- Kannada News Photo gallery Rashmika Mandanna Amitabh Bachchan starrer Goodbye movie ticket price fixed to Rs 150 on opening day
Goodbye: ರಶ್ಮಿಕಾ ಹೊಸ ಚಿತ್ರದ ಟಿಕೆಟ್ ಬೆಲೆ ಕೇವಲ 150 ರೂ.; ಸಿಹಿ ಸುದ್ದಿ ನೀಡಿದ ‘ಗುಡ್ಬೈ’ ತಂಡ
Goodbye Ticket Price: ಕಡಿಮೆ ಬೆಲೆ ಇದ್ದರೆ ಮನೆ ಮಂದಿಯೆಲ್ಲ ಬಂದು ಸಿನಿಮಾ ನೋಡ್ತಾರೆ. ಹಾಗಾಗಿ ಕೇವಲ 150 ರೂಪಾಯಿಗೆ ಟಿಕೆಟ್ ದರ ನಿಗದಿ ಮಾಡಿದೆ ಎಂದು ಚಿತ್ರತಂಡ ತಿಳಿಸಿದೆ.
Updated on:Oct 03, 2022 | 3:11 PM

Rashmika Mandanna Amitabh Bachchan starrer Goodbye movie ticket price fixed to Rs 150 on opening day

Rashmika Mandanna Amitabh Bachchan starrer Goodbye movie ticket price fixed to Rs 150 on opening day

ಸಿನಿಮಾ ಟಿಕೆಟ್ ಬೆಲೆ ದುಬಾರಿ ಆಗಿದ್ದರೆ ಚಿತ್ರಮಂದಿರಕ್ಕೆ ಬರಲು ಅನೇಕರು ಹಿಂದೇಟು ಹಾಕುತ್ತಾರೆ. ಕಡಿಮೆ ಬೆಲೆ ಇದ್ದರೆ ಮನೆ ಮಂದಿಯೆಲ್ಲ ಬಂದು ಸಿನಿಮಾ ನೋಡ್ತಾರೆ. ಹಾಗಾಗಿ ಕೇವಲ 150 ರೂಪಾಯಿಗೆ ಟಿಕೆಟ್ ದರ ನಿಗದಿ ಮಾಡಿದೆ ಎಂದು ಚಿತ್ರತಂಡ ತಿಳಿಸಿದೆ.

ಇತ್ತೀಚೆಗೆ ‘ರಾಷ್ಟ್ರೀಯ ಸಿನಿಮಾ ದಿನ’ ಆಚರಿಸಲಾಗಿತ್ತು. ಆಗ ಎಲ್ಲ ಸಿನಿಮಾಗಳ ಟಿಕೆಟ್ ಬೆಲೆ ಕೇವಲ 75 ರೂಪಾಯಿ ಮಾಡಲಾಗಿತ್ತು. ಅಂದು ಜನರು ಮುಗಿಬಿದ್ದು ಸಿನಿಮಾ ನೋಡಿದ್ದರು. ಅದೇ ತಂತ್ರವನ್ನು ಈಗ ‘ಗುಡ್ಬೈ’ ಸಿನಿಮಾ ಬಳಸುತ್ತಿದೆ.

ಅಮಿತಾಭ್ ಬಚ್ಚನ್ ಜೊತೆ ನಟಿಸುವ ಅವಕಾಶ ಸಿಗುವುದು ಎಂದರೆ ಸಣ್ಣ ಮಾತಲ್ಲ. ಅಂಥ ಅವಕಾಶವನ್ನು ಪಡೆದುಕೊಂಡಿದ್ದು ರಶ್ಮಿಕಾ ಪಾಲಿನ ಹೆಮ್ಮೆಯ ಸಂಗತಿ. ಈ ಚಿತ್ರಕ್ಕೆ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.
Published On - 3:11 pm, Mon, 3 October 22




