AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಕ್ಸ್​ ಆಫೀಸ್​ನಲ್ಲಿ ನೂರಾರು ಕೋಟಿ ಬಾಚಿದ ‘ಬ್ರಹ್ಮಾಸ್ತ್ರ’ ಚಿತ್ರದಿಂದ ರಾಜಮೌಳಿಗೆ ಸಿಕ್ಕ ಹಣ ಎಷ್ಟು?

ಕಳೆದ ಒಂದು ತಿಂಗಳಿಗೂ ಅಧಿಕ ಕಾಲ ‘ಬ್ರಹ್ಮಾಸ್ತ್ರ’ ಸಿನಿಮಾಗೆ ನಿರಂತರ ಪ್ರಚಾರ ನೀಡಲಾಗಿತ್ತು. ಹಲವು ಕಡೆಗಳಲ್ಲಿ ಸುದ್ದಿಗೋಷ್ಠಿ ನಡೆಸಲಾಗಿತ್ತು. ಇದಕ್ಕೆ ರಾಜಮೌಳಿ ಅವರು ಸಾತ್ ನೀಡಿದ್ದಾರೆ.

ಬಾಕ್ಸ್​ ಆಫೀಸ್​ನಲ್ಲಿ ನೂರಾರು ಕೋಟಿ ಬಾಚಿದ ‘ಬ್ರಹ್ಮಾಸ್ತ್ರ’ ಚಿತ್ರದಿಂದ ರಾಜಮೌಳಿಗೆ ಸಿಕ್ಕ ಹಣ ಎಷ್ಟು?
ರಾಜಮೌಳಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 13, 2022 | 6:30 AM

‘ಬ್ರಹ್ಮಾಸ್ತ್ರ’ ಸಿನಿಮಾ (Brahmastra Movie) ಬಾಕ್ಸ್ ಆಫೀಸ್​ನಲ್ಲಿ ನೂರಾರು ಕೋಟಿ ಬಾಚಿಕೊಳ್ಳುತ್ತಿದೆ. ಈ ಸಿನಿಮಾ ಅನೇಕ ದಾಖಲೆಗಳನ್ನು ಪುಡಿ ಮಾಡಿದೆ. ವಿಶ್ವ ಬಾಕ್​ ಆಫೀಸ್​ನಲ್ಲಿ ಈ ಸಿನಿಮಾ ಮೂರೇ ದಿನಕ್ಕೆ 225 ಕೋಟಿ ರೂಪಾಯಿಗೂ ಕಲೆಕ್ಷನ್ ಮಾಡಿದೆ ಅನ್ನೋದು ವಿಶೇಷ. ಈ ಚಿತ್ರವನ್ನು ದಕ್ಷಿಣ ಭಾರತದಲ್ಲಿ ರಾಜಮೌಳಿ (SS Rajamouli) ಪ್ರೆಸೆಂಟ್ ಮಾಡಿದ್ದಾರೆ. ಅದರಲ್ಲೂ ತೆಲುಗು ವರ್ಷನ್​ಗೆ ಅವರ ಕಡೆಯಿಂದ ಹೆಚ್ಚು ಆದ್ಯತೆ ಸಿಕ್ಕಿದೆ. ಅವರು ಈ ಕೆಲಸಕ್ಕಾಗಿ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ.

‘ಬ್ರಹ್ಮಾಸ್ತ್ರ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದೆ. ಹಿಂದಿ ಮಾತ್ರವಲ್ಲದೆ, ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಯಲ್ಲಿ ಈ ಚಿತ್ರ ಬಿಡುಗಡೆ ಆಗಿದೆ. ಈ ಸಿನಿಮಾ ಮೂರು ದಿನಗಳಲ್ಲಿ 225 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ಇದರಲ್ಲಿ ರಾಜಮೌಳಿ ಅವರು ಪಾತ್ರ ಕೂಡ ಇದೆ.

ಕಳೆದ ಒಂದು ತಿಂಗಳಿಗೂ ಅಧಿಕ ಕಾಲ ‘ಬ್ರಹ್ಮಾಸ್ತ್ರ’ ಸಿನಿಮಾಗೆ ನಿರಂತರ ಪ್ರಚಾರ ನೀಡಲಾಗಿತ್ತು. ರಣಬೀರ್ ಕಪೂರ್ ಆ್ಯಂಡ್ ಟೀಂ ದಕ್ಷಿಣ ಭಾರತದ ಮೇಲೂ ಹೆಚ್ಚು ಗಮನ ಹರಿಸಿತ್ತು. ಇಲ್ಲಿ ಹಲವು ಕಡೆಗಳಲ್ಲಿ ಸುದ್ದಿಗೋಷ್ಠಿ ನಡೆಸಿತ್ತು. ಇದಕ್ಕೆ ರಾಜಮೌಳಿ ಅವರು ಸಾತ್ ನೀಡಿದ್ದರು. ರಾಜಮೌಳಿಯಿಂದಾಗಿ ಸಿನಿಮಾಗೆ ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಚಾರ ಸಿಕ್ಕಿದೆ.

