AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Salman Khan: ರಾಮ್​ ಚರಣ್​ ಮನೆಯಲ್ಲಿ ಸಲ್ಮಾನ್​ ಖಾನ್​, ಪೂಜಾ ಹೆಗ್ಡೆ; ಅತಿಥಿಗಳ ಜತೆಯಲ್ಲಿ ಪೋಸ್​ ನೀಡಿದ ಉಪಾಸನಾ

Ram Charan | Upasana: ಸಲ್ಮಾನ್​ ಖಾನ್​, ಪೂಜಾ ಹೆಗ್ಡೆ, ದಗ್ಗುಬಾಟಿ ವೆಂಕಟೇಶ್​ ಮುಂತಾದ ಸ್ಟಾರ್​ ಕಲಾವಿದರು ಒಂದು ಕಡೆ ಸೇರಿ ಸಮಯ ಕಳೆದಿದ್ದಾರೆ. ರಾಮ್​ ಚರಣ್​ ಮತ್ತು ಅವರ ಪತ್ನಿ ಉಪಾಸನಾ ಅವರು ಎಲ್ಲರಿಗೂ ಆತಿಥ್ಯ ನೀಡಿದ್ದಾರೆ.

Salman Khan: ರಾಮ್​ ಚರಣ್​ ಮನೆಯಲ್ಲಿ ಸಲ್ಮಾನ್​ ಖಾನ್​, ಪೂಜಾ ಹೆಗ್ಡೆ; ಅತಿಥಿಗಳ ಜತೆಯಲ್ಲಿ ಪೋಸ್​ ನೀಡಿದ ಉಪಾಸನಾ
ರಾಮ್​ ಚರಣ್​, ಪೂಜಾ ಹೆಗ್ಡೆ, ಉಪಾಸನಾ, ಸಲ್ಮಾನ್​ ಖಾನ್​, ದಗ್ಗುಬಾಟಿ ವೆಂಕಟೇಶ್
TV9 Web
| Edited By: |

Updated on: Jun 27, 2022 | 7:28 AM

Share

ಬಾಲಿವುಡ್ ವರ್ಸಸ್ ಸೌತ್​ ಸಿನಿಮಾ​ ಎಂಬ ಸ್ಪರ್ಧೆ ಇರುವುದು ಬಾಕ್ಸ್​ ಆಫೀಸ್​ನಲ್ಲಿ ಮಾತ್ರ. ಆದರೆ ಎಲ್ಲ ಚಿತ್ರರಂಗದ ಸೆಲೆಬ್ರಿಟಿಗಳ ನಡುವೆ ಪರಸ್ಪರ ಸ್ನೇಹ ಇದೆ. ಅದಕ್ಕೆ ಅನೇಕ ಘಟನೆಗಳು ಸಾಕ್ಷಿ ಒದಗಿಸುತ್ತವೆ. ಬಾಲಿವುಡ್​ನ ಸ್ಟಾರ್​ ನಟ ಸಲ್ಮಾನ್​ ಖಾನ್​ (Salman Khan) ಅವರು ದಕ್ಷಿಣದ ಅನೇಕ ಸೆಲೆಬ್ರಿಟಿಗಳ ಜೊತೆಗೆ ಬಾಂಧವ್ಯ ಹೊಂದಿದ್ದಾರೆ. ಇತ್ತೀಚೆಗೆ ಅವರು ರಾಮ್​ ಚರಣ್​ (Ram Charan) ನಿವಾಸಕ್ಕೆ ಭೇಟಿ ನೀಡಿದ್ದಾರೆ. ಆ ಸಂದರ್ಭದ ಫೋಟೋ ವೈರಲ್​ ಆಗಿದೆ. ಸಲ್ಮಾನ್​ ಖಾನ್​ ಜೊತೆಗೆ ಪೂಜಾ ಹೆಗ್ಡೆ (Pooja Hegde), ದಗ್ಗುಬಾಟಿ ವೆಂಕಟೇಶ್​ ಕೂಡ ಸಾಥ್​ ನೀಡಿದ್ದಾರೆ. ಅಭಿಮಾನಿಗಳು ಈ ಫೋಟೋವನ್ನು ಲೈಕ್​ ಮಾಡುತ್ತಿದ್ದಾರೆ. ಒಂದೇ ಫ್ರೇಮ್​ನಲ್ಲಿ ತಮ್ಮ ನೆಚ್ಚಿನ ಸೆಲೆಬ್ರಿಟಿಗಳನ್ನು ಕಂಡು ಫ್ಯಾನ್ಸ್​ ಖುಷಿ​ ಆಗಿದ್ದಾರೆ.

