AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Liger Collection: ಅಷ್ಟೆಲ್ಲ ಅಬ್ಬರಿಸಿದ ‘ಲೈಗರ್​’ ಸಿನಿಮಾ ಮೊದಲ ದಿನ ಮಾಡಿದ ಕಲೆಕ್ಷನ್​ ಎಷ್ಟು?

Liger First Day Box Office Collection: ಪ್ಯಾನ್​ ಇಂಡಿಯಾ ಮಟ್ಟದಲ್ಲಿ ‘ಲೈಗರ್​’ ಸಿನಿಮಾ ರಿಲೀಸ್​ ಆಗಿದೆ. ವಿಜಯ್​ ದೇವರಕೊಂಡ ಅವರಿಗೆ ಜೋಡಿಯಾಗಿ ಬಾಲಿವುಡ್​ ಬೆಡಗಿ ಅನನ್ಯಾ ಪಾಂಡೆ ನಟಿಸಿದ್ದಾರೆ.

Liger Collection: ಅಷ್ಟೆಲ್ಲ ಅಬ್ಬರಿಸಿದ ‘ಲೈಗರ್​’ ಸಿನಿಮಾ ಮೊದಲ ದಿನ ಮಾಡಿದ ಕಲೆಕ್ಷನ್​ ಎಷ್ಟು?
ವಿಜಯ್ ದೇವರಕೊಂಡ
TV9 Web
| Edited By: |

Updated on: Aug 26, 2022 | 12:08 PM

Share

ನಟ ವಿಜಯ್​ ದೇವರಕೊಂಡ (Vijay Deverakonda) ಅಭಿಮಾನಿಗಳು ಕಾತರದಿಂದ ಕಾದಿದ್ದ ‘ಲೈಗರ್​’ ಸಿನಿಮಾ ಗುರುವಾರ (ಆಗಸ್ಟ್​ 25) ತೆರೆಕಂಡಿತು. ದೇಶಾದ್ಯಂತ ರಿಲೀಸ್​ ಆದ ಈ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಮೊದಲ ದಿನ ಈ ಚಿತ್ರ ಮಾಡಬಹುದಾದ ಬಾಕ್ಸ್​ ಆಫೀಸ್​ ಕಲೆಕ್ಷನ್ (Liger Box Office Collection)​ ಎಷ್ಟು ಎಂಬ ಬಗ್ಗೆಯೂ ಸಿನಿಪ್ರಿಯರು ಅಂದಾಜಿಸಿದ್ದರು. ಹಾಗಾದರೆ ‘ಲೈಗರ್​’ ಸಿನಿಮಾ (Liger Movie) ಯಶಸ್ವಿ ಆಗಿದೆಯಾ? ವಿಜಯ್​ ದೇವರಕೊಂಡ ಅವರಿಗೆ ಈ ಚಿತ್ರದಿಂದ ದೊಡ್ಡ ಗೆಲುವು ಸಿಗಲಿದೆಯಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ನಿರೀಕ್ಷಿತ ಮಟ್ಟದಲ್ಲಿ ಈ ಸಿನಿಮಾ ಕಲೆಕ್ಷನ್​ ಮಾಡದೇ ಇರಬಹುದು. ಆದರೆ ಬಹುಕೋಟಿ ರೂಪಾಯಿ ಸಂಪಾದನೆ ಮಾಡುವಲ್ಲಿ ಯಶಸ್ವಿ ಆಗಿದೆ. ಮೂಲಗಳ ಪ್ರಕಾರ ವಿಶ್ವಾದ್ಯಂತ ತೆಲುಗು ಮತ್ತು ತಮಿಳು ವರ್ಷನ್​ನಿಂದ ಮೊದಲ ದಿನವೇ 22ರಿಂದ 25 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ.

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ‘ಲೈಗರ್​’ ಸಿನಿಮಾ ರಿಲೀಸ್​ ಆಗಿದೆ. ವಿಜಯ್​ ದೇವರಕೊಂಡ ಅವರಿಗೆ ಜೋಡಿಯಾಗಿ ಬಾಲಿವುಡ್​ ಬೆಡಗಿ ಅನನ್ಯಾ ಪಾಂಡೆ ನಟಿಸಿದ್ದಾರೆ. ಆದ್ದರಿಂದ ದೇಶಾದ್ಯಂತ ಈ ಸಿನಿಮಾ ಮೇಲೆ ಹೈಪ್​ ಕ್ರಿಯೇಟ್​ ಆಗಿತ್ತು. ದೇಶದ ಹಲವು ನಗರಗಳಿಗೆ ತೆರಳಿ ಪ್ರಚಾರ ಮಾಡಲಾಗಿತ್ತು. ಅದರ ಪರಿಣಾಮವಾಗಿ ಈ ಚಿತ್ರಕ್ಕೆ ಗುರುವಾರ ಬೆಳಗ್ಗೆ ಉತ್ತಮ ಓಪನಿಂಗ್​ ಸಿಕ್ಕಿತು.

