ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟಿ20 ಪಂದ್ಯ ನಡೆಯಲಿದೆ. ಭಾರತ 2-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದ್ದು, ಮೂರನೇ ಟಿ20ಯಲ್ಲಿ ಕ್ಲೀನ್ ಸ್ವೀಪ್ ಮಾಡುವ ಗುರಿ ಹೊಂದಿದೆ. ಮೂರನೇ ಟಿ20ಯಲ್ಲಿ ಭಾರತ ತಂಡದ ಆಡುವ ಇಲೆವೆನ್‌ನಲ್ಲಿ ಪ್ರಮುಖ ಬದಲಾವಣೆಯಾಗಲಿದೆ ಎಂಬ ವರದಿಗಳಿವೆ. ವರದಿಗಳ ಪ್ರಕಾರ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಇಂದೋರ್ ಟಿ20ಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.
ವಿರಾಟ್ ಕೊಹ್ಲಿ ಗುವಾಹಟಿಯಿಂದ ಮುಂಬೈ ತಲುಪಿದ್ದಾರೆ ಎಂದು ವರದಿಯಾಗಿದೆ. ಎರಡನೇ ಟಿ20ಯಲ್ಲಿ ಔಟಾಗದೆ 49 ರನ್ ಗಳಿಸಿದ್ದ ಕೊಹ್ಲಿ, ತಂಡದ ಗೆಲುವಿನ ನಂತರ ಮುಂಬೈಗೆ ಹಾರಿದ್ದಾರೆ.
ಮೂರನೇ ಟಿ20ಯಲ್ಲಿ ಕೆಎಲ್ ರಾಹುಲ್‌ಗೂ ವಿಶ್ರಾಂತಿ ನೀಡಬಹುದು ಎಂದು ವರದಿಯಾಗಿದೆ. ಸರಣಿಯ ಎರಡೂ T20 ಪಂದ್ಯಗಳಲ್ಲಿ ರಾಹುಲ್ ಅದ್ಭುತ ಅರ್ಧಶತಕಗಳನ್ನು ಗಳಿಸಿದರು. ತಿರುವನಂತಪುರಂನ ಕಷ್ಟಕರವಾದ ಪಿಚ್‌ನಲ್ಲಿ ರಾಹುಲ್ ಅಜೇಯ ಅರ್ಧಶತಕ ಗಳಿಸಿದರೆ, ಗುವಾಹಟಿಯಲ್ಲಿ 28 ಎಸೆತಗಳಲ್ಲಿ 57 ರನ್‌ಗಳ ಇನ್ನಿಂಗ್ಸ್ ಆಡಿದರು.
ಈಗ ಪ್ರಶ್ನೆ ಏನೆಂದರೆ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಬದಲಿಗೆ ಯಾರು ಆಡುತ್ತಾರೆ? ಎಂಬುದಾಗಿದೆ. ಇಬ್ಬರೂ ಆಟಗಾರರು ವಿಶ್ರಾಂತಿ ಪಡೆದರೆ, ಶ್ರೇಯಸ್ ಅಯ್ಯರ್ಗೆ ತಂಡದಲ್ಲಿ ಸ್ಥಾನ ಖಚಿತವಾಗಲಿದೆ. ಇದೇ ವೇಳೆ ಚೊಚ್ಚಲ ಬಾರಿಗೆ ತಂಡ ಸೇರಿಕೊಂಡಿರುವ ಶಹಬಾಜ್ ಅಹ್ಮದ್ ಅವರಿಗೂ ಅವಕಾಶ ನೀಡುವ ಸಾಧ್ಯತೆಗಳಿವೆ.
Virat Kohli is just three sixes away from joining Rohit in the list of players with 100 T20I sixes
Published On - 7:58 pm, Mon, 3 October 22