AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಗಿದ್ದಾರೆ ರಶ್ಮಿಕಾ ಮಂದಣ್ಣ ತಂಗಿ?; ಫೋಟೋ ಹಂಚಿಕೊಂಡ ಕೊಡಗಿನ ಹುಡುಗಿ

ರಶ್ಮಿಕಾ ಮಂದಣ್ಣ ಅವರು ‘ಗುಡ್​ಬೈ’ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಾಲಿವುಡ್​ನಲ್ಲಿ ರಿಲೀಸ್ ಆಗುತ್ತಿರುವ ಅವರ ಮೊದಲ ಸಿನಿಮಾ.

ಹೇಗಿದ್ದಾರೆ ರಶ್ಮಿಕಾ ಮಂದಣ್ಣ ತಂಗಿ?; ಫೋಟೋ ಹಂಚಿಕೊಂಡ ಕೊಡಗಿನ ಹುಡುಗಿ
ರಶ್ಮಿಕಾ
TV9 Web
| Edited By: |

Updated on: Oct 04, 2022 | 6:10 PM

Share

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸದ್ಯ ಶೂಟಿಂಗ್​ನಿಂದ ಬ್ರೇಕ್ ಪಡೆದುಕೊಂಡು ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಅವರ ನಟನೆಯ ಮೊದಲ ಹಿಂದಿ ಸಿನಿಮಾ ‘ಗುಡ್​ಬೈ’ (Goodbye) ರಿಲೀಸ್​ಗೆ ರೆಡಿ ಇದೆ. ಇದನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ. ಇದು ಕುಟುಂಬ ಕುಳಿತು ನೋಡುವ ಸಿನಿಮಾ ಎಂಬುದು ಟ್ರೇಲರ್ ಮೂಲಕ ಸಾಬೀತಾಗಿದೆ. ಎಮೋಷನಲ್ ಕಥೆಯನ್ನು ಈ ಚಿತ್ರ ಹೊಂದಿದೆ. ಈ ಸಿನಿಮಾ ರಿಲೀಸ್​ಗೂ ಮೊದಲು ಅವರು ಫ್ಯಾಮಿಲಿ ಫೋಟೋ ಹಂಚಿಕೊಂಡಿದ್ದಾರೆ.

‘ಗುಡ್​ಬೈ’ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಅವರು ರಶ್ಮಿಕಾ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನೀನಾ ಗುಪ್ತಾ ಅವರು ರಶ್ಮಿಕಾ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಕಥಾ ನಾಯಕಿ ತಾರಾಳ ತಾಯಿ ನಿಧನ ಹೊಂದುತ್ತಾಳೆ. ಸದಾ ತಾಯಿಯನ್ನು ಬೈಯ್ಯುತ್ತಾ ಇರುವ ತಾರಾಗೆ ಅಮ್ಮ ಸತ್ತ ನಂತರದಲ್ಲಿ ಅವಳ ನಿಜವಾದ ಮೌಲ್ಯ ತಿಳಿಯುತ್ತದೆ. ಚಿತ್ರದ ಕಥೆ ಸಂಪೂರ್ಣವಾಗಿ ಭಾವನಾತ್ಮಕವಾಗಿದೆ ಎಂಬುದು ಟ್ರೇಲರ್​ನಲ್ಲಿ ಗೊತ್ತಾಗಿದೆ. ಸಿನಿಮಾ ಪ್ರಚಾರದ ಭಾಗವಾಗಿ ಅವರು ಕುಟುಂಬದ ಫೋಟೋ ಹಂಚಿಕೊಂಡಿದ್ದಾರೆ.

ರಶ್ಮಿಕಾ, ಅವರ ತಾಯಿ ಸುಮನ್ ಮಂದಣ್ಣ, ತಂದೆ ಮದನ್ ಮಂದಣ್ಣ ಹಾಗೂ ತಂಗಿ ಶಿಮನ್ ಮಂದಣ್ಣ ಈ ಫೋಟೋದಲ್ಲಿ ಇದ್ದಾರೆ. ಈ ಫೋಟೋ ಹಂಚಿಕೊಂಡಿರುವ ರಶ್ಮಿಕಾ ಅವರು, ‘ಇದು ನನ್ನ ರಿಯಲ್ ಕುಟುಂಬ. ನನ್ನ ರೀಲ್ ಕುಟುಂಬವನ್ನು ಮೂರು ದಿನಗಳಲ್ಲಿ ಭೇಟಿ ಮಾಡುತ್ತೀರಿ. ‘ಗುಡ್​ಬೈ’ ಕುಟುಂಬ’ ಎಂದು ಬರೆದುಕೊಂಡಿದ್ದಾರೆ ರಶ್ಮಿಕಾ.

