Vikram Vedha: 3 ದಿನಕ್ಕೆ ‘ವಿಕ್ರಮ್​ ವೇದ’ ಸಿನಿಮಾದ ಕಲೆಕ್ಷನ್​ ಎಷ್ಟು? ಹೃತಿಕ್​-ಸೈಫ್​ ಚಿತ್ರಕ್ಕೆ ಸಖತ್​ ಕಮಾಯಿ

Vikram Vedha Box Office Collection: ‘ವಿಕ್ರಮ್​ ವೇದ’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ. ಹೃತಿಕ್​ ರೋಷನ್​ ಮತ್ತು ಸೈಫ್​ ಅಲಿ ಖಾನ್ ನಡುವಿನ ಮುಖಾಮುಖಿ ದೃಶ್ಯಗಳನ್ನು ನೋಡಿ ಅಭಿಮಾನಿಗಳು ಎಂಜಾಯ್​ ಮಾಡುತ್ತಿದ್ದಾರೆ.

Vikram Vedha: 3 ದಿನಕ್ಕೆ ‘ವಿಕ್ರಮ್​ ವೇದ’ ಸಿನಿಮಾದ ಕಲೆಕ್ಷನ್​ ಎಷ್ಟು? ಹೃತಿಕ್​-ಸೈಫ್​ ಚಿತ್ರಕ್ಕೆ ಸಖತ್​ ಕಮಾಯಿ
ಸೈಫ್ ಅಲಿ ಖಾನ್, ಹೃತಿಕ್ ರೋಷನ್
Follow us
TV9 Web
| Updated By: ಮದನ್​ ಕುಮಾರ್​

Updated on:Oct 03, 2022 | 11:02 AM

ಬಾಲಿವುಡ್​ ಮಂದಿಗೆ ಸದ್ಯಕ್ಕಂತೂ ಅಗ್ನಿಪರೀಕ್ಷೆಯ ಕಾಲ. ಸ್ಟಾರ್​ ನಟರ ಸಿನಿಮಾಗಳೆಲ್ಲ ಗಲ್ಲಾಪೆಟ್ಟಿಗೆಯಲ್ಲಿ ಸೋತ ಉದಾಹರಣೆ ಇದೆ. ಈ ಸಂದರ್ಭದಲ್ಲಿ ಕೆಲವೇ ಕೆಲವು ಸಿನಿಮಾಗಳು ಭರವಸೆಯ ಬೆಳಕಾಗಿ ಬಂದಿವೆ. ಆ ಸಾಲಿಗೆ ‘ವಿಕ್ರಮ್​ ವೇದ’  (Vikram Vedha) ಕೂಡ ಸೇರ್ಪಡೆ ಆಗಿದೆ. ಮೊದಲ ದಿನವೇ ಈ ಚಿತ್ರಕ್ಕೆ ಭರ್ಜರಿ ಕಲೆಕ್ಷನ್​ ಆಗಿದೆ. ಅಂದಹಾಗೆ, ಇದು ತಮಿಳಿನ ‘ವಿಕ್ರಮ್​ ವೇದ’ ಚಿತ್ರದ ಹಿಂದಿ ರಿಮೇಕ್​. ಮೂಲ ಸಿನಿಮಾದಲ್ಲಿ ಆರ್​. ಮಾಧವನ್​ ಮತ್ತು ವಿಜಯ್​ ಸೇತುಪತಿ ನಟಿಸಿದ್ದ ಪಾತ್ರವನ್ನು ಹಿಂದಿಯಲ್ಲಿ ಸೈಫ್​ ಅಲಿ ಖಾನ್ (Saif Ali Khan)​ ಮತ್ತು ಹೃತಿಕ್​ ರೋಷನ್​ (Hrithik Roshan) ಮಾಡಿದ್ದಾರೆ. ಇಬ್ಬರೂ ಸ್ಟಾರ್​ ನಟರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಚಿತ್ರವನ್ನು ನೋಡುತ್ತಿದ್ದು, ಮೂರು ದಿನಕ್ಕೆ 38 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ.