ಇದನ್ನೂ ಓದಿ
Image
ಬೈಕಾಟ್ ಟ್ರೆಂಡ್​ಗೆ ಸೆಡ್ಡು ಹೊಡೆದ ‘ಬ್ರಹ್ಮಾಸ್ತ್ರ’; ಬಾಕ್ಸ್ ಆಫೀಸ್ ಉಡೀಸ್​ ಮಾಡಿದ ರಣಬೀರ್​-ಆಲಿಯಾ ಚಿತ್ರ
Image
‘ಇದು ಎಕ್ಸ್​​ಟ್ರಾ ಬಜೆಟ್​​ನ ನಾಗಿಣಿ ಧಾರಾವಾಹಿ’; ‘ಬ್ರಹ್ಮಾಸ್ತ್ರ’ ಸಿನಿಮಾ ನೋಡಿದವರು ಹೀಗಂದ್ರು
Image
KRK ಬಂಧನಕ್ಕೆ ‘ಬ್ರಹ್ಮಾಸ್ತ್ರ’ ಟೀಮ್​ ಕಾರಣ ಎಂದು ಆರೋಪಿಸಿದ ನೆಟ್ಟಿಗರು; ಏನಿದು ಹುನ್ನಾರ?
Image
ಸೆ.9ಕ್ಕೆ ‘ಲಕ್ಕಿ ಮ್ಯಾನ್​’ ವರ್ಸಸ್​ ‘ಬ್ರಹ್ಮಾಸ್ತ್ರ’: ಬುಕ್​ ಮೈ ಶೋನಲ್ಲಿ ಹೇಗಿದೆ ಬಲಾಬಲ?

ರಾಜಮೌಳಿ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಅವರು ಒಂದು ಸಿನಿಮಾ ನಿರ್ದೇಶನ ಮಾಡುತ್ತಾರೆ ಎಂದರೆ ಸಾಕಷ್ಟು ಸಿದ್ಧತೆ ಇರುತ್ತದೆ. ಅದೇ ರೀತಿ ಅವರು ಒಂದು ಸಿನಿಮಾ ಪ್ರೆಸೆಂಟ್ ಮಾಡಲು ಒಪ್ಪಿಕೊಂಡರು ಎಂದರೆ ಆ ಚಿತ್ರದಲ್ಲಿ ಏನೋ ವಿಶೇಷತೆ ಇದೆ ಎಂಬುದು ಅಭಿಮಾನಿಗಳ ಅಭಿಪ್ರಾಯ. ಹೀಗಾಗಿ, ರಾಜಮೌಳಿ ಅವರಿಂದಾಗಿ ಹಲವರು ‘ಬ್ರಹ್ಮಾಸ್ತ್ರ’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ತೆರಳಿದ್ದಾರೆ.

ಇದನ್ನೂ ಓದಿ: ಬಾಯ್ಕಾಟ್ ಟ್ರೆಂಡ್​ ಬ್ರೇಕ್ ಮಾಡಿದ ‘ಬ್ರಹ್ಮಾಸ್ತ್ರ’; ಮೂರು ದಿನಕ್ಕೆ 225 ಕೋಟಿ ರೂಪಾಯಿ ಕಲೆಕ್ಷನ್​

ರಾಜಮೌಳಿ ಅವರು ಈ ಸಿನಿಮಾ ಪ್ರೆಸೆಂಟ್ ಮಾಡಲು 10 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಅನೇಕ ಕಡೆಗಳಿಗೆ ತೆರಳಿ ಈ ಸಿನಿಮಾದ ಪ್ರಚಾರ ಮಾಡುವ ಕೆಲಸ ರಾಜಮೌಳಿಯಿಂದ ಆಗಿದೆ. ಅದಕ್ಕಾಗಿ ಅವರಿಗೆ ಹತ್ತಾರು ಕೋಟಿ ರೂಪಾಯಿ ಸಿಕ್ಕಿದೆ ಎಂದರೆ ಅದು ನಿಜಕ್ಕೂ ಒಳ್ಳೆಯ ಗಳಿಕೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಗ್ರಾಫಿಕ್ಸ್ ಕಳಪೆ ಆಗಿದೆ ಎಂದು ಅನೇಕರು ಟೀಕೆ ಮಾಡಿದ್ದರು. ಈ ರೀತಿ ಸಿನಿಮಾ ಬೆಂಬಲಿಸಿದ ರಾಜಮೌಳಿ ಬಗ್ಗೆಯೂ ಟೀಕೆ ಕೇಳಿ ಬಂದಿತ್ತು.