ರಾಜಮೌಳಿ ಕಾಲಿಗೆ ನಮಸ್ಕರಿಸಿದ ರಣಬೀರ್ ಕಪೂರ್; ಪಬ್ಲಿಸಿಟಿ ಸ್ಟಂಟ್ಸ್ ಎಂದ ನೆಟ್ಟಿಗರು

ಬೈಕಾಟ್ ಟ್ರೆಂಡ್​ನಿಂದ ‘ಲಾಲ್​ ಸಿಂಗ್ ಚಡ್ಡಾ’ ಸೇರಿ ಹಲವು ಸಿನಿಮಾಗಳು ಸಂಕಷ್ಟಕ್ಕೆ ಸಿಲುಕಿವೆ. ಈಗ ‘ಬ್ರಹ್ಮಾಸ್ತ್ರ’ ಸಿನಿಮಾಗೂ ಸಂಕಷ್ಟ ಎದುರಾಗುವ ಸೂಚನೆ ಸಿಕ್ಕಿದೆ.

ರಾಜಮೌಳಿ ಕಾಲಿಗೆ ನಮಸ್ಕರಿಸಿದ ರಣಬೀರ್ ಕಪೂರ್; ಪಬ್ಲಿಸಿಟಿ ಸ್ಟಂಟ್ಸ್ ಎಂದ ನೆಟ್ಟಿಗರು
ರಾಜಮೌಳಿ-ರಣಬೀರ್ (ಚಿತ್ರ ಕೃಪೆ: ಯೋಗೇಶ್ ಶಾ)
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Aug 25, 2022 | 4:20 PM

ಇತ್ತೀಚೆಗೆ ಬಾಲಿವುಡ್ (Bollywood)​ ಮಂದಿ ಮಾಡುವ ಎಲ್ಲ ವಿಚಾರಗಳು ಟೀಕೆಗೆ ಗುರಿಯಾಗುತ್ತಿವೆ. ತಮಗೆ ಎದುರಾದ ಟೀಕೆಯ ವಿರುದ್ಧ ಧ್ವನಿ ಎತ್ತಿದರೆ ಬೈಕಾಟ್ ಟ್ರೆಂಡ್ ಆರಂಭ ಆಗಿ ಬಿಡುತ್ತದೆ. ಈ ಬಗ್ಗೆ ಬಾಲಿವುಡ್​ ಮಂದಿಗೆ ಭಯ ಕಾಡಲು ಶುರು ಆಗಿದೆ. ಇತ್ತೀಚೆಗೆ ಆಲಿಯಾ ಭಟ್ ಅವರು ನೀಡಿದ್ದ ಹೇಳಿಕೆ ಟೀಕೆಗೆ ಗುರಿಯಾಗಿತ್ತು. ಈ ಕಾರಣದಿಂದ ಅವರ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ (Brahmastra Movie) ಬೈಕಾಟ್ ಮಾಡುವಂತೆ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಆರಂಭ ಆಗಿದೆ. ಹೆಂಡತಿ ಮಾಡಿದ ತಪ್ಪಿನಿಂದ ರಣಬೀರ್ ಕಪೂರ್ ಅವರು ಟೀಕೆಗೆ ಗುರಿಯಾಗಿದ್ದಾರೆ.

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಮೊದಲ ಪಾರ್ಟ್ ಸೆಪ್ಟೆಂಬರ್​ನಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡುವ ಕೆಲಸ ಆಗುತ್ತಿದೆ. ದಕ್ಷಿಣ ಭಾರತದಲ್ಲೂ ರಣಬೀರ್ ಅವರು ಸಿನಿಮಾ ಪ್ರಮೋಷನ್ ಮಾಡುತ್ತಿದ್ದಾರೆ. ನಿರ್ದೇಶಕ ರಾಜಮೌಳಿ ಅವರ ಕಾಲಿಗೆ ನಮಸ್ಕರಿಸಲು ಹೋದ ಕಾರಣದಿಂದಲೂ ರಣಬೀರ್ ಟ್ರೋಲ್ ಆಗಿದ್ದಾರೆ!

