ನಿಂತೇ ಹೋಯ್ತು ರಾಮ್ ಚರಣ್ ಹೊಸ ಸಿನಿಮಾ?; ರಾಜಮೌಳಿ ಎಫೆಕ್ಟ್​ ಎಂದು ದೂಷಿಸಿದ ಫ್ಯಾನ್ಸ್

ರಾಮ್ ಚರಣ್ ಸದ್ಯ ಶಂಕರ್ ಜತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ತಾತ್ಕಾಲಿಕವಾಗಿ ‘ಆರ್​ಸಿ 15’ ಎಂದು ಹೆಸರು ಇಡಲಾಗಿದೆ. ಈ ಚಿತ್ರದ ಕೆಲಸಗಳು ಭರದಿಂದ ಸಾಗುತ್ತಿವೆ. ಇದರ ಜತೆಗೆ ರಾಮ್ ಚರಣ್ ಅವರು 16ನೇ ಸಿನಿಮಾ ಒಪ್ಪಿಕೊಂಡಿದ್ದರು. ಈ ಚಿತ್ರಕ್ಕೆ ಕಂಟಕ ಎದುರಾಗಿದೆ.

ನಿಂತೇ ಹೋಯ್ತು ರಾಮ್ ಚರಣ್ ಹೊಸ ಸಿನಿಮಾ?; ರಾಜಮೌಳಿ ಎಫೆಕ್ಟ್​ ಎಂದು ದೂಷಿಸಿದ ಫ್ಯಾನ್ಸ್
ರಾಮ್ ಚರಣ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 31, 2022 | 4:40 PM

ಎಸ್​.ಎಸ್​. ರಾಜಮೌಳಿ (SS Rajamouli) ಜತೆ ಸಿನಿಮಾ ಮಾಡಿದರೆ ದುರಾದೃಷ್ಟ ಕೈ ಹಿಡಿಯುತ್ತದೆ ಎಂಬ ಒಂದು ವಿಚಿತ್ರ ನಂಬಿಕೆ ಒಂದಷ್ಟು ಜನರಲ್ಲಿ ಇದೆ. ಇದು ಅನೇಕ ಬಾರಿ ಸಾಬೀತು ಆಗಿರುವುದರಿಂದ ಈ ಮಾತು ಹೆಚ್ಚು ಪ್ರಚಲಿತಕ್ಕೆ ಬಂದಿದೆ. ರಾಜಮೌಳಿ ಜತೆ ಸಿನಿಮಾ ಮಾಡಿದ ನಂತರ ಬೇರೆ ಯಾರ ಜತೆ ಸಿನಿಮಾ ಮಾಡಿದರೂ ಆ ಚಿತ್ರ ಸೋಲುತ್ತದೆ ಎಂಬುದು ಸಾಬೀತಾಗಿದೆ. ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್’ ಸಿನಿಮಾದಲ್ಲಿ ನಟಿಸಿದ ಜ್ಯೂ.ಎನ್​ಟಿಆರ್ ಹಾಗೂ ರಾಮ್ ಚರಣ್ ಫ್ಯಾನ್ಸ್​ಗೆ ಇದೇ ರೀತಿಯ ಭಯ ಕಾಡುತ್ತಿದೆ. ಹೀಗಿರುವಾಗಲೇ ರಾಮ್​ ಚರಣ್ (Ram Charan) ಫ್ಯಾನ್ಸ್​ಗೆ ಬೇಸರದ ಸುದ್ದಿ ಒಂದು ಸಿಕ್ಕಿದೆ.

ರಾಮ್ ಚರಣ್ ಸದ್ಯ ಶಂಕರ್ ಜತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ತಾತ್ಕಾಲಿಕವಾಗಿ ‘ಆರ್​ಸಿ 15’ ಎಂದು ಹೆಸರು ಇಡಲಾಗಿದೆ. ಈ ಚಿತ್ರದ ಕೆಲಸಗಳು ಭರದಿಂದ ಸಾಗುತ್ತಿವೆ. ಇದರ ಜತೆಗೆ ರಾಮ್ ಚರಣ್ ಅವರು 16ನೇ ಸಿನಿಮಾ ಒಪ್ಪಿಕೊಂಡಿದ್ದರು. ಸೂಪರ್ ಹಿಟ್ ಸಿನಿಮಾ ‘ಜೆರ್ಸಿ’ ನಿರ್ದೇಶಕ ಗೌತಮ್ ತಿಣ್ಣನುರಿ ಜತೆ ರಾಮ್​ ಚರಣ್​ ಕೆಲಸ ಮಾಡಬೇಕಿತ್ತು. ಆದರೆ, ಈ ಸಿನಿಮಾ ಅರ್ಧಕ್ಕೆ ನಿಲ್ಲುವ ಸೂಚನೆ ಸಿಕ್ಕಿದೆ.

