AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Adipurush: ‘ಆದಿಪುರುಷ್​’ ಕಳಪೆ ಗ್ರಾಫಿಕ್ಸ್​: ಎಲ್ಲ ಬಿಟ್ಟು ಯೂಟ್ಯೂಬ್​ ಮೇಲೆ ಆರೋಪ ಹೊರಿಸಿದ ನಿರ್ದೇಶಕ

Om Raut | Adipurush Teaser: ‘ಆದಿಪುರುಷ್​’ ಸಿನಿಮಾದಲ್ಲಿ ರಾಮಾಯಣದ ಕಥೆ ಇರಲಿದೆ. ಆ ವೈಭವವನ್ನು ತೋರಿಸಲು ಗ್ರಾಫಿಕ್ಸ್​ ಬಳಸಲಾಗಿದೆ. ಆದರೆ ಅದರ ಗುಣಮಟ್ಟ ಕಂಡು ಸಿನಿಪ್ರಿಯರು ಬೇಸರ ಮಾಡಿಕೊಂಡಿದ್ದಾರೆ.

Adipurush: ‘ಆದಿಪುರುಷ್​’ ಕಳಪೆ ಗ್ರಾಫಿಕ್ಸ್​: ಎಲ್ಲ ಬಿಟ್ಟು ಯೂಟ್ಯೂಬ್​ ಮೇಲೆ ಆರೋಪ ಹೊರಿಸಿದ ನಿರ್ದೇಶಕ
ಓಂ ರಾವತ್
TV9 Web
| Edited By: |

Updated on: Oct 05, 2022 | 3:34 PM

Share

ಪೌರಾಣಿಕ ಕಥಾಹಂದರ ಹೊಂದಿರುವ ‘ಆದಿಪುರುಷ್​’ (Adipurush) ಚಿತ್ರದ ಟೀಸರ್​ಗೆ ಭಾರಿ ಮೆಚ್ಚುಗೆ ಸಿಗಬಹುದು ಎಂದು ಚಿತ್ರತಂಡ ಊಹಿಸಿತ್ತು. ಆದರೆ ಆಗಿದ್ದೇ ಬೇರೆ. ಅಕ್ಟೋಬರ್​ 2ರಂದು ಅಯೋಧ್ಯೆಯಲ್ಲಿ ಅದ್ದೂರಿಯಾಗಿ ಟೀಸರ್​ (Adipurush Teaser) ಬಿಡುಗಡೆ ಮಾಡಲಾಯಿತು. ಅದನ್ನು ನೋಡಿ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಭಾಸ್​ ನಟನೆಯ ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಆದರೆ ಟೀಸರ್​ನಲ್ಲಿ ಕಾಣಿಸಿದ ಗ್ರಾಫಿಕ್ಸ್​ ಗುಣಮಟ್ಟ ತೀರಾ ಕಳಪೆ ಆಗಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಈ ಕುರಿತು ಅನೇಕ ಮೀಮ್ಸ್​ ಕೂಡ ಹರಿದಾಡುತ್ತಿವೆ. ಒಟ್ಟಾರೆ ಬೆಳವಣಿಗೆಗಳ ಬಗ್ಗೆ ನಿರ್ದೇಶಕ ಓಂ ರಾವತ್​ (Om Raut) ಅವರು ಪ್ರತಿಕ್ರಿಯೆ ನೀಡಿದ್ದಾರೆ.

ರಾಮಾಯಣದ ಕಥೆಯನ್ನು ‘ಆದಿಪುರುಷ್​’ ಸಿನಿಮಾ ಹೊಂದಿರಲಿದೆ. ಆ ವೈಭವವನ್ನು ತೋರಿಸಲು ಗ್ರಾಫಿಕ್ಸ್​ ಬಳಸಲಾಗಿದೆ. ಆದರೆ ಅದರ ಗುಣಮಟ್ಟ ಕಂಡು ನೆಟ್ಟಿಗರು ಬೇಸರ ಮಾಡಿಕೊಂಡಿದ್ದಾರೆ. ನಿರ್ದೇಶಕ ಓಂ ರಾವತ್​ ಹೇಳುವ ಪ್ರಕಾರ, ಯೂಟ್ಯೂಬ್​ನಲ್ಲಿ ಟೀಸರ್​ ನೋಡಿದ್ದೇ ಇದಕ್ಕೆ ಕಾರಣವಂತೆ! ‘ಈ ಸಿನಿಮಾವನ್ನು ನಾನು ಮಾಡಿರುವುದು ದೊಡ್ಡ ಪರದೆಗಾಗಿ. ನಾನು ಈ ಚಿತ್ರದ ಯಾವುದೇ ತುಣುಕನ್ನು ಯೂಟ್ಯೂಬ್​ನಲ್ಲಿ ರಿಲೀಸ್ ಮಾಡುತ್ತಿರಲಿಲ್ಲ. ಆದರೆ ಪ್ರಚಾರದ ಸಲುವಾಗಿ ಮಾಡಿದ್ದೇವೆ’ ಎಂದು ಓಂ ರಾವತ್​ ಹೇಳಿದ್ದಾರೆ.

