Prabhas: ‘ಆದಿಪುರುಷ್​’ ಕಳಪೆ ಗ್ರಾಫಿಕ್ಸ್​; ‘ಈ ಕೆಲಸ ನಾವು ಮಾಡಿಲ್ಲ’ ಎಂದು ಪ್ರಕಟಣೆ ನೀಡಿದ ಖ್ಯಾತ ಸಂಸ್ಥೆ

Adipurush Teaser: ‘ಆದಿಪುರುಷ್​’ ಚಿತ್ರದ ಟೀಸರ್​ ನೋಡಿದ ಬಳಿಕ ಜನರು ಬಗೆಬಗೆಯಲ್ಲಿ ಟೀಕೆ ಮಾಡುತ್ತಿದ್ದಾರೆ. ಇದರಿಂದ ಚಿತ್ರತಂಡಕ್ಕೆ ತಲೆ ಬಿಸಿ ಶುರುವಾಗಿದೆ.

Prabhas: ‘ಆದಿಪುರುಷ್​’ ಕಳಪೆ ಗ್ರಾಫಿಕ್ಸ್​; ‘ಈ ಕೆಲಸ ನಾವು ಮಾಡಿಲ್ಲ’ ಎಂದು ಪ್ರಕಟಣೆ ನೀಡಿದ ಖ್ಯಾತ ಸಂಸ್ಥೆ
ಪ್ರಭಾಸ್, ಸೈಫ್ ಅಲಿ ಖಾನ್
Follow us
| Updated By: ಮದನ್​ ಕುಮಾರ್​

Updated on: Oct 04, 2022 | 10:58 AM

ಪ್ರಭಾಸ್​ ಸಿನಿಮಾಗಳೆಂದರೆ ಅದ್ದೂರಿತನ ಇರಲೇಬೇಕು. ಅದೇ ರೀತಿ, ಗುಣಮಟ್ಟವನ್ನು ಕೂಡ ಪ್ರೇಕ್ಷಕರು ಬಯಸುತ್ತಾರೆ. ‘ಬಾಹುಬಲಿ’ ನಂತರ ಪ್ರಭಾಸ್​ ಪಡೆದಿರುವ ಇಮೇಜ್​ ಅಂಥದ್ದು. ಅವರ ಪ್ರತಿ ಸಿನಿಮಾದ ಮೇಲೂ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟಿರುತ್ತಾರೆ. ದೊಡ್ಡ ಕ್ಯಾನ್ವಾಸ್​ನಲ್ಲಿ ನಿರ್ಮಾಣ ಆಗುತ್ತಿರುವ ‘ಆದಿಪುರುಷ್​’ ಸಿನಿಮಾ ಕೂಡ ಈ ಮಾತಿಗೆ ಹೊರತಾಗಿಲ್ಲ. ಈ ಚಿತ್ರಕ್ಕೆ ಬಾಲಿವುಡ್​ ನಿರ್ದೇಶಕ ಓಂ ರಾವತ್​ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಖ್ಯಾತ ನಿರ್ಮಾಪಕ ಭೂಷಣ್​ ಕುಮಾರ್​ ಅವರು ಬಂಡವಾಳ ಹೂಡುತ್ತಿದ್ದಾರೆ. ಹಾಗಿದ್ದರೂ ಕೂಡ ಕಳಪೆ ವಿಎಫ್​ಎಕ್ಸ್​ ಇದೆ ಎಂಬ ಕಾರಣಕ್ಕೆ ನೆಟ್ಟಿಗರು ‘ಆದಿಪುರುಷ್​’ ಚಿತ್ರದ ಟ್ರೇಲರ್​ ಅನ್ನು ಟ್ರೋಲ್​ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಖ್ಯಾತ ವಿಎಫ್​ಎಕ್ಸ್​ ಕಂಪನಿಯಾದ ‘ಎನ್​ವೈ ವಿಎಫ್​ಎಕ್ಸ್​ವಾಲಾ’ ಕಡೆಯಿಂದ ಒಂದು ಸ್ಪಷ್ಟನೆ ನೀಡಲಾಗಿದೆ.

ಕಳಪೆ ಗ್ರಾಫಿಕ್ಸ್​ ವಿಚಾರಕ್ಕೆ ‘ಆದಿಪುರುಷ್​’ ಚಿತ್ರದ ಟೀಸರ್​ ಭಾರಿ ಟೀಕೆಗೆ ಒಳಗಾದ ಬಳಿಕ ಅನೇಕ ಮಾಧ್ಯಮದವರು ‘ಎನ್​ವೈ ವಿಎಫ್​ಎಕ್ಸ್​ವಾಲಾ’ ಸಂಸ್ಥೆಗೆ ಕರೆ ಮಾಡಿ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿದ್ದಾರೆ. ಹಾಗಾಗಿ ಟ್ವಿಟರ್​ ಮೂಲಕವೇ ಬಹಿರಂಗವಾಗಿ ಸ್ಪಷ್ಟನೆ ನೀಡಿದೆ ಈ ಸಂಸ್ಥೆ. ‘ಆದಿಪುರುಷ್​’ ಚಿತ್ರಕ್ಕೆ ತಾವು ವಿಎಫ್​ಎಕ್ಸ್​ ಕೆಲಸ ಮಾಡಿಲ್ಲ ಎಂದು ಈ ಕಂಪನಿ ಹೇಳಿಕೊಂಡಿದೆ.

