Prabhas: ರಾಮಾಯಣ ಆಧಾರಿತ ‘ಆದಿಪುರುಷ್’ ಚಿತ್ರಕ್ಕೆ ಟ್ರೋಲ್ ಕಾಟ; ನೆಟ್ಟಿಗರ ಅಸಮಾಧಾನಕ್ಕೆ ಕಾರಣ ಏನು?
Adipurush Teaser Troll: ‘ಆದಿಪುರುಷ್ ಟೀಸರ್ನಲ್ಲಿ ರಾವಣನನ್ನು ನೋಡಿದರೆ ಅಲ್ಲಾವುದ್ದೀನ್ ಖಿಲ್ಜಿ ನೋಡಿದಂತೆ ಆಗುತ್ತಿದೆ. ಇದಕ್ಕಿಂತ ರಾಮಾಯಣ ಸೀರಿಯಲ್ ಎಷ್ಟೋ ಚೆನ್ನಾಗಿತ್ತು’ ಎಂದು ನೆಟ್ಟಿಗರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಭಾರಿ ನಿರೀಕ್ಷೆ ಮೂಡಿಸಿದ್ದ ‘ಆದಿಪುರುಷ್’ ಚಿತ್ರದ ಟೀಸರ್ (Adipurush Teaser) ಬಿಡುಗಡೆ ಆಗಿದೆ. ಆಯೋಧ್ಯೆಯಲ್ಲಿ ಅದ್ದೂರಿ ಕಾರ್ಯಕ್ರಮದ ಮೂಲಕ ಭಾನುವಾರ (ಅ.2) ಟೀಸರ್ ರಿಲೀಸ್ ಮಾಡಲಾಯಿತು. ಪ್ರಭಾಸ್ (Prabhas) ಅಭಿಮಾನಿಗಳು ಈ ಟೀಸರ್ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ಒಂದು ವರ್ಗದ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ (Troll) ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಕಳಪೆ ಗ್ರಾಫಿಕ್ಸ್! ಈ ಚಿತ್ರಕ್ಕೆ ಓಂ ರಾವತ್ ನಿರ್ದೇಶನ ಮಾಡುತ್ತಿದ್ದು, ಬಿಗ್ ಬಜೆಟ್ನಲ್ಲಿ ನಿರ್ಮಾಣ ಆಗುತ್ತಿದೆ. ಬಹುಕೋಟಿ ರೂಪಾಯಿ ಖರ್ಚು ಮಾಡಿದ್ದರೂ ಕೂಡ ಗ್ರಾಫಿಕ್ಸ್ ಯಾಕೆ ಇಷ್ಟು ಕಳಪೆ ಆಗಿದೆ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಖತ್ ಚರ್ಚೆ ನಡೆಯುತ್ತಿದೆ.
ರಾಮಾಯಣದ ಕಥೆಯನ್ನು ಇಟ್ಟುಕೊಂಡು ‘ಆದಿಪುರುಷ್’ ಚಿತ್ರ ಮಾಡಲಾಗುತ್ತಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಅವರಿಗೆ ರಾಮನ ಪಾತ್ರವಿದೆ. ಸೀತೆಯಾಗಿ ಕೃತಿ ಸನೋನ್ ಅಭಿನಯಿಸುತ್ತಿದ್ದಾರೆ. ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಅಬ್ಬರಿಸಲಿದ್ದಾರೆ. ಪೌರಾಣಿಕ ಸಿನಿಮಾಗಳನ್ನು ಕಟ್ಟಿಕೊಡಲು ಅತ್ಯಾಧುನಿಕ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಬೇಕಾಗುತ್ತದೆ. ಈ ವಿಚಾರದಲ್ಲಿ ‘ಆದಿಪುರುಷ್’ ತಂಡ ಎಡವಿದೆ ಎಂಬುದು ನೆಟ್ಟಿಗರ ಅಭಿಪ್ರಾಯ.