‘ಆದಿಪುರುಷ್​’ ಟೀಸರ್​ನಲ್ಲಿನ ಅನೇಕ ವಿಚಾರಗಳ ಬಗ್ಗೆ ಜನರು ತಕರಾರು ತೆಗೆದಿದ್ದಾರೆ. ಇದರಲ್ಲಿ ರಾವಣನ ಪಾತ್ರವನ್ನು ಸೈಫ್​ ಅಲಿ ಖಾನ್​ ಮಾಡಿದ್ದಾರೆ. ಅವರು ರಾವಣನ ರೀತಿ ಕಾಣಿಸುವ ಬದಲು ಅಲ್ಲಾವುದ್ದೀನ್​ ಖಿಲ್ಜಿ ರೀತಿ ಕಾಣುತ್ತಿದ್ದಾರೆ ಎಂದು ಕೆಲವರು ಟೀಕೆ ಮಾಡಿದ್ದಾರೆ. ವಾನರ ಸೇನೆಯ ಕೋತಿಗಳು ಕೂಡ ಬೇರೆ ಪ್ರಾಣಿಗಳ ರೀತಿಯಲ್ಲಿ ಕಾಣುತ್ತಿವೆ ಎಂಬ ಕಮೆಂಟ್ಸ್​ ಬಂದಿವೆ. ‘ಗೇಮ್​ ಆಫ್​ ಥ್ರೋನ್ಸ್​’ ದೃಶ್ಯಗಳನ್ನು ಕಾಪಿ ಮಾಡಲಾಗಿದೆ ಎಂದು ಕೂಡ ಕೆಲವರು ಆರೋಪಿಸಿದ್ದಾರೆ.

ಇದನ್ನೂ ಓದಿ
Image
Prabhas: ದೊಡ್ಡಪ್ಪನ ನಿಧನದ ನೋವಿಟ್ಟುಕೊಂಡು ಕೆಲಸಕ್ಕೆ ಬಂದ ಪ್ರಭಾಸ್​; ‘ಸಲಾರ್​’ ಶೂಟಿಂಗ್​ ಮತ್ತೆ ಶುರು
Image
Prabhas: ದೊಡ್ಡಪ್ಪನ ಅಂತ್ಯ ಸಂಸ್ಕಾರಕ್ಕೆ ಬಂದ ಫ್ಯಾನ್ಸ್​ಗೆ ಊಟದ ವ್ಯವಸ್ಥೆ ಮಾಡಿಸಿ ಕಾಳಜಿ ತೋರಿದ ಪ್ರಭಾಸ್​
Image
ಪ್ರಭಾಸ್​ ವರ್ಸಸ್​ ಪ್ರಭಾಸ್​: ‘ಸಲಾರ್​’ ಚಿತ್ರದಲ್ಲಿ ಡಬಲ್​ ರೋಲ್​ ಮಾಡಿಸುತ್ತಾರಾ ಪ್ರಶಾಂತ್​ ನೀಲ್​?
Image
‘ರಾಧೆ ಶ್ಯಾಮ್​’ ಸೋಲಿಗೆ 2 ಮುಖ್ಯ ಕಾರಣ ತಿಳಿಸಿದ ಪ್ರಭಾಸ್​; ಪ್ರೇಕ್ಷಕರು ಈ ನೆಪವನ್ನೆಲ್ಲ ಒಪ್ಪುತ್ತಾರಾ?

ಎಷ್ಟೇ ಟೀಕೆ ಕೇಳಿಬಂದರೂ ನಿರ್ದೇಶಕ ಓಂ ರಾವತ್​ ತಲೆ ಕೆಡಿಸಿಕೊಂಡಿಲ್ಲ. ಈ ಸಿನಿಮಾ 3ಡಿ ವರ್ಷನ್​ನಲ್ಲೂ ಬಿಡುಗಡೆ ಆಗಲಿದೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡಿದಾಗ ಗ್ರಾಫಿಕ್ಸ್​ ಚೆನ್ನಾಗಿ ಕಾಣಲಿದೆ ಎಂಬುದು ಅವರ ಅಭಿಪ್ರಾಯ. ಈ ಕುರಿತಂತೆ ಅಭಿಮಾನಿಗಳ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಬಹುಕೋಟಿ ರೂಪಾಯಿ ಬಜೆಟ್​ನಲ್ಲಿ ‘ಆದಿಪುರುಷ್​’ ಚಿತ್ರ ಮೂಡಿಬರುತ್ತಿದೆ. 2023ರ ಜನವರಿ 12ರಂದು ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಪ್ರದರ್ಶನ ಕಾಣಲಿದೆ. ಎಲ್ಲ ಭಾಷೆಯಲ್ಲಿಯೂ ಟೀಸರ್​ ರಿಲೀಸ್​ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಲಕ್ಕುಂಡಿಯಲ್ಲಿ 3 ತಲೆಯ ನಾಗರಕಲ್ಲು ಪ್ರಾಚ್ಯಾವಶೇಷ ಪತ್ತೆ!
ಲಕ್ಕುಂಡಿಯಲ್ಲಿ 3 ತಲೆಯ ನಾಗರಕಲ್ಲು ಪ್ರಾಚ್ಯಾವಶೇಷ ಪತ್ತೆ!