ನು ನೋಡಬಹುದು. ಪ್ರಭಾಸ್ ಅವರು ರಾಮನಾಗಿ ಕಾಣಿಸಿಕೊಂಡರೆ, ಕೃತಿ ಸನೋನ್ ಸೀತೆ ಪಾತ್ರ ಮಾಡಿದ್ದಾರೆ. ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಕಾಣಿಸಿಕೊಂಡಿದ್ದಾರೆ. ಖಿಲ್ಜಿ ರೀತಿ ರಾವಣನನ್ನು ತೋರಿಸಲಾಗಿದೆ ಎಂಬಿತ್ಯಾದಿ ಆರೋಪಗಳು ಕೇಳಿ ಬಂದಿವೆ. ಇದಕ್ಕೆ ಚಿತ್ರತಂಡ ಸ್ಪಷ್ಟನೆ ನೀಡುವ ಕೆಲಸ ಮಾಡಿತ್ತು. ‘ಇದು ದೊಡ್ಡ ಪರದೆಗಾಗಿ ಮಾಡಿದ ಸಿನಿಮಾ. ಹೀಗಾಗಿ, ಮೊಬೈಲ್ನಲ್ಲಿ ನೋಡಿದಾಗ ಒಳ್ಳೆಯ ಅನುಭವ ಕೊಡುವುದಿಲ್ಲ’ ಎಂಬ ಹೇಳಿಕೆಯನ್ನು ನಿರ್ದೇಶಕರು ನೀಡಿದ್ದರು.