‘ಮಗನಿಗೆ ಒಳ್ಳೇ ಬುದ್ಧಿ ಕಲಿಸಿ’ ಎಂದು ಕರೀನಾ ಕಪೂರ್​ ಖಾನ್​ಗೆ ತಿವಿದ ನೆಟ್ಟಿಗರು: ತೈಮೂರ್​ ಮಾಡಿದ ತಪ್ಪೇನು?

‘ಮಗನಿಗೆ ಒಳ್ಳೇ ಬುದ್ಧಿ ಕಲಿಸಿ’ ಎಂದು ಕರೀನಾ ಕಪೂರ್​ ಖಾನ್​ಗೆ ತಿವಿದ ನೆಟ್ಟಿಗರು: ತೈಮೂರ್​ ಮಾಡಿದ ತಪ್ಪೇನು?
ಕರೀನಾ ಕಪೂರ್​ ಖಾನ್​, ತೈಮೂರ್​ ಅಲಿ ಖಾನ್

Kareena Kapoor Khan Troll: ಕರೀನಾ ಕಪೂರ್​ ಖಾನ್​ ಅವರು ಆಗಾಗ ಟ್ರೋಲ್​ ಆಗುತ್ತಿರುತ್ತಾರೆ. ಈ ಬಾರಿ ತೈಮೂರ್​ ಅಲಿ ಖಾನ್​ ವಿಚಾರಕ್ಕೆ ಅವರನ್ನು ನೆಟ್ಟಿಗರು ಟಾರ್ಗೆಟ್​ ಮಾಡಿದ್ದಾರೆ.

TV9kannada Web Team

| Edited By: Madan Kumar

Apr 25, 2022 | 9:27 AM

ಕೆಲವು ಸೆಲೆಬ್ರಿಟಿಗಳು ತಮ್ಮ ಮಕ್ಕಳನ್ನು ಕ್ಯಾಮೆರಾ ಮುಂದೆ ಬರಲು ಬಿಡುವುದಿಲ್ಲ. ತಮ್ಮ ಮಗಳ ಫೋಟೋ ತೆಗೆಯಬಾರದು ಎಂದು ಈಗಾಗಲೇ ಅನುಷ್ಕಾ ಶರ್ಮಾ ಮತ್ತು ವಿರಾಟ್​ ಕೊಹ್ಲಿ ದಂಪತಿ ಎಲ್ಲರಿಗೂ ಮನವಿ ಮಾಡಿರುವುದು ಗೊತ್ತಿದೆ. ಆದರೆ ಕರೀನಾ ಕಪೂರ್​ ಖಾನ್​ (Kareena Kapoor Khan) ಮತ್ತು ಸೈಫ್​ ಅಲಿ ಖಾನ್​ ದಂಪತಿ ಆ ರೀತಿ ಅಲ್ಲ. ಅವರ ಮಗ ತೈಮೂರ್​ ಅಲಿ ಖಾನ್​ (Taimur Ali Khan) ಹೋದಲ್ಲಿ ಬಂದಲ್ಲಿ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಕರೀನಾ ಅಥವಾ ಸೈಫ್​ ಇದಕ್ಕೆ ಅಡ್ಡಿ ಪಡಿಸುವುದಿಲ್ಲ. ಸೋಶಿಯಲ್​ ಮೀಡಿಯಾದಲ್ಲಿ ತೈಮೂರ್​ ಅಲಿ ಖಾನ್​ನ ಅನೇಕ ವಿಡಿಯೋ ಮತ್ತು ಫೋಟೋಗಳು (Taimur Ali Khan Photo) ಆಗಾಗ ವೈರಲ್​ ಆಗುತ್ತದೆ. ಆದರೆ ಇತ್ತೀಚೆಗೆ ವೈರಲ್​ ಆಗಿರುವ ಒಂದು ವಿಡಿಯೋ ಕಂಡು ಕೆಲವು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನಿಮ್ಮ ಮಗನಿಗೆ ಒಳ್ಳೆಯ ಬುದ್ಧಿ ಕಲಿಸಿ’ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ. ಅಷ್ಟಕ್ಕೂ ತೈಮೂರ್​ ಅಲಿ ಖಾನ್​ ಮಾಡಿರುವ ತಪ್ಪು ಏನು? ನೆಟ್ಟಿಗರು ಯಾಕೆ ಈ ರೀತಿ ಕಮೆಂಟ್​ ಮಾಡುತ್ತಿದ್ದಾರೆ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..

ತೈಮೂರ್​ ಅಲಿ ಖಾನ್​ ಸಾರ್ವಜನಿಕವಾಗಿ ಎಲ್ಲೇ ಕಾಣಿಸಿಕೊಂಡರೂ ಆತನ ಫೋಟೋ ಮತ್ತು ವಿಡಿಯೋ ಸೆರೆ ಹಿಡಿಯುವ ಸಲುವಾಗಿ ಮಾಧ್ಯಮದ ಕ್ಯಾಮೆರಾಗಳು ಹಪಹಪಿಸುತ್ತವೆ. ಇದು ಕೆಲವೊಮ್ಮೆ ತೈಮೂರ್​ ಅಲಿ ಖಾನ್​ಗೆ ಕಿರಿಕಿರಿ ಅನಿಸುವುದುಂಟು. ಈಗಲೂ ಹಾಗೆಯೇ ಆಗಿದೆ. ತನ್ನ ಫೋಟೋ ತೆಗೆಯಲು ಬಂದ ಪಾಪರಾಜಿಗಳಿಗೆ ತೈಮೂರ್​ ಕೊಂಚ ಕಟುವಾಗಿ ವಿರೋಧ ವ್ಯಕ್ತಪಡಿಸಿದ್ದಾನೆ. ‘ಕ್ಯಾಮೆರಾ ಆಫ್​ ಮಾಡು’ ಎಂದು ಖಾರವಾಗಿ ನುಡಿದಿದ್ದಾನೆ. ಈ ವಿಡಿಯೋ ವೈರಲ್​ ಆಗುತ್ತಿದೆ.