ಇದನ್ನೂ ಓದಿ
Image
Prabhas: ದೊಡ್ಡಪ್ಪನ ನಿಧನದ ನೋವಿಟ್ಟುಕೊಂಡು ಕೆಲಸಕ್ಕೆ ಬಂದ ಪ್ರಭಾಸ್​; ‘ಸಲಾರ್​’ ಶೂಟಿಂಗ್​ ಮತ್ತೆ ಶುರು
Image
Prabhas: ದೊಡ್ಡಪ್ಪನ ಅಂತ್ಯ ಸಂಸ್ಕಾರಕ್ಕೆ ಬಂದ ಫ್ಯಾನ್ಸ್​ಗೆ ಊಟದ ವ್ಯವಸ್ಥೆ ಮಾಡಿಸಿ ಕಾಳಜಿ ತೋರಿದ ಪ್ರಭಾಸ್​
Image
ಪ್ರಭಾಸ್​ ವರ್ಸಸ್​ ಪ್ರಭಾಸ್​: ‘ಸಲಾರ್​’ ಚಿತ್ರದಲ್ಲಿ ಡಬಲ್​ ರೋಲ್​ ಮಾಡಿಸುತ್ತಾರಾ ಪ್ರಶಾಂತ್​ ನೀಲ್​?
Image
‘ರಾಧೆ ಶ್ಯಾಮ್​’ ಸೋಲಿಗೆ 2 ಮುಖ್ಯ ಕಾರಣ ತಿಳಿಸಿದ ಪ್ರಭಾಸ್​; ಪ್ರೇಕ್ಷಕರು ಈ ನೆಪವನ್ನೆಲ್ಲ ಒಪ್ಪುತ್ತಾರಾ?

ಈ ಹಿಂದೆ ‘ಎನ್​ವೈ ವಿಎಫ್​ಎಕ್ಸ್​ವಾಲಾ’ ಸಂಸ್ಥೆಯ ಸಹ-ಸಂಸ್ಥಾಪಕ ಪ್ರಸಾದ್​ ಸುತಾರ್​ ಅವರು ‘ಆದಿಪುರುಷ್​’ ಚಿತ್ರದ ಅನೇಕ ಪೋಸ್ಟರ್​ಗಳನ್ನು ಶೇರ್ ಮಾಡಿಕೊಂಡಿದ್ದರು. ಆದರೆ ಇದೇ ಕಂಪನಿ ಕಡೆಯಿಂದ ಈಗ ಈ ರೀತಿ ಸ್ಪಷ್ಟನೆ ಸಿಕ್ಕಿರುವುದು ಗೊಂದಲಕ್ಕೆ ಕಾರಣ ಆಗಿದೆ. ಈ ಕುರಿತು ಚಿತ್ರತಂಡ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

‘ಆದಿಪುರುಷ್​’ ಚಿತ್ರದಲ್ಲಿ ಪ್ರಭಾಸ್​ ಅವರು ರಾಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸೈಫ್​ ಅಲಿ ಖಾನ್​ ಅವರಿಗೆ ರಾವಣನ ಪಾತ್ರ ನೀಡಲಾಗಿದೆ. ಸೀತೆಯಾಗಿ ಕೃತಿ ಸನೋನ್​ ನಟಿಸುತ್ತಿದ್ದಾರೆ. ರಾವಣನ ಪಾತ್ರ ಅಲ್ಲಾವುದ್ದೀನ್​ ಖಿಲ್ಜಿ ರೀತಿ ಇದೆ ಎಂದು ಅನೇಕರು ಟೀಕೆ ಮಾಡುತ್ತಿದ್ದಾರೆ. ‘ಗೇಮ್​ ಆಫ್​ ಥ್ರೋನ್ಸ್​’ ದೃಶ್ಯಗಳ ರೀತಿಯೇ ‘ಆದಿಪುರುಷ್​’ ಟೀಸರ್​ನಲ್ಲಿ ಕೆಲವು ಶಾಟ್ಸ್​ ಇವೆ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.

ಅಕ್ಟೋಬರ್​ 2ರಂದು ಅಯೋಧ್ಯೆಯಲ್ಲಿ ಅದ್ದೂರಿಯಾಗಿ ‘ಆದಿಪುರುಷ್​’ ಚಿತ್ರದ ಟೀಸರ್​ ರಿಲೀಸ್​ ಮಾಡಲಾಯ್ತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ ಎಂದು ಚಿತ್ರತಂಡ ನಿರೀಕ್ಷಿಸಿತ್ತು. ಆದರೆ ಜನರು ಬಗೆಬಗೆಯಲ್ಲಿ ಟೀಕೆ ಮಾಡುತ್ತಿದ್ದಾರೆ. ಇದರಿಂದ ಚಿತ್ರತಂಡಕ್ಕೆ ತಲೆ ಬಿಸಿ ಶುರುವಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