ಖ್ಯಾತ ನಿರ್ದೇಶಕ, ನಿರ್ಮಾಪಕ ಸಾವನ್ ಕುಮಾರ್ ನಿಧನ; ಕಂಬನಿ ಮಿಡಿದ ಸಲ್ಮಾನ್ ಖಾನ್

ಸಾವನ್ ಅವರು 1967ರಲ್ಲಿ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ‘ನೌನಿಹಾಲ್’ ಅವರ ಮೊದಲ ಸಿನಿಮಾ, 1972ರಲ್ಲಿ ‘ಗೋಮ್ಟಿ ಕೆ ಕಿನಾರೆ’ ಸಿನಿಮಾ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದರು.

ಖ್ಯಾತ ನಿರ್ದೇಶಕ, ನಿರ್ಮಾಪಕ ಸಾವನ್ ಕುಮಾರ್ ನಿಧನ; ಕಂಬನಿ ಮಿಡಿದ ಸಲ್ಮಾನ್ ಖಾನ್
ಸಾವನ್ ಕುಮಾರ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 25, 2022 | 9:03 PM

ಬಾಲಿವುಡ್​ನ ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ಸಾವನ್ ಕುಮಾರ್ (Saawan Kumar Tak) ಅವರು ಇಂದು (ಆಗಸ್ಟ್ 25) ನಿಧನ ಹೊಂದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಸಾವನ್ ಅವರು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರನ್ನು ಮುಂಬೈನ ಕೋಕಿಲಾಬೆನ್ ಧೀರುಭಾಯ್ ಅಂಬಾನಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬುಧವಾರ ಅವರ ಆರೋಗ್ಯ ಸ್ಥಿತಿ ಗಂಭೀರ ಆಗಿತ್ತು. ಚಿಕಿತ್ಸೆ ಫಲಕಾರಿ ಆಗದೆ ಅವರು ಕೊನೆಯುಸಿರು ಎಳೆದಿದ್ದಾರೆ.

ಗುರುವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಸಾವನ್ ನಿಧನ ಹೊಂದಿದರು. ‘ಸಾವನ್ ಇಂದು ಸಂಜೆ ನಿಧನ ಹೊಂದಿದ್ದಾರೆ. ಅವರ ಹೃದಯ ಕೆಲಸ ಮಾಡುವುದು ನಿಲ್ಲಿಸಿದೆ’ ಎಂದು ಪಿಟಿಐಗೆ ಅವರ ಸೋದರಳಿಯ ನವೀನ್ ತಿಳಿಸಿದ್ದಾರೆ.

ಸಾವನ್ ಅವರು 1967ರಲ್ಲಿ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ‘ನೌನಿಹಾಲ್’ ಅವರ ಮೊದಲ ಸಿನಿಮಾ, 1972ರಲ್ಲಿ ‘ಗೋಮ್ಟಿ ಕೆ ಕಿನಾರೆ’ ಸಿನಿಮಾ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದರು. ಇದು ಮೀನಾ ಕುಮಾರಿ ಅವರ ಕೊನೆಯ ಸಿನಿಮಾ ಆಗಿತ್ತು. ರಾಜೇಶ್ ಖನ್ನಾ ನಟನೆಯ ‘ಸೌತನ್​’ 1983ರಲ್ಲಿ ರಿಲೀಸ್ ಆಯಿತು. ಈ ಚಿತ್ರವನ್ನು ನಿರ್ಮಾಣ ಮಾಡಿ, ನಿರ್ದೇಶನ ಮಾಡಿದ್ದರು ಸಾವನ್. ಈ ಚಿತ್ರ ಹಿಟ್ ಆಯಿತು. ಇದರಿಂದ ಅವರ ಖ್ಯಾತಿ ಹೆಚ್ಚಿತು.