ಮೊದಲ ದಿನ ಬೆಳಗ್ಗೆಯೇ ಹಿಂದಿ ಪ್ರೇಕ್ಷಕರಿಗೆ ಈ ಸಿನಿಮಾ ನೋಡುವ ಅವಕಾಶ ಸಿಕ್ಕಿಲ್ಲ. ಗುರುವಾರ ರಾತ್ರಿಯಿಂದ ಮಾತ್ರ ಹಿಂದಿ ವರ್ಷನ್​ ಶೋಗಳು ಆರಂಭ ಆದವು. ಹಾಗಾಗಿ ಹಿಂದಿ ಅವತರಣಿಕೆಯಿಂದ ಈ ಸಿನಿಮಾ ಎಷ್ಟು ಕಲೆಕ್ಷನ್​ ಮಾಡಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಜಯ್​ ದೇವರಕೊಂಡ ಅಭಿಮಾನಿಗಳು ‘ಲೈಗರ್​’ ಚಿತ್ರವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಆದರೆ ಇನ್ನೊಂದು ವರ್ಗದ ಪ್ರೇಕ್ಷಕರಿಂದ ಕೊಂಚ ನೆಗೆಟಿವ್​ ಪ್ರತಿಕ್ರಿಯೆ ಬಂದಿದೆ. ಅದು ಕಲೆಕ್ಷನ್​ ಮೇಲೆ ಪೆಟ್ಟು ಕೊಡುವ ಸಾಧ್ಯತೆ ಇದೆ.

ಇದನ್ನೂ ಓದಿ
Image
‘ಲೈಗರ್’ ಸಿನಿಮಾದ ಖಳನಟ ವಿಶ್​ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಇಂಟರೆಸ್ಟಿಂಗ್​ ಮಾಹಿತಿ
Image
Liger Movie: ಪುನೀತ್​ ಸಮಾಧಿಗೆ ವಿಜಯ್​ ದೇವರಕೊಂಡ ಭೇಟಿ; ‘ಲೈಗರ್​’ ಪ್ರಚಾರಕ್ಕೆ ಬೆಂಗಳೂರಿಗೆ ಬಂದ ನಟ
Image
Liger: ‘ಲೈಗರ್ ಸಿನಿಮಾ ಬ್ಲಾಕ್​ ಬಸ್ಟರ್​’: ರಿಲೀಸ್​ಗೂ ಮುನ್ನ ಘೋಷಿಸಿದ ವಿಜಯ್​ ದೇವರಕೊಂಡ
Image
Vijay Devarakonda: ಒಂದೇ ದಿನದಲ್ಲಿ 5 ಕೋಟಿ​ಗಿಂತ ಹೆಚ್ಚು ಬಾರಿ ವೀಕ್ಷಣೆ ಕಂಡ ‘ಲೈಗರ್​’ ಟ್ರೇಲರ್​

‘ಲೈಗರ್​’ ಚಿತ್ರಕ್ಕೆ ಪುರಿ ಜಗನ್ನಾಥ್​ ನಿರ್ದೇಶನ ಮಾಡಿದ್ದಾರೆ. ಅವರ ಜೊತೆ ಸೇರಿ ಕರಣ್​ ಜೋಹರ್​, ಚಾರ್ಮಿ ಕೌರ್​ ಬಂಡವಾಳ ಹೂಡಿದ್ದಾರೆ. ವಿಶ್ವ ವಿಖ್ಯಾತ ಬಾಕ್ಸರ್​ ಮೈಕ್​ ಟೈಸನ್​ ಅವರು ಇದರಲ್ಲಿ ನಟಿಸಿರುವುದು ವಿಶೇಷ. ಹಾಡುಗಳು ಸಿಕ್ಕಾಪಟ್ಟೆ ವೈರಲ್​ ಆಗಿವೆ. ಅದ್ದೂರಿ ಬಜೆಟ್​ನಲ್ಲಿ ಈ ಸಿನಿಮಾ ಮೂಡಿಬಂದಿದೆ. ಶುಕ್ರವಾರ ಮತ್ತು ವೀಕೆಂಡ್​ನಲ್ಲಿ ‘ಲೈಗರ್​’ ಎಷ್ಟು ಗಳಿಕೆ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Web contact
Web contact

TV9 Kannada

Read More
ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ
ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್