ಸಲ್ಮಾನ್​ ಖಾನ್​ ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚಿಗೆ ಬಿಡುಗಡೆ ಆದ ಅವರ ಚಿತ್ರಗಳು ಹೇಳಿಕೊಳ್ಳುವಂತಹ ಕಲೆಕ್ಷನ್​ ಮಾಡಿಲ್ಲವಾದರೂ ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಈಗ ಅವರು ‘ಕಭಿ ಈದ್​ ಕಭಿ ದಿವಾಲಿ’ ಸಿನಿಮಾದ ಶೂಟಿಂಗ್​ನಲ್ಲಿ ತೊಡಗಿಕೊಂಡಿದ್ದಾರೆ. ಅವರ ಜೊತೆ ಪೂಜಾ ಹೆಗ್ಡೆ ಕೂಡ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್​ ಸಲುವಾಗಿ ಸಲ್ಮಾನ್​ ಖಾನ್​ ಹೈದರಾಬಾದ್​ಗೆ ಬಂದಿದ್ದಾರೆ. ಈ ವೇಳೆ ಅವರು ರಾಮ್​ ಚರಣ್​ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಸಲ್ಮಾನ್ ಖಾನ್​ ಮತ್ತು ಚಿರಂಜೀವಿ ಅವರ ಕುಟುಂಬದ ನಡುವೆ ಆತ್ಮೀಯತೆ ಇದೆ. ಚಿರಂಜೀವಿ ನಟನೆಯ ‘ಗಾಡ್​ ಫಾದರ್​’ ಸಿನಿಮಾದಲ್ಲಿ ಸಲ್ಲು ಒಂದು ಅತಿಥಿ ಪಾತ್ರ ಮಾಡಲಿದ್ದಾರೆ. ಸಲ್ಮಾನ್​ ಖಾನ್​ ಅವರ ‘ಕಭಿ ಈದ್​ ಕಭಿ ದಿವಾಲಿ’ ಸಿನಿಮಾದಲ್ಲಿ ದಗ್ಗುಬಾಟಿ ವೆಂಕಟೇಶ್​ ನಟಿಸುತ್ತಿದ್ದಾರೆ. ಹಾಗಾಗಿ ಈ ಎಲ್ಲ ಕಲಾವಿದರು ಒಂದು ಕಡೆ ಸೇರಿ ಸಮಯ ಕಳೆದಿದ್ದಾರೆ. ರಾಮ್​ ಚರಣ್​ ಮತ್ತು ಅವರ ಪತ್ನಿ ಉಪಾಸನಾ ಅವರು ಎಲ್ಲರಿಗೂ ಆತಿಥ್ಯ ನೀಡಿದ್ದಾರೆ.