ಇದನ್ನೂ ಓದಿ
Image
Rashmika Mandanna: ಎದೆ ಮೇಲೆ ಆಟೋಗ್ರಾಫ್​ ಹಾಕಿ ಅಂತ ಹಠ ಹಿಡಿದ ರಶ್ಮಿಕಾ ಮಂದಣ್ಣ ಅಭಿಮಾನಿ; ಮುಂದೇನಾಯ್ತು?
Image
Rashmika Mandanna: ‘ಇಂದು ನಾನೇ ಗೋಲ್ಡನ್​ ಗರ್ಲ್​’ ಅಂತ ಪೋಸ್​ ನೀಡಿದ ರಶ್ಮಿಕಾ ಮಂದಣ್ಣ; ಆದ್ರೆ ಜನ ಹೇಳಿದ್ದೇನು?
Image
Rashmika Mandanna: ಬಾಲಿವುಡ್​ ಸೇರಿದ ರಶ್ಮಿಕಾ ಮಂದಣ್ಣ ಹೊಸ ಅವತಾರ ಹೇಗಿದೆ ನೋಡಿ; ಫೋಟೋ ವೈರಲ್​
Image
Rashmika Mandanna: ಸೆಲ್ಫಿ ಕೇಳಿದ ಅಭಿಮಾನಿಗಳ ಜತೆ ರಶ್ಮಿಕಾ ಮಂದಣ್ಣ ನಡೆದುಕೊಂಡಿದ್ದು ಹೇಗೆ? ವಿಡಿಯೋ ವೈರಲ್​

ರಶ್ಮಿಕಾ ಮಂದಣ್ಣ ಅವರು ‘ಗುಡ್​ಬೈ’ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಾಲಿವುಡ್​ನಲ್ಲಿ ರಿಲೀಸ್ ಆಗುತ್ತಿರುವ ಅವರ ಮೊದಲ ಸಿನಿಮಾ. ಈ ಚಿತ್ರದಲ್ಲಿ ರಶ್ಮಿಕಾ ನಟನೆಗೆ ಮೆಚ್ಚುಗೆ ಸಿಕ್ಕರೆ ಅವರ ಬೇಡಿಕೆ ಮತ್ತಷ್ಟು ಹೆಚ್ಚಲಿದೆ. ಈಗಾಗಲೇ ರಶ್ಮಿಕಾ ಹಿಂದಿಯಲ್ಲಿ ‘ಮಿಷನ್ ಮಜ್ನು’, ‘ಅನಿಮಲ್’ ಮೊದಲಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ‘ದೇವರಕೊಂಡ ಜತೆ ಲಿಪ್​ ಲಾಕ್​ ಮಾಡಿ ಟ್ರೋಲ್​ ಆದಾಗ ಹಗಲು-ರಾತ್ರಿ ಕಣ್ಣೀರು ಸುರಿಸಿದ್ದೆ’: ರಶ್ಮಿಕಾ

ರಶ್ಮಿಕಾ ಖ್ಯಾತಿ ಕೇವಲ ಬಾಲಿವುಡ್​ಗೆ ಮಾತ್ರ ಸೀಮಿತವಾಗಿಲ್ಲ. ತೆಲುಗಿನಲ್ಲಿ ‘ಪುಷ್ಪ 2’, ತಮಿಳಿನಲ್ಲಿ ದಳಪತಿ ವಿಜಯ್ ನಟನೆಯ ‘ವಾರಿಸು’ ಸಿನಿಮಾ ಕೆಲಸಗಳಲ್ಲಿಯೂ ರಶ್ಮಿಕಾ ಬಣ್ಣ ಹಚ್ಚುತ್ತಿದ್ದಾರೆ. ಇತ್ತೀಚೆಗೆ ತೆರೆಗೆ ಬಂದ ಅವರ ನಟನೆಯ ‘ಸೀತಾ ರಾಮಂ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ರಶ್ಮಿಕಾ ಮುಖ್ಯ ಪಾತ್ರದಲ್ಲಿ ಮಿಂಚಿದ್ದರು.