ರಾಮ್ ಚರಣ್ ಹಾಗೂ ಗೌತಮ್ ಮಧ್ಯೆ ಒಂದು ಹಂತದ ಮಾತುಕತೆ ನಡೆದಿತ್ತು. ಕಥೆಯ ಎಳೆಯನ್ನು ಗೌತಮ್ ಅವರು ರಾಮ್​ ಚರಣ್​ಗೆ ಹೇಳಿದ್ದರು. ಈಗ ಸ್ಕ್ರಿಪ್ಟ್​​ನ ಅಂತಿಮ ವರ್ಷನ್​​ಅನ್ನು ರಾಮ್ ಚರಣ್ ಕೇಳಿದ್ದಾರೆ. ಆದರೆ, ಇದು ಅವರಿಗೆ ಖುಷಿ ನೀಡಲಿಲ್ಲ. ಈ ಕಾರಣಕ್ಕೆ ಕಥೆಯಲ್ಲಿ ಮತ್ತೆ ಬದಲಾವಣೆ ಮಾಡಲು ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ಕಾರಣಕ್ಕೆ ಸಿನಿಮಾದ ಕೆಲಸಗಳು ಮುಂದಕ್ಕೆ ಹೋಗಿವೆ. ಕಥೆಯಲ್ಲಿ ಬದಲಾವಣೆ ಮಾಡಿದ ನಂತರವೂ ರಾಮ್ ಚರಣ್​ಗೆ ಇಷ್ಟವಾಗದಿದ್ದರೆ ಸಿನಿಮಾ ನಿಂತೇ ಹೋಗುವ ಸಾಧ್ಯತೆ ಇದೆ ಎಂದು ವರದಿ ಆಗಿದೆ.

ಇದನ್ನೂ ಓದಿ
Image
RRR OTT Release: ‘ಆರ್​ಆರ್​ಆರ್​’ ಚಿತ್ರ ಒಟಿಟಿಯಲ್ಲಿ ಪ್ರಸಾರ ಆಗೋದು ಯಾವಾಗ? ಆ ದಿನಾಂಕಕ್ಕಾಗಿ ಕಾದಿರುವ ಫ್ಯಾನ್ಸ್​
Image
RRR 2: ಆರ್​ಆರ್​ಆರ್​ ಸೀಕ್ವೆಲ್​ ಮಾಡಲು ಉತ್ಸಾಹ ತೋರಿದ ರಾಜಮೌಳಿ, ರಾಮ್​ ಚರಣ್​, ಜ್ಯೂ. ಎನ್​ಟಿಆರ್​
Image
‘RRR’ ಯಶಸ್ಸು; ಚಿತ್ರತಂಡಕ್ಕೆ 18 ಲಕ್ಷ ಮೌಲ್ಯದ ಚಿನ್ನದ ನಾಣ್ಯ ಉಡುಗೊರೆ ನೀಡಿದ ನಟ ರಾಮ್ ಚರಣ್
Image
RRR Twitter Review: ನಿದ್ದೆ ಬಿಟ್ಟು ‘ಆರ್​ಆರ್​ಆರ್​’ ಸಿನಿಮಾ ನೋಡಿ ಬಂದ ಪ್ರೇಕ್ಷಕರು ಏನಂದ್ರು?

ಇದನ್ನೂ ಓದಿ: Salman Khan: ರಾಮ್​ ಚರಣ್​ ಮನೆಯಲ್ಲಿ ಸಲ್ಮಾನ್​ ಖಾನ್​, ಪೂಜಾ ಹೆಗ್ಡೆ; ಅತಿಥಿಗಳ ಜತೆಯಲ್ಲಿ ಪೋಸ್​ ನೀಡಿದ ಉಪಾಸನಾ

ರಾಮ್​ ಚರಣ್ ಅವರ 16ನೇ ಸಿನಿಮಾಗೆ ಯುವಿ ಕ್ರಿಯೇಷನ್ಸ್ ಬಂಡವಾಳ ಹೂಡಬೇಕಿತ್ತು. ಪಾತ್ರವರ್ಗದ ಆಯ್ಕೆ ಕೂಡ ಪ್ರಗತಿಯಲ್ಲಿತ್ತು. ಹೀಗಿರುವಾಗಲೇ ಸಿನಿಮಾ ನಿಂತಿರುವ ಸುದ್ದಿ ಹರಿದಾಡುತ್ತಿದೆ. ಒಂದು ವರ್ಗದ ಫ್ಯಾನ್ಸ್ ಇದಕ್ಕೆ ರಾಜಮೌಳಿ ಅವರನ್ನು ದೂಷಿಸುತ್ತಿದ್ದಾರೆ. ರಾಜಮೌಳಿ ಜತೆ ರಾಮ್ ಚರಣ್ ಸಿನಿಮಾ ಮಾಡಿದ ಕಾರಣಕ್ಕೇ ಈ ರೀತಿ ಆಗಿದೆ ಎಂದು ಆರೋಪಿಸುತ್ತಿದ್ದಾರೆ. ಸದ್ಯ ಈ ಚಿತ್ರದ ಬಗ್ಗೆ ಫ್ಯಾನ್ಸ್​​ಗೆ ಸಿನಿಮಾ ತಂಡದವರೇ ಅಪ್​ಡೇಟ್ ನೀಡಬೇಕಿದೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