ಇದನ್ನೂ ಓದಿ
Image
‘ವಿಕ್ರಾಂತ್​ ರೋಣ’ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಕತ್ರಿನಾ ಜಪ ಮಾಡಿದ ಸಲ್ಮಾನ್​ ಖಾನ್​; ಕಾರಣ ಏನು?
Image
Salman Khan: ‘ವಿಕ್ರಾಂತ್​ ರೋಣ’ ವೇದಿಕೆಯಲ್ಲಿ ಸುದೀಪ್​-ಸಲ್ಮಾನ್​​; ಕಿಚ್ಚನ ಜತೆಗಿನ ಬಾಂಧವ್ಯದ ಬಗ್ಗೆ ಸಲ್ಲು ಮಾತು
Image
Kichcha Sudeep: ಮುಂಬೈ, ಚೆನ್ನೈನಿಂದಲೂ ಸುದೀಪ್​ ಕಟೌಟ್​ಗೆ ಬಂತು ಬೇಡಿಕೆ; ಹೇಗಿದೆ ನೋಡಿ ‘ವಿಕ್ರಾಂತ್​ ರೋಣ’ ಕ್ರೇಜ್​
Image
Kichcha Sudeep: ಕೆಲವೇ ಗಂಟೆಗಳಲ್ಲಿ ಕೋಟ್ಯಂತರ ಬಾರಿ ವೀಕ್ಷಣೆ ಕಂಡ ‘ವಿಕ್ರಾಂತ್​ ರೋಣ’ ಟ್ರೇಲರ್​

ಸಲ್ಮಾನ್ ಖಾನ್ ಹಾಗೂ ಸಾವನ್ ಒಟ್ಟಾಗಿ ಹಲವು ಸಿನಿಮಾ ಮಾಡಿದ್ದಾರೆ. ‘ಸನಮ್ ಬೇವಫಾ’ (1991), ‘ಚಾಂದ್ ಕಾ ತುಕ್ಡಾ’ (1994) ಹಾಗೂ ‘ಸಾವನ್​’ (2003) ಚಿತ್ರಗಳಲ್ಲಿ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದ್ದರು. ಈ ಕಾರಣದಿಂದ ಸಲ್ಮಾನ್ ಖಾನ್ ಹಾಗೂ ಸಾವನ್ ಜತೆ ಒಳ್ಳೆಯ ಒಡನಾಟ ಇತ್ತು. ಹೀಗಾಗಿ, ಅವರ ನಿಧನದ ನಂತರದಲ್ಲಿ ಸಲ್ಮಾನ್ ಖಾನ್ ಅವರು ಸಂತಾಪ ಸೂಚಿಸಿದ್ದಾರೆ.

ಸಾವನ್ ಅವರು ಕೇವಲ ನಿರ್ದೇಶನ ಹಾಗೂ ನಿರ್ಮಾಣ ಮಾತ್ರ ಸೀಮಿತವಾಗಿರಲಿಲ್ಲ. ಅವರು ಗೀತ ಸಾಹಿತಿ ಆಗಿಯೂ ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದರು. ‘ಸೌತನ್​’ ಸಿನಿಮಾದ ‘ಜಿಂದಗಿ ಪ್ಯಾರ್ ಕಾ ಗೀತ್ ಹೈ..’ ಮೊದಲಾದ ಹಿಟ್ ಹಾಡುಗಳನ್ನು ಅವರು ನೀಡಿದ್ದರು.

ಇದನ್ನೂ ಓದಿ: ಉದ್ದ ಕೂದಲು, ರಗಡ್ ಲುಕ್; ಲಡಾಖ್​ನಲ್ಲಿ ನಿಂತು ಫೋಟೋ ಹಂಚಿಕೊಂಡ ಸಲ್ಮಾನ್ ಖಾನ್

ಸಾವನ್ ನಿಧನಕ್ಕೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸಂತಾಪ ಸೂಚಿಸುತ್ತಿದ್ದಾರೆ. ಅವರ ಅಂತ್ಯಸಂಸ್ಕಾರ ಮುಂಬೈನಲ್ಲೇ ನಡೆಯಲಿದೆ. ಇದರ ಸಮಯ ಇನ್ನಷ್ಟೇ ನಿಗದಿ ಆಗಬೇಕಿದೆ. ಸಾವನ್ ನಿಧನದಿಂದ ಬಾಲಿವುಡ್​ಗೆ ನಷ್ಟ ಉಂಟಾಗಿದೆ.