‘ತಂದೆ-ತಾಯಿ ಕಲಿಸಿದ ರೀತಿಯಲ್ಲೇ ಮಕ್ಕಳು ಮಾತನಾಡುತ್ತವೆ’ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ. ಆದರೆ ‘ನಿಮ್ಮ ಮಗನಿಗೆ ಒಳ್ಳೆಯ ಬುದ್ಧಿ ಕಲಿಸಿ’ ಎಂದು ಕೆಲವು ನೆಟ್ಟಿಗರು ಬಿಟ್ಟಿ ಸಲಹೆ ನೀಡಿದ್ದನ್ನು ಒಂದಷ್ಟು ಮಂದಿ ವಿರೋಧಿಸಿದ್ದಾರೆ. ‘ಎಲ್ಲ ಮಕ್ಕಳು ಕೂಡ ಇದೇ ರೀತಿ ಮಾತನಾಡುವುದು. ಅದರಲ್ಲಿ ತಪ್ಪೇನೂ ಇಲ್ಲ’ ಎಂದು ಕೆಲವರು ತೈಮೂರ್​ ಪರ ಬ್ಯಾಟ್​ ಬೀಸಿದ್ದಾರೆ. ‘ಸೆಲೆಬ್ರಿಟಿಗಳಿಗೆ ಅವರದ್ದೇ ಆದ ಖಾಸಗಿ ಜೀವನ ಇರುತ್ತದೆ. ಅವರ ಖಾಸಗಿತನಕ್ಕೆ ಧಕ್ಕೆ ಆಗುವಂತೆ ನಡೆದುಕೊಳ್ಳಬಾರದು’ ಎಂದು ಪಾಪರಾಜಿಗಳಿಗೆ ಕೆಲವರು ಚಾಟಿ ಬೀಸಿದ್ದಾರೆ.

ಒಂದಿಲ್ಲೊಂದು ಕಾರಣಕ್ಕೆ ಕರೀನಾ ಕಪೂರ್​ ಖಾನ್​ ಅವರು ಟ್ರೋಲ್​ ಆಗುತ್ತಲೇ ಇರುತ್ತಾರೆ. ಇತ್ತೀಚೆಗೆ ಅವರು ಖಾಸಗಿ ಆಭರಣ ಕಂಪನಿಯೊಂದರ ಜಾಹೀರಾತಿನಲ್ಲಿ ನಟಿಸಿದ್ದರು. ಅದರಲ್ಲಿ ಅವರು ಹಣೆಗೆ ಬಿಂದಿ ಹಾಕಿಲ್ಲ ಎನ್ನುವ ಕಾರಣಕ್ಕೆ ಜನರು ಟ್ರೋಲ್​ ಮಾಡಿದ್ದರು. ಅಲ್ಲದೇ ಆ ಜ್ಯುವೆಲ್ಲರಿ ಕಂಪನಿಯ ಆಭರಣಗಳನ್ನು ಬಹಿಷ್ಕರಿಸಿ ಎಂದು ಕೂಡ ಕೆಲವರು ಸೋಶಿಯಲ್​ ಮೀಡಿಯಾದಲ್ಲಿ ಹ್ಯಾಶ್​ಟ್ಯಾಗ್​ ಅಭಿಯಾನ ಆರಂಭಿಸಿದ್ದರು.

ಕರೀನಾ ಕಪೂರ್​ ನಟನೆಯ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ಅವರು ಆಮಿರ್ ಖಾನ್​ಗೆ ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ನಟಿಸಲು ಅವರಿಗೆ 8 ಕೋಟಿ ರೂಪಾಯಿ ಸಂಭಾವನೆ ಸಿಕ್ಕಿದೆ ಎಂದು ಕೆಲವೆಡೆ ವರದಿ ಆಗಿದೆ. ಆಗಸ್ಟ್​ 11ರಂದು ‘ಲಾಲ್​ ಸಿಂಗ್​ ಚಡ್ಡಾ’ ಬಿಡುಗಡೆ ಆಗಲಿದೆ.

ಇದನ್ನೂ ಓದಿ:

‘ತೈಮೂರ್​ ಜತೆಗೂ ಅಕ್ಷಯ್​ ಸಿನಿಮಾ ಮಾಡ್ತಾರೆ’; ಕರೀನಾ​ ಹೇಳಿದ ಈ ಮಾತು ನಿಜವೋ? ತಮಾಷೆಯೋ?

ಬಗೆಬಗೆಯ ಕಾಸ್ಟ್ಯೂಮ್​ನಲ್ಲಿ ಮಿಂಚಿದ ಕರೀನಾ ಕಪೂರ್​; ಇಲ್ಲಿವೆ ಕಲರ್​ಫುಲ್​ ಫೋಟೋಗಳು

Follow us on

Related Stories

Most Read Stories

Click on your DTH Provider to Add TV9 Kannada