ಇದನ್ನೂ ಓದಿ
Image
ಸೆಟ್​​ನಲ್ಲಿ ಸಲ್ಲುನ ಭೇಟಿ ಮಾಡೋಕೆ ಬಂದ ರಾಮ್​ ಚರಣ್​ಗೆ ಸಿಕ್ತು ಹಿಂದಿ ಸಿನಿಮಾ ಆಫರ್
Image
ತಂಗಿ ಗಂಡನ ಜೊತೆಗೆ ಸಲ್ಮಾನ್​ ಖಾನ್​ ಕಿರಿಕ್​; ಭಾವನ ಸಿನಿಮಾದಿಂದಲೇ ಹೊರನಡೆದ ಆಯುಷ್​ ಶರ್ಮಾ?
Image
ಬಹಿರಂಗ ವೇದಿಕೆಯಲ್ಲಿ ಸಲ್ಲು ಇದೆಂಥಾ ಕೆಲಸ; ಪೂಜಾ ಹೆಗ್ಡೆ ವಿಚಾರದಲ್ಲಿ ಸಿಕ್ಕಾಪಟ್ಟೆ ಮುಜುಗರ
Image
ಸಲ್ಮಾನ್​ ಖಾನ್ ಫಾರ್ಮ್​ಹೌಸ್​ ಬೆಲೆ 80 ಕೋಟಿ ರೂ.! ಸಲ್ಲು ಮೆಚ್ಚಿನ ಈ ಸ್ಥಳದಲ್ಲಿ ಏನೆಲ್ಲ ಇದೆ?

ಟಾಲಿವುಡ್​ ಸೆಲೆಬ್ರಿಟಿಗಳ ಜೊತೆಗೆ ಬಾಲಿವುಡ್​ ಮಂದಿಗೆ ಒಳ್ಳೆಯ ನಂಟು ಇದೆ. ಕೆಲವೇ ತಿಂಗಳ ಹಿಂದೆ ಅಕ್ಕಿನೇನಿ ನಾಗ ಚೈತನ್ಯ ಅವರ ಮನೆಗೆ ಆಮಿರ್​ ಖಾನ್​ ಭೇಟಿ ನೀಡಿದ್ದರು. ಆ ಸಂದರ್ಭದ ಫೋಟೋಗಳು ಕೂಡ ವೈರಲ್​ ಆಗಿದ್ದವು. ಆಮಿರ್​ ಖಾನ್​ ನಟನೆಯ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದಲ್ಲಿ ನಾಗ ಚೈತನ್ಯ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಇತ್ತೀಚೆಗೆ ‘ವಿಕ್ರಮ್​’ ಸಿನಿಮಾ ಗೆದ್ದಿದ್ದಕ್ಕೆ ಚಿರಂಜೀವಿ ಅವರು ಕಮಲ್​ ಹಾಸನ್​ಗೆ ಒಂದು ಅಭಿನಂದನಾ ಕಾರ್ಯಕ್ರಮ ಏರ್ಪಡಿಸಿದ್ದರು. ಅದಕ್ಕೆ ಸಲ್ಮಾನ್ ಖಾನ್​ ಮುಖ್ಯ ಅತಿಥಿಯಾಗಿ ಬಂದಿದ್ದರು.

ಇದನ್ನೂ ಓದಿ: No Entry 2: ಸಲ್ಮಾನ್​ ಖಾನ್​ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ಸಮಂತಾ? ‘ನೋ ಎಂಟ್ರಿ’ಯಲ್ಲೂ ಸಿಗಬಹುದು ಎಂಟ್ರಿ

ಅವಕಾಶ ಇಲ್ಲದಾಗ 2 ಸಾವಿರ ರೂ. ಕೊಟ್ಟು ಸುಳ್ಳು ಸುದ್ದಿ ಮಾಡಿಸಿದ್ದ ಸಲ್ಮಾನ್​ ಖಾನ್​; ಒಪ್ಪಿಕೊಂಡು ಕಣ್ಣೀರಿಟ್ಟ ನಟ

Follow Us
TV9 Web
TV9 Web

TV9 Kannada

Read More
ಪೊಲೀಸರ ಮೇಲೆ ಒತ್ತಡ ಹಾಕಿರೋ ಸಿಎಂಗೆ ನಾಚಿಕೆಯಾಗಬೇಕು: ಬಿಎಸ್​ವೈ ವಾಗ್ದಾಳಿ
ಪೊಲೀಸರ ಮೇಲೆ ಒತ್ತಡ ಹಾಕಿರೋ ಸಿಎಂಗೆ ನಾಚಿಕೆಯಾಗಬೇಕು: ಬಿಎಸ್​ವೈ ವಾಗ್ದಾಳಿ
ಕುವೈತ್ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ
ಕುವೈತ್ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