Kareena Kapoor Khan: ಎಲ್ಲರ ಎದುರು ಕರೀನಾ ಮೈ ಮೇಲೆ ಕೈ ಹಾಕಲು ಬಂದ ಅಭಿಮಾನಿ; ಶಾಕ್​ ಆದ ನಟಿಯ ವಿಡಿಯೋ ವೈರಲ್​

ಅಭಿಮಾನಿಯ ವರ್ತನೆಯಿಂದ ಕರೀನಾ ಕಪೂರ್​ ಖಾನ್​ಗೆ ನಿಜಕ್ಕೂ ಶಾಕ್​ ಆಯಿತು. ಅವರ ಬಾಡಿಗಾರ್ಡ್ಸ್​ ಕೂಡಲೇ ಅಲರ್ಟ್​ ಆದರು.

Kareena Kapoor Khan: ಎಲ್ಲರ ಎದುರು ಕರೀನಾ ಮೈ ಮೇಲೆ ಕೈ ಹಾಕಲು ಬಂದ ಅಭಿಮಾನಿ; ಶಾಕ್​ ಆದ ನಟಿಯ ವಿಡಿಯೋ ವೈರಲ್​
ಕರೀನಾ ಕಪೂರ್ ಖಾನ್
Follow us
| Updated By: ಮದನ್​ ಕುಮಾರ್​

Updated on: Oct 03, 2022 | 2:21 PM

ನಟಿ ಕರೀನಾ ಕಪೂರ್ ಖಾನ್​ (Kareena Kapoor Khan) ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಅವರ ಜೊತೆ ಒಂದೇ ಒಂದು ಫೋಟೋ ಕ್ಲಿಕ್ಕಿಸಿಕೊಳ್ಳಬೇಕು ಎಂದು ಕೋಟ್ಯಂತರ ಮಂದಿ ಹಂಬಲಿಸುತ್ತಾರೆ. ಕರೀನಾ ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೆಲ್ಲ ಫೋಟೋ ಸಲುವಾಗಿ ಫ್ಯಾನ್ಸ್​ ಮುಗಿಬೀಳುತ್ತಾರೆ. ಸೆಲೆಬ್ರಿಟಿಗಳು ಎಂದಮೇಲೆ ಇದೆಲ್ಲ ಸಹಜ. ಆದರೆ ಕೆಲವೊಮ್ಮೆ ಅಭಿಮಾನಿಗಳ ವರ್ತನೆ ಮಿತಿ ಮೀರುತ್ತದೆ. ಇತ್ತೀಚೆಗೆ ಕರೀನಾ ಕಪೂರ್​ ಖಾನ್​ ಅವರಿಗೆ ಇದೇ ರೀತಿ ಆಗಿದೆ. ಅಭಿಮಾನಿಯೊಬ್ಬ ಎಲ್ಲರ ಎದುರು ಕರೀನಾ ಮೈ ಮೇಲೆ ಕೈ ಹಾಕಲು ಮುಂದಾಗಿದ್ದಾನೆ. ಆ ಕ್ಷಣ ಕರೀನಾ ಬೆಚ್ಚಿ ಬಿದ್ದಿದ್ದಾರೆ. ಈ ವಿಡಿಯೋ (Kareena Kapoor Khan Viral Video) ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಬಾಲಿವುಡ್​ನಲ್ಲಿ ಕರೀನಾ ಕಪೂರ್​ ಖಾನ್​ ಅವರಿಗೆ ಸಖತ್​ ಡಿಮ್ಯಾಂಡ್​ ಇದೆ. ಮದುವೆ-ಮಕ್ಕಳು ಆದ ಬಳಿಕವೂ ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಹೊಸ ಚಿತ್ರದ ಶೂಟಿಂಗ್​ ಸಲುವಾಗಿ ಅವರು ಇತ್ತೀಚೆಗೆ ವಿದೇಶಕ್ಕೆ ತೆರಳಿದರು. ಅದಕ್ಕೂ ಮುನ್ನ ಮುಂಬೈನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಾಗ ಈ ಘಟನೆ ನಡೆದಿದೆ.