ರಾಮನ ಪರಾಕ್ರಮ, ರಾವಣನ ಹತ್ತು ತಲೆ, ವಾನರ ಸೇನೆಯ ದಾಳಿ, ರಾಮಸೇತು ನಿರ್ಮಾಣ ಸೇರಿದಂತೆ ಅನೇಕ ದೃಶ್ಯಗಳ ಝಲಕ್ ಈ ಟೀಸರ್ನಲ್ಲಿ ಕಾಣಿಸಿದೆ. ಅವುಗಳನ್ನು ತೋರಿಸಿರುವ ರೀತಿ ಕಂಡು ಜನರು ನೆಗೆಟಿವ್ ಕಮೆಂಟ್ ಮಾಡುತ್ತಿದ್ದಾರೆ. ಇದರಲ್ಲಿನ ಗ್ರಾಫಿಕ್ಸ್ ನೋಡಿದರೆ ಕಾರ್ಟೂನ್ ನೆಟ್ವರ್ಕ್ ನೆನಪಾಗುತ್ತದೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.
‘ರಾವಣನನ್ನು ನೋಡಿದರೆ ಅಲ್ಲಾವುದ್ದೀನ್ ಖಿಲ್ಜಿ ನೋಡಿದಂತೆ ಆಗುತ್ತಿದೆ. ಮಂಗಗಳ ಬದಲಿಗೆ ಬೇರೆ ಯಾವುದೇ ಪ್ರಾಣಿಗಳು ಕಾಣಿಸುತ್ತಿವೆ. ಈ ಚಿತ್ರಕ್ಕಿಂತ ದೂರದರ್ಶನದಲ್ಲಿ ಪ್ರಸಾರವಾದ ರಾಮಾಯಣ ಸೀರಿಯಲ್ ಎಷ್ಟೋ ಚೆನ್ನಾಗಿತ್ತು. ಸಿನಿಮಾ ಮಾಡುವುದಕ್ಕಿಂತ ಮುನ್ನ ಒಂದಷ್ಟು ಅಧ್ಯಯನ ಮಾಡಿಕೊಳ್ಳಬೇಕು’ ಎಂದು ನೆಟ್ಟಿಗರು ಖಾರವಾಗಿ ಕಮೆಂಟ್ ಮಾಡುತ್ತಿದ್ದಾರೆ.
#AdipurushTeaser is just a cheap copy of Game of Thrones. #Prabhas pic.twitter.com/73C0Q4Cjzc
— JON ¥ $NOW (@RebelKingSnow) October 2, 2022
#Adipurush Ravana was a pure Brahmin ,but Rama was a kshatriya warrior but how come rama is wearing janivara and why not Ravana who was a Brahmin? That’s north Indians for you .??? pic.twitter.com/oqupsW7yiM
— Likhith kannadiga (@likithgowda_) October 2, 2022
Am I the only one who thinks Saif looks more like an IsIamic invαժer than Ravan in #Adipurush? pic.twitter.com/KdBHfy0Njt
— BHK?? (@BeingBHK) October 2, 2022
ಟೀಕೆಗಳು ಏನೇ ಇರಲಿ, ಯೂಟ್ಯೂಬ್ನಲ್ಲಿ ಜನರು ಮುಗಿಬಿದ್ದು ‘ಆದಿಪುರುಷ್’ ಟೀಸರ್ ನೋಡುತ್ತಿದ್ದಾರೆ. ಕನ್ನಡ, ಹಿಂದಿ, ತೆಲುಗು, ಮಲಯಾಳಂ ಹಾಗೂ ತಮಿಳು ವರ್ಷನ್ ಸೇರಿ ಕೇವಲ 16 ಗಂಟೆಗಳಲ್ಲಿ 75 ಮಿಲಿಯನ್ಗಿಂತಲೂ (7.5 ಕೋಟಿ) ಹೆಚ್ಚು ಬಾರಿ ವೀಕ್ಷಣೆ ಕಂಡಿದೆ. ಸದ್ಯ ಜನರಿಂದ ವ್ಯಕ್ತವಾಗಿರುವ ನೆಗೆಟಿವ್ ಪ್ರತಿಕ್ರಿಯೆಗಳಿಗೆ ಚಿತ್ರತಂಡ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ಕಾದು ನೋಡಬೇಕು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.