ತಮಿಳಿನಲ್ಲಿ ‘ವಿಕ್ರಮ್​ ವೇದ’ ಸಿನಿಮಾ 2017ರಲ್ಲಿ ತೆರೆಕಂಡಿತ್ತು. ಆ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಪುಷ್ಕರ್​ ಗಾಯತ್ರಿ ಅವರೇ ಈಗ ಹಿಂದಿ ರಿಮೇಕ್​ಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಸೆಪ್ಟೆಂಬರ್​ 30ರಂದು ಈ ಚಿತ್ರ ರಿಲೀಸ್​ ಆಯ್ತು. ಮೊದಲ ದಿನ ಬರೋಬ್ಬರಿ 10.58 ಕೋಟಿ ರೂಪಾಯಿ ಗಳಿಕೆ ಆಯಿತು. ಎರಡನೇ ದಿನ 12.51 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತು. ಆ ಮೂಲಕ ಬಾಕ್ಸ್​ ಆಫೀಸ್​ ಗಳಿಕೆಯಲ್ಲಿ ಏರಿಕೆ ಕಾಣಿಸಿದೆ. ಮೂರನೇ ದಿನವಾದ ಭಾನುವಾರ (ಅ.2) ಕೂಡ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್​ ಸಿಕ್ಕಿದ್ದು, ಅಂದಾಜು 15 ಕೋಟಿ ರೂಪಾಯಿ ಆದಾಯ ಬಂದಿರುವ ನಿರೀಕ್ಷೆ ಇದೆ. ಮೂರೂ ದಿನದ ಗಳಿಕೆ ಸೇರಿಸಿದರೆ ಒಟ್ಟು 38 ಕೋಟಿ ರೂಪಾಯಿ ಆಗಲಿದೆ.

ಆದಷ್ಟು ಬೇಗ ‘ವಿಕ್ರಮ್​ ವೇದ’ ಚಿತ್ರ 100 ಕೋಟಿ ರೂಪಾಯಿ ಕ್ಲಬ್​ ಸೇರಲಿ ಎಂದು ಫ್ಯಾನ್ಸ್​ ಆಶಿಸುತ್ತಿದ್ದಾರೆ. ಯಾವುದೇ ಸಿನಿಮಾಗೆ ಸೋಮವಾರದ ಕಲೆಕ್ಷನ್​ ಹೆಚ್ಚು ಮುಖ್ಯವಾಗಲಿದೆ. ಹಾಗಾಗಿ, ಇಂದು (ಅ.3) ‘ವಿಕ್ರಮ್​ ವೇದ’ ಎಷ್ಟು ಕಲೆಕ್ಷನ್​ ಮಾಡಲಿದೆ ಎಂಬುದರ ಆಧಾರದ ಮೇಲೆ ಭವಿಷ್ಯ ನಿರ್ಧಾರ ಆಗಲಿದೆ. ಈ ಚಿತ್ರ ಸೋಮವಾರದ ಪರೀಕ್ಷೆಯನ್ನೂ ಪಾಸ್​ ಆಗಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ
Image
ಬಾಕ್ಸ್ ಆಫೀಸ್ ಕಲೆಕ್ಷನ್​ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್​’ ಹಿಂದಿಕ್ಕಲಿದೆ ‘ಬ್ರಹ್ಮಾಸ್ತ್ರ’ ಸಿನಿಮಾ; ಸೈಲೆಂಟ್ ಆಯ್ತು ಬಾಯ್ಕಾಟ್ ಟ್ರೆಂಡ್
Image
ಬಾಯ್ಕಾಟ್ ಟ್ರೆಂಡ್​ ಬ್ರೇಕ್ ಮಾಡಿದ ‘ಬ್ರಹ್ಮಾಸ್ತ್ರ’; ಮೂರು ದಿನಕ್ಕೆ 225 ಕೋಟಿ ರೂಪಾಯಿ ಕಲೆಕ್ಷನ್​
Image
Liger Collection: ಅಷ್ಟೆಲ್ಲ ಅಬ್ಬರಿಸಿದ ‘ಲೈಗರ್​’ ಸಿನಿಮಾ ಮೊದಲ ದಿನ ಮಾಡಿದ ಕಲೆಕ್ಷನ್​ ಎಷ್ಟು?
Image
Box Office Collections: ಈ ವರ್ಷ ಅತ್ಯಂತ ಹೆಚ್ಚು ಕಲೆಕ್ಷನ್​ ಮಾಡಿದ ಹಾಲಿವುಡ್ ಚಿತ್ರ ಯಾವುದು ಗೊತ್ತಾ?

ವಿಕ್ರಮ ಬೇತಾಳದ ಕಥೆಯ ರೀತಿಯಲ್ಲಿ ‘ವಿಕ್ರಮ್​ ವೇದ’ ಸಿನಿಮಾ ಮೂಡಿಬಂದಿದೆ. ಹಲವು ಟ್ವಿಸ್ಟ್​ಗಳು ಈ ಸಿನಿಮಾದಲ್ಲಿ ಇವೆ. ಸೈಫ್​ ಅಲಿ ಖಾನ್​ ಪೊಲೀಸ್​ ಆಗಿ ಕಾಣಿಸಿಕೊಂಡಿದ್ದಾರೆ. ಹೃತಿಕ್​ ರೋಷನ್​ ಅವರು ಗ್ಯಾಂಗ್​ಸ್ಟರ್​ ಪಾತ್ರ ಮಾಡಿದ್ದಾರೆ. ಇಬ್ಬರ ಮುಖಾಮುಖಿ ದೃಶ್ಯಗಳನ್ನು ನೋಡಿ ಅಭಿಮಾನಿಗಳು ಎಂಜಾಯ್​ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:24 am, Mon, 3 October 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