ಇದನ್ನೂ ಓದಿ
Image
Alia Bhatt: ‘ರಣವೀರ್​ ಸಿಂಗ್​ ಜತೆ ಏನು ಬೇಕಾದ್ರೂ ಮಾತಾಡ್ತೀನಿ’; ಮದುವೆ ಬಳಿಕ ಆಲಿಯಾ ಭಟ್​ ಅಚ್ಚರಿಯ ಹೇಳಿಕೆ
Image
Alia Bhatt: ಪ್ರೆಗ್ನೆಂಟ್​ ಆಗಿದ್ದು ಆಲಿಯಾ ಭಟ್​, ಆದರೆ ಸುದ್ದಿ ಕೇಳಿ ಕಣ್ಣೀರು ಹಾಕಿದ್ದು ಕರಣ್​ ಜೋಹರ್​
Image
Alia Bhatt Pregnant: ಆಲಿಯಾ ಭಟ್​ ಪ್ರೆಗ್ನೆಂಟ್​; ರಣಬೀರ್​ ಕಪೂರ್​ ಜತೆ ಮದುವೆ ಆಗಿ ಎರಡೂವರೆ ತಿಂಗಳಲ್ಲಿ ಗುಡ್​ ನ್ಯೂಸ್​
Image
ವಿಮಾನ ನಿಲ್ದಾಣದಲ್ಲಿ ಗಾಬರಿಯಿಂದ ಓಡಿ ಹೋದ ನಟಿ ಆಲಿಯಾ ಭಟ್​; ವೈರಲ್​ ವಿಡಿಯೋದ ಸತ್ಯಾಂಶ ಏನು?

ರಾಜಮೌಳಿ ಅವರು ‘ಬ್ರಹ್ಮಾಸ್ತ್ರ’ ಸಿನಿಮಾವನ್ನು ದಕ್ಷಿಣ ಭಾರತದ ಭಾಷೆಗಳಲ್ಲಿ ಹಂಚಿಕೆ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಅವರು ರಣಬೀರ್ ಕಪೂರ್ ಜತೆ ಸೇರಿ ಸಿನಿಮಾ ಪ್ರಚಾರದಲ್ಲಿ ಭಾಗಿ ಆಗುತ್ತಿದ್ದಾರೆ. ನಾನಾ ಕಡೆಗಳಲ್ಲಿ ತೆರಳಿ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಈ ಮೂಲಕ ದಕ್ಷಿಣದ ಮಂದಿಯನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ.

View this post on Instagram

A post shared by yogen shah (@yogenshah_s)

ಇತ್ತೀಚೆಗೆ ರಾಜಮೌಳಿ, ರಣಬೀರ್ ಹಾಗೂ ಚಿತ್ರದ ಸಹ ನಟ ನಾಗಾರ್ಜುನ ಅಕ್ಕಿನೇನಿ ಅವರು ಚೆನ್ನೈಗೆ ತೆರಳಿದ್ದರು. ರಾಜಮೌಳಿ ಅವರನ್ನು ಭೇಟಿ ಮಾಡುವ ಸಂದರ್ಭದಲ್ಲಿ ಕಾಲಿಗೆ ನಮಸ್ಕರಿಸೋಕೆ ತೆರಳಿದ್ದಾರೆ ರಣಬೀರ್ ಕಪೂರ್. ಅವರ ಕಾರ್ಯಕ್ಕೆ ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಆದರೆ, ಒಂದು ವರ್ಗದ ಜನರು ಅವರನ್ನು ಟೀಕಿಸಿದ್ದಾರೆ. ಇದೆಲ್ಲವೂ ಪಬ್ಲಿಸಿಟ ಸ್ಟಂಟ್ಸ್ ಎಂದು ಟೀಕೆ ಮಾಡಿದ್ದಾರೆ.

ಇದನ್ನೂ ಓದಿ: ಕೊನೇ ಕ್ಷಣದಲ್ಲಿ ಅಮಿತ್ ಶಾ ಭೇಟಿಯಿಂದ ಹಿಂದೆ ಸರಿದ ರಾಜಮೌಳಿ? ಇದಕ್ಕಿದೆ ದೊಡ್ಡ ಕಾರಣ

ಬೈಕಾಟ್ ಟ್ರೆಂಡ್​ನಿಂದ ‘ಲಾಲ್​ ಸಿಂಗ್ ಚಡ್ಡಾ’ ಸೇರಿ ಹಲವು ಸಿನಿಮಾಗಳು ಸಂಕಷ್ಟಕ್ಕೆ ಸಿಲುಕಿವೆ. ಈಗ ‘ಬ್ರಹ್ಮಾಸ್ತ್ರ’ ಸಿನಿಮಾಗೂ ಸಂಕಷ್ಟ ಎದುರಾಗುವ ಸೂಚನೆ ಸಿಕ್ಕಿದೆ. ಆದರೆ, ಚಿತ್ರತಂಡದವರು ನಿರಂತರವಾಗಿ ಪ್ರಚಾರ ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ.

Published On - 4:06 pm, Thu, 25 August 22

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