ಇದನ್ನೂ ಓದಿ
Image
‘ಮಗನಿಗೆ ಒಳ್ಳೇ ಬುದ್ಧಿ ಕಲಿಸಿ’ ಎಂದು ಕರೀನಾ ಕಪೂರ್​ ಖಾನ್​ಗೆ ತಿವಿದ ನೆಟ್ಟಿಗರು: ತೈಮೂರ್​ ಮಾಡಿದ ತಪ್ಪೇನು?
Image
ಜಾಹೀರಾತಿನಲ್ಲಿ ಬಿಂದಿ ಇಡದೆ ಕಾಣಿಸಿಕೊಂಡ ಕರೀನಾ; ಮಲಬಾರ್ ಗೋಲ್ಡ್​ ಬಹಿಷ್ಕರಿಸಿ ಎಂದ ನೆಟ್ಟಿಗರು
Image
ಬಗೆಬಗೆಯ ಕಾಸ್ಟ್ಯೂಮ್​ನಲ್ಲಿ ಮಿಂಚಿದ ಕರೀನಾ ಕಪೂರ್​; ಇಲ್ಲಿವೆ ಕಲರ್​ಫುಲ್​ ಫೋಟೋಗಳು
Image
‘ತೈಮೂರ್​ ಜತೆಗೂ ಅಕ್ಷಯ್​ ಸಿನಿಮಾ ಮಾಡ್ತಾರೆ’; ಕರೀನಾ​ ಹೇಳಿದ ಈ ಮಾತು ನಿಜವೋ? ತಮಾಷೆಯೋ?

ಒಂದೂವರೆ ವರ್ಷದ ಮಗ ಜಹಾಂಗೀರ್​ ಅಲಿ ಖಾನ್​ ಜೊತೆ ಕರೀನಾ ಕಪೂರ್​ ಅವರು ವಿಮಾನ ನಿಲ್ದಾಣಕ್ಕೆ ಬಂದರು. ಆಗ ಒಂದಷ್ಟು ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಆ ಗಡಿಬಿಡಿಯ ನಡುವೆಯೂ ಸಾಧ್ಯವಾದಷ್ಟು ಸಮಾಧಾನದಿಂದ ಕರೀನಾ ಅವರು ಸೆಲ್ಫಿಗೆ ಪೋಸ್​ ನೀಡುತ್ತಿದ್ದರು. ಆಗ ಒಬ್ಬ ಅಭಿಮಾನಿ ಮಾತ್ರ ಕರೀನಾ ಹೆಗಲ ಮೇಲೆ ಕೈ ಹಾಕಿ ಸೆಲ್ಫಿ ತೆಗೆದುಕೊಳ್ಳಲು ಬಂದ. ಆತನ ವರ್ತನೆಯಿಂದ ಕರೀನಾಗೆ ನಿಜಕ್ಕೂ ಶಾಕ್​ ಆಯಿತು. ಅವರ ಬಾಡಿಗಾರ್ಡ್ಸ್​ ಕೂಡಲೇ ಅಲರ್ಟ್​ ಆದರು. ನಟಿಯ ಮೈ ಮೇಲೆ ಕೈ ಹಾಕಲು ಬಂದ ವ್ಯಕ್ತಿಯನ್ನು ಕೂಡಲೇ ಪಕ್ಕಕ್ಕೆ ಸರಿಸಿದರು.

ಈ ರೀತಿಯ ಘಟನೆಗಳು ನಡೆದಾಗ ಸೆಲೆಬ್ರಿಟಿಗಳು ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುತ್ತಾರೆ. ಅತಿಯಾಗಿ ವರ್ತಿಸಲು ಬಂದ ಅಭಿಮಾನಿಯ ವಿರುದ್ಧ ಕೂಗಾಡಿದ ಉದಾಹರಣೆಗಳು ಕೂಡ ಇದೆ. ಆದರೆ ಕರೀನಾ ಕಪೂರ್​ ಅವರು ಆ ರೀತಿ ಮಾಡಿಲ್ಲ. ಅಭಿಮಾನಿಯ ವರ್ತನೆಯಿಂದ ಅವರಿಗೆ ಕಿರಿಕಿರಿ ಆಗಿದ್ದು ನಿಜ. ಅದು ಅವರ ಹಾವಭಾವದಲ್ಲೇ ಗೊತ್ತಾಗುತ್ತದೆ. ಹಾಗಿದ್ದರೂ ಕೂಡ ಅವರು ರೇಗಾಡದೇ ಸುಮ್ಮನೇ ಮುಂದೆ ಸಾಗಿದ್ದಾರೆ.

ಕರೀನಾ ಕಪೂರ್​ ಅವರ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಮಿತಿ ಮೀರಿ ವರ್ತಿಸಿದ ಅಭಿಮಾನಿಗೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ. ‘ಸೆಲೆಬ್ರಿಟಿಗಳ ಖಾಸಗಿತನಕ್ಕೆ ಗೌರವ ಕೊಡಿ’ ಎಂದು ಅನೇಕರು ಕಮೆಂಟ್​